ಐಎಂಎ ವಂಚನೆ ಪ್ರಕರಣ: 200 ಕೋಟಿಯ ಫಾರ್ಮ್ ಹೌಸ್, ಬಂಗಲೆಗಳು ಪತ್ತೆ!

Public TV
2 Min Read
IMA copy

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಗೆ ಈಗ ನಡುಕ ಶುರುವಾಗಿದೆ.

ಐಎಂಎ ಬಗ್ಗೆ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿ 13 ಮಂದಿಯ ಮೇಲೆ ಎಫ್‍ಐಆರ್ ಮೇಲೆ ದಾಖಲು ಮಾಡಿದ್ದಾರೆ. ಸಿಬಿಐ ಅಧಿಕಾರಿಗಳು ಡಿಸಿ ವಿಜಯ್ ಶಂಕರ್ ಮನೆ ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಬೇನಾಮಿ ಆಸ್ತಿ ಪತ್ರ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಬೇನಾಮಿ ಆಸ್ತಿಯ ಹುಡುಕಿ ಹೊರಟ ಸಿಬಿಐ ಅಧಿಕಾರಿಗಳಿಗೆ ಶಾಕ್ ದೊರೆತಿದ್ದು, ಚಿತ್ತೂರಿನಲ್ಲಿ ಬೇನಾಮಿ ಪ್ರಾಪರ್ಟಿ ಪತ್ತೆಯಾಗಿದೆ. ಅಲ್ಲದೆ 200 ಕೋಟಿಯ ಫಾರ್ಮ್ ಹೌಸ್, ಬಂಗಲೆಗಳು ಕೂಡ ಪತ್ತೆಯಾಗಿದೆ.

IMA 1 Vijay shankar

ಡಿಸಿಪಿ ಮನೆಯಲ್ಲಿ ಐಎಂಎಗೆ ಸಂಬಂಧಿಸಿದ ಡೈರಿ ಕೂಡ ಸಿಕ್ಕಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಡೈರಿಯಲ್ಲಿ ಎಂಬತ್ತೆರಡು ಕೋಟಿಯ ಡೀಲ್ ಕಹಾನಿ ಇದ್ದು, ಐಎಂಎಯಿಂದ ಆರು ಬಾರಿ ಪಡೆದ ಹಣದ ಲೆಕ್ಕಾಚಾರ ಬರೆದಿಡಲಾಗಿದೆ.

ಇದೇ ರೀತಿ ಐಜಿ ಮನೆಯಲ್ಲೂ ಐಎಂಎ ಕಂಪೆನಿಯಿಂದ ಹಣ ಪಡೆದಿದ್ದ ದಾಖಲೆಗಳು ಪತ್ತೆಯಾಗಿದೆ. ಹಾಗಾಗಿ ಇದೀಗ 8 ಪೊಲೀಸ್ ಅಧಿಕಾರಿಗಳ ಮೇಲೆ ಸಿಬಿಐ ನೋಂದಣಿ ಪ್ರಮಾಣ ಪತ್ರ (ಆರ್ ಸಿ) ದಾಖಲಿಸಿಕೊಂಡಿದೆ.

IMA 2

ಯಾರ ಮೇಲೆ ದಾಳಿ?
ನವೆಂಬರ್ 8ರ ಶುಕ್ರವಾರದಂದು ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿ ಹೇಮಂತ್ ನಿಂಬಾಳ್ಕರ್, ಸಿಐಡಿ ಪೊಲೀಸ್ ಉಪವರಿಷ್ಠಾಧಿಕಾರಿ ಇ.ಬಿ. ಶ್ರೀಧರ್, ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾಧಿಕಾರಿ ಎಂ. ರಮೇಶ್, ಕಮರ್ಷಿಯಲ್ ಸ್ಟ್ರೀಟ್ ಠಾಣೆಯ ಉಪನಿರೀಕ್ಷಕ ಗೌರಿ ಶಂಕರ್, ಬೆಂಗಳೂರು ಉತ್ತರ ಉಪವಿಭಾಗದ ಎಸಿಪಿ ಹಾಗೂ ಕೆಪಿಐಡಿ ಕಾಯ್ದೆಯ ಅಧಿಕಾರಿ ಎಲ್.ಸಿ. ನಾಗರಾಜ್, ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ವಿಜಯ್ ಶಂಕರ್, ಉತ್ತರ ಉಪವಿಭಾಗದ ಲೆಕ್ಕಿಗ ಮಂಜುನಾಥ್, ಬಿಡಿಎ ಮುಖ್ಯ ಎಂಜಿನಿಯರ್ ಪಿಡಿ ಕುಮಾರ್, ಬೆಂಗಳೂರು ಉತ್ತರ ವಿಭಾಗದ ಲೆಕ್ಕಿಗ ಮಂಜುನಾಥ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.

ಅಜಯ್ ಹಿಲೋರಿ ಮೂಲತಃ ಉತ್ತರ ಪ್ರದೇಶದ ಮೀರತ್‍ನವರಾಗಿದ್ದು ಅವರ ಅಲ್ಲಿನ ನಿವಾಸದ ಮೇಲೆ ದಾಳಿ ನಡೆದಿದೆ. ದಾಳಿ ಮುಗಿಸಿ ಪಂಚನಾಮೆ ಮಾಡಿ ಸಿಬಿಐ ಅಧಿಕಾರಿಗಳು ತೆರಳಿದ್ದರು. ಸಿಬಿಐ ವಿಚಾರಣೆ ಸಮಯದಲ್ಲಿ ಐಎಂಐ ಮುಖ್ಯಸ್ಥ ಮನ್ಸೂರ್ ಖಾನ್ ಹೇಳಿಕೆಯ ಆಧಾರದ ಮೇಲೆ ಈ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆದಿದೆ. ಸರ್ಕಾರಿ ಅಧಿಕಾರಿಗಳು ತನಿಖೆಯ ಸಂದರ್ಭದಲ್ಲಿ ಐಎಂಎ ಪರವಾಗಿ ವರದಿ ನೀಡಲು ಸಹಕರಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸಿಬಿಐ ಹೇಳಿತ್ತು.

IMA Mansoor Khan

ಯಾರ ಮೇಲೆ ಏನು ಆರೋಪ?
ನಿಂಬಾಳ್ಕರ್- ಹಣ ಪಡದು ಕ್ಲೀನ್‍ಚಿಟ್ ಕೊಟ್ಟಿದ್ಧಾರೆ ಎಂಬ ಆರೋಪ
ಅಜಯ್ ಹಿಲೋರಿ- ಪೂರ್ವ ವಲಯ ಡಿಸಿಪಿಯಾಗಿದ್ದಾಗ 20 ಕೋಟಿ ಹಣ 25 ಕೆಜಿ ಚಿನ್ನ ಪಡೆದಿದ್ದಾರೆಂಬ ಆರೋಪ
ಶ್ರೀಧರ್- ಸಿಐಡಿಯಲ್ಲಿ ಕ್ಲೀನ್‍ಚಿಟ್ ಕೊಟ್ಟ ತನಿಖಾಧಿಕಾರಿ
ಎಸಿಪಿ ರಮೇಶ್- ಪ್ರಕರಣ ದಾಖಲಿಸಿಕೊಳ್ಳದೇ ಪರವಾಗಿ ಕೆಲಸ ಮಾಡಿದ್ದು
ರಮೇಶ್ – ಪ್ರಕರಣ ದಾಖಲಿಸಿಕೊಳ್ಳದೇ ಪರವಾಗಿ ಕೆಲಸ ಮಾಡಿದ್ದು

ಗೌರಿಶಂಕರ್ – ಪ್ರಕರಣ ದಾಖಲಿಸಿಕೊಳ್ಳದೇ ಪರವಾಗಿ ಕೆಲಸ ಮಾಡಿದ್ದು
ಎಸಿ ನಾಗರಾಜ್ – ಸರ್ಕಾರಿ ಇಲಾಖೆಯಲ್ಲಿ ಕ್ಲೀನ್‍ಚಿಟ್ ಕೊಡೊಕೆ 5 ಕೋಟಿ ಪಡೆದಿದ್ದಾರೆಂಬ ಆರೋಪ
ವಿಜಯ್‍ಕುಮಾರ್ – 3 ಕೋಟಿ ಪಡೆದಿದ್ದಾರೆಂಬ ಆರೋಪ
ಮಂಜುನಾಥ್ – 2 ಕೋಟಿ ಪಡೆದಿದ್ದಾರೆಂಬ ಆರೋಪ

Share This Article
Leave a Comment

Leave a Reply

Your email address will not be published. Required fields are marked *