ನವದೆಹಲಿ: ಎರಡು ದಿನಗಳ ಹಿಂದೆಯಷ್ಟೇ ಸಿಬಿಐ ದಾಳಿಗೆ ಒಳಗಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್‌ಐಆರ್ ದಾಖಲಿಸಲಾದ ವ್ಯಕ್ತಿಗಳ ಪಟ್ಟಿಯಲ್ಲಿರುವ ಮನೀಶ್ ಸಿಸೋಡಿಯಾ ಹಾಗೂ ಇತರೆ 8 ಮಂದಿ ವಿರುದ್ಧ ಇಂದು ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಜೊತೆಗೆ ಸಿಸೋಡಿಯಾ ವಿದೇಶ ಪ್ರಯಾಣ ಮಾಡದಂತೆ ಸಿಬಿಐ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಖ್ಯಾತ ಗಾಯಕಿ ನಯ್ಯಾರ ನೂರ್ ನಿಧನ
Advertisement
Advertisement
8 ಖಾಸಗಿ ಆರೋಪಿಗಳ ವಿರುದ್ಧವಷ್ಟೇ ಲುಕ್‌ಔಟ್ ನೋಟೀಸ್ ಹೊರಡಿಸಲಾಗಿದೆಯೇ ಹೊರತು ನಾಲ್ವರು ಸಮಾಜ ಸೇವಕರ ವಿರುದ್ಧ ಅಲ್ಲ. ಸಮಾಜ ಸೇವಕರು ದೇಶ ಬಿಟ್ಟು ಹೋಗುವುದಿಲ್ಲವಾದ್ದರಿಂದ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸುವ ಅವಶ್ಯಕತೆ ಸದ್ಯಕ್ಕಿಲ್ಲ ಎಂದೂ ಸಿಬಿಐ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಕೇಜ್ರಿವಾಲ್ ಅವರೇ ದೆಹಲಿ ಮದ್ಯ ಅಕ್ರಮದ ಕಿಂಗ್‌ಪಿನ್, ಬಂಧನ ಹತ್ತಿರದಲ್ಲೇ ಇದೆ: ಬಿಜೆಪಿ
Advertisement
ಉದ್ಯಮಿ ವಿಜಯ್ ನಾಯರ್ ಸೇರಿದಂತೆ ಒಟ್ಟು 9 ಖಾಸಗಿ ವ್ಯಕ್ತಿಗಳ ಹೆಸರನ್ನು ಎಫ್‌ಐಆರ್‌ನಲ್ಲಿ ಆರೋಪಿಗಳೆಂದು ಹೆಸರಿಸಿದೆ. ಇನ್ನೊಂದೆಡೆ, ಉದ್ಯಮಿ ವಿಜಯ್ ನಾಯರ್, ಬ್ರಿಂಡ್ಕೊ ಸ್ಪಿರಿಟ್ಸ್ ಮಾಲೀಕ ಮನದೀಪ್ ಧಾಲ್, ಇಂಡೋಸ್ಪಿರಿಟ್‌ನ ಎಂ.ಡಿ ಸಮೀರ್ ಮಹೇಂದ್ರು ಮತ್ತು ಹೈದರಾಬಾದ್ ಮೂಲದ ಅರುಣ್ ರಾಮಚಂದ್ರ ಪಿಳ್ಳೈ ವಿರುದ್ಧ ಲುಕ್‌ಔಟ್ ಸರ್ಕ್ಯುಲರ್ ಹೊರಡಿಸಲಾಗಿದೆ.
Advertisement
ದೆಹಲಿ ಸರ್ಕಾರದ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾದ 15 ವ್ಯಕ್ತಿಗಳು ಮತ್ತು ಘಟಕಗಳಲ್ಲಿ ಸಿಸೋಡಿಯಾ ಕೂಡ ಸೇರಿದ್ದಾರೆ. ಅದಕ್ಕಾಗಿ ಶುಕ್ರವಾರ ಸಿಸೋಡಿಯಾ ಅವರ ನಿವಾಸ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು.