ಮಂಡ್ಯ: ಕಾವೇರಿ ಹೋರಾಟ ತೀವ್ರಗೊಂಡಿದೆ. ಈ ಹೋರಾಟದಲ್ಲಿ ಭಾಗಿಯಾಗದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿಗೆ ಕಾವೇರಿ ನೀರು (Cauvery Water) ಸರಬರಾಜು ಮಾಡುವ ಪಂಪ್‍ಹೌಸ್‍ಗೆ ಮುತ್ತಿಗೆ ಹಾಕಲಾಗಿದೆ.
ಬೆಂಗಳೂರಿಗೆ ನೀರು ಸರಬರಾಜು ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿವಿಧ ಕನ್ನಡಪರ ಸಂಘಟನೆಗಳು ಮಳವಳ್ಳಿಯ ತೊರೆಕಾಡನಹಳ್ಳಿಯಲ್ಲಿರುವ ಪಂಪ್‍ಹೌಸ್ ಮುತ್ತಿಗೆ ಹಾಕಿವೆ. ಇದನ್ನೂ ಓದಿ: ಇಸ್ಲಾಮಿಕ್ ಪ್ರಾರ್ಥನೆ ಬಳಿಕ ಹಂದಿ ಮಾಂಸ ಸೇವನೆ; ಟಿಕ್‌ಟಾಕ್ ಸ್ಟಾರ್‌ಗೆ 2 ವರ್ಷ ಜೈಲು
Advertisement
Advertisement
ಬೆಂಗಳೂರಿಗೆ ಸಂಪೂರ್ಣವಾಗಿ ಕಾವೇರಿ ನೀರು ನಿಲ್ಲಿಸಿ ರೈತರ ಬೆಳೆಗೆ ನೀರು ಕೊಡುವಂತೆ ಸಂಘಟನೆಗಳು ಒತ್ತಾಯಿಸಿವೆ. ತಮಿಳುನಾಡಿಗೆ ನೀರು ಹರಿಸುತ್ತಿದ್ರೂ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿಲ್ಲ. ನೀರು ಪೂರೈಕೆ ಸ್ಥಗಿತ ಮಾಡಿದ್ರೆ ಬೆಂಗಳೂರು ಮಂದಿ ಬುದ್ಧಿ ಕಲಿತ್ತಾರೆಂದು ಕಿಡಿಕಾರಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಪಂಪ್ ಹೌಸ್‍ಗೆ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. 2 ಡಿಎಆರ್ ತುಕಡಿ ಸೇರಿದಂತೆ 100ಕ್ಕೂ ಹೆಚ್ಚು ಪೆÇಲೀಸರನ್ನು ನಿಯೋಜನೆ ಮಾಡಲಾಗಿದೆ.
Advertisement
ಕನ್ನಡಪರ ಸಂಘಟನೆಯು ತೊರೆಕಾಡನಹಳ್ಳಿಯ ನೀರು ಸರಬರಾಜು ಘಟಕಕ್ಕೆ ಮುತ್ತಿಗೆ ಹಾಕಲು ಯತ್ನಿಸಿವೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದಿದ್ದು, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಗೇಟು ಹತ್ತಿ ಒಳಪ್ರವೇಶಿಸಲು ಸಂಘಟನೆಯವರು ಮುಂದಾಗಿದ್ದು, ತಕ್ಷಣ ಪೊಲೀಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದಿದ್ದಾರೆ.
Advertisement
Web Stories