ಬೆಂಗಳೂರು: ಸಿಬಿಐ(CBI) ವರದಿಯನ್ನು ನಾವು ಒಪ್ಪುವುದಿಲ್ಲ. ಪರೇಶ್ ಮೇಸ್ತಾದು(Paresh Mesta) ಕೊಲೆಯೇ. ಇವತ್ತು ಏನಾದ್ರು ಸಾಕ್ಷಿ ಸಿಗದಿದ್ದರೆ ಅದಕ್ಕೆ ಸಿದ್ದರಾಮಯ್ಯ(Siddaramaiah) ಸರ್ಕಾರವೇ ಕಾರಣ ಎಂದು ಬಿಜೆಪಿಯ(BJP) ಪರಿಷತ್ ಸದಸ್ಯ, ಪ್ರಧಾನ ಕಾರ್ಯದರ್ಶಿ ರವಿಕುಮಾರ್(Ravi Kumar) ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾಕ್ಷಿ ನಾಶ ಮಾಡಿದ್ದು ಹಾಗೂ ಪಿಎಫ್‌ಐ ಪೋಷಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ವಿಧಾನಸಭೆ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಕಾಂಗ್ರೆಸ್‌ನವರು ಹೇಳುವುದೆಲ್ಲ ಸತ್ಯ ಅಲ್ಲ ಎಂದು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು. ಇದನ್ನೂ ಓದಿ: ಬಿಜೆಪಿ ಗೆದ್ದಿರೋ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‍ನಂತಹ ಅಮಾಯಕರ ರಕ್ತ ಇದೆ: ಸಿದ್ದರಾಮಯ್ಯ
Advertisement
Advertisement
ಮಗನನ್ನು ಕೊಲೆ ಮಾಡಲಾಗಿದೆ ಎಂದು ಪರೇಶ್ ಮೇಸ್ತಾ ತಂದೆಯೇ ಹೇಳಿದ್ದಾರೆ. ಇಡೀ ರಾಜ್ಯದ ಜನ ಇದು ಕೊಲೆ ಅಂತ ಹೇಳುತ್ತಿದ್ದಾರೆ. ನಾವು ಸಿಬಿಐ ವರದಿಯನ್ನು ಒಪ್ಪುವುದಿಲ್ಲ. ಸಂಪೂರ್ಣ ವರದಿ ಬಂದ ಮೇಲೆ ನಾವು ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪರೇಶ್ ಮೇಸ್ತಾ ಹತ್ಯೆಯಲ್ಲ, ಅದು ಆಕಸ್ಮಿಕ ಸಾವು – ಸಿಬಿಐ ವರದಿ ಸಲ್ಲಿಕೆ
Advertisement
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅರೆಸ್ಟ್ ಆಗಿದ್ದರು. ವಿನಯ್ ಕುಲಕರ್ಣಿ ಯಾರು? ರುದ್ರೇಶ್ ಸೇರಿದಂತೆ 30 ಹಿಂದೂ ಕಾರ್ಯಕರ್ತರ ಕೊಲೆ ಆಯ್ತು. ಈ ಕೊಲೆಗಳಿಗೆ ಕಾಂಗ್ರೆಸ್ ಕಾರಣ. ಪಿಎಫ್‌ಐ ಸೇರಿದಂತೆ ಅನೇಕ ಸಂಘಟನೆಗಳ ಪರ ಕಾಂಗ್ರೆಸ್ ಸರ್ಕಾರ ಇತ್ತು. ಸಿದ್ದರಾಮಯ್ಯ ಸರ್ಕಾರ ಯಾವ ಆಧಾರದಲ್ಲಿ ಪಿಎಫ್‌ಐ ಕೇಸ್ ವಾಪಸ್ ಪಡೆದರು ಎಂದು ಪ್ರಶ್ನೆ ಮಾಡಿದರು.
Advertisement
ಡಿವೈಎಸ್‌ಪಿ ಗಣಪತಿ ಹತ್ಯೆಗೆ ಕೆಜೆ ಜಾರ್ಜ್ ಕಾರಣ. ಆದರೆ ಅಂದು ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಸಾಕ್ಷಿ ನಾಶ ಮಾಡಿದ್ದರಿಂದ ಬಿ ರಿಪೋರ್ಟ್ ಬಂತು. ಡಿಕೆ ರವಿ ಪ್ರಕರಣದಲ್ಲೂ ಸಿದ್ದರಾಮಯ್ಯ ಸರ್ಕಾರ ಸಾಕ್ಷಿ ನಾಶ ಮಾಡಿದೆ. ಈಗ ಪರೇಶ್ ಮೇಸ್ತಾ ಪ್ರಕರಣದಲ್ಲೂ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ. ಈ ಕಾರಣಕ್ಕೆ ಸಿಬಿಐ ವರದಿಯನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.