InternationalLatestLeading NewsMain Post

ಪಾಕಿಸ್ತಾನ ಖ್ಯಾತ ಗಾಯಕಿ ನಯ್ಯಾರ ನೂರ್‌ ನಿಧನ

ಇಸ್ಲಮಾಬಾದ್: ‘ಬುಲ್‌ಬುಲ್-ಎ-ಪಾಕಿಸ್ತಾನ’ ಎಂದೇ ಖ್ಯಾತರಾಗಿದ್ದ ಹಿರಿಯ ಗಾಯಕಿ ನಯ್ಯಾರ ನೂರ್ (71) ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣ ನಯ್ಯಾರ ಅವರು ಶನಿವಾರ ನಿಧನರಾದರು. ನಯ್ಯಾರ್‌ ಅವರ ಸೋದರಳಿಯ ರಾಣಾ ಜೈದಿ ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಯ್ಯಾರ ಅವರು ಪತಿ ಶೆಹರ್ಯಾರ್ ಜೈದಿ ಮತ್ತು ಇಬ್ಬರು ಪುತ್ರರಾದ ಅಲಿ, ಜಾಫರ್ ಅವರನ್ನು ಅಗಲಿದ್ದಾರೆ. ಇದನ್ನೂ ಓದಿ: ಪುಟಿನ್‌ ಬ್ರೈನ್‌ ಎಂದೇ ಹೆಸರಾಗಿದ್ದ ರಷ್ಯಾ ನಾಯಕನ ಪುತ್ರಿ ಕಾರ್‌ ಬಾಂಬ್‌ ಸ್ಫೋಟದಿಂದ ಸಾವು

ನನ್ನ ಪ್ರೀತಿಯ ಚಿಕ್ಕಮ್ಮ (ತಾಯಿ) ನಯ್ಯಾರ ನೂರ್ ಅವರ ನಿಧನವನ್ನು ನಾನು ಭಾರವಾದ ಹೃದಯದಿಂದ ಘೋಷಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸುಮಧುರ ಕಂಠಕ್ಕಾಗಿ ‘ಬುಲ್‌ಬುಲ್-ಎ-ಪಾಕಿಸ್ತಾನ’ ಎಂಬ ಬಿರುದು ನೀಡಲಾಗಿತ್ತು ಎಂದು ಜೈದಿ ವಿಷಾದದಿಂದ ನುಡಿದಿದ್ದಾರೆ.

ನಯ್ಯಾರ್‌ ಅವರ ನಿಧನವು ಸಂಗೀತ ಜಗತ್ತಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಗಜಲ್ ಇರಲಿ, ಗೀತೆಯೇ ಇರಲಿ, ನಯ್ಯಾರ ನೂರ್ ಏನೇ ಹಾಡಿದರೂ ಅಚ್ಚುಕಟ್ಟಾಗಿ ಹಾಡುತ್ತಿದ್ದರು. ಸಂಗೀತ ಕ್ಷೇತ್ರಕ್ಕೆ ಶೂನ್ಯ ಆವರಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ನದಿ, ಕೆರೆಗಳಲ್ಲಿ ಸ್ನಾನ ಮಾಡೋ ಮುನ್ನ ಹುಷಾರ್ – ವಿದೇಶದಲ್ಲಿ ಪತ್ತೆಯಾಗಿದೆ ಮೆದುಳು ತಿನ್ನುವ ಡೆಡ್ಲಿ ವೈರಸ್

ನೂರ್ ಅವರು ಭಾರತದ ಅಸ್ಸಾಂ ರಾಜ್ಯದಲ್ಲಿ 1950 ರಲ್ಲಿ ಜನಿಸಿದರು. ನಂತರ ಅವರು 1950 ರ ದಶಕದ ಅಂತ್ಯದಲ್ಲಿ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋದರು. ಮಾಧುರ್ಯದ ತೀವ್ರ ಉತ್ಸಾಹಿಯಾಗಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. 1968 ರಲ್ಲಿ ರೇಡಿಯೋ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಹಾಡಿದ್ದರು.

‘ರಂಗ್ ಬರ್ಸಾತ್ ನಯ್ ಭಾರಯ್ ಕುಛ್ ತೌ’, ‘ಫಿರ್ ಸಾವನ್ ರೂತ್ ಕಿ ಪವನ್ ಚಲಿ ತುಮ್ ಯಾದ್ ಆಯೆ’, ‘ಏ ಇಷ್ಕ್ ಹಮೇ ಬರ್ಬಾದ್‌ನ ಕರ್’, ‘ಬರ್ಖಾ ಬರ್ಸಾಯ್ ಛತ್ ಪರ್’ ಮತ್ತು ‘ಮೇ ತೇರಾಯ್ ಸಪ್ನಾಯ್ ದೇಖುನ್’ ನೂರ್ ಅವರ ಕೆಲವು ಭಾವಪೂರ್ಣ ಗಜಲ್‌ಗಳು. ಇದನ್ನೂ ಓದಿ: ಭಾರತದೊಂದಿಗಿನ ಶಾಶ್ವತ ಶಾಂತಿಗೆ ಯುದ್ಧವೊಂದೇ ಆಯ್ಕೆಯಾಗಿಲ್ಲ: ಪಾಕ್ ಪ್ರಧಾನಿ

Live Tv

Leave a Reply

Your email address will not be published.

Back to top button