ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ 6-7 ಟಿಎಂಸಿ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇಂದು ದೆಹಲಿಯಲ್ಲಿ ಅಧ್ಯಕ್ಷ ಎಸ್.ಕೆ ಹಲ್ದರ್ ನೇತೃತ್ವದಲ್ಲಿ 13 ನೇ ಸಾಮಾನ್ಯ ಸಭೆ ನಡೆಸಲಾಯಿತು. ಸಭೆಯಲ್ಲಿ ತಮಿಳುನಾಡು ಜೂನ್ ಜುಲೈ ಅಗಸ್ಟ್ ತಿಂಗಳ ಬಾಕಿ ನೀರು ಬಿಡುಗಡೆ ಒತ್ತಾಯಿಸಿತು.
Advertisement
ಮೂರು ತಿಂಗಳ ಅವಧಿಯಲ್ಲಿ ಕರ್ನಾಟಕ 86 ಟಿಎಂಸಿ ನೀರು ಬಿಡಬೇಕಿತ್ತು. ಆದರೆ ಈವರೆಗೂ 57-57 ಟಿಎಂಸಿ ನೀರು ಬಿಡುಗಡೆ ಮಾಡಿದೆ. ಬಾಕಿ 30.6 ಟಿಎಂಸಿ ನೀರು ಹರಿಸಲು ತಮಿಳುನಾಡು ಪ್ರಾಧಿಕಾರದ ಮುಂದೆ ಮನವಿ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ತಿಂಗಳು ಉತ್ತಮ ಮಳೆಯಾಗಿರುವ ಕಾರಣ 14,000 ಕ್ಯೂಸೆಕ್ ನೀರು ಹರಿಸಿದೆ. ಆದರೆ ತಮಿಳುನಾಡು ಇದನ್ನು ಪರಿಗಣಿಸಲಿಲ್ಲ. ಉತ್ತಮ ಮಳೆಯಾದ್ರೆ ಬಾಕಿ ನೀರು ನೀಡುವುದಾಗಿ ಹೇಳಿತು.
Advertisement
Advertisement
ಅಧ್ಯಕ್ಷ ಎಸ್.ಕೆ ಹಲ್ದರ್ ಮಳೆಯ ಪ್ರಮಾಣ, ಕೊರತೆ ಎಲ್ಲವನ್ನೂ ತಾಳೆ ಹಾಕಿ ತಮಿಳುನಾಡಿಗೆ ಸೆಪ್ಟೆಂಬರ್ ನಲ್ಲಿ 6-7 ಟಿಎಂಸಿ ನೀರು ನೀಡಬೇಕು, ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಉತ್ತಮ ಮಳೆಯಾಗಲಿದ್ದು, ಮುಂದೆ ತಮಿಳುನಾಡು ಪಾಲಿನ ಎಲ್ಲ ನೀರನ್ನು ನೀಡಬೇಕು ಎಂದು ಸೂಚಿಸಿದರು.
Advertisement
ಇನ್ನು ಸಭೆಯಲ್ಲಿ ಕರ್ನಾಟಕ ಮೇಕೆದಾಟು ಆಣೆಕಟ್ಟು ನಿರ್ಮಾಣದ ಬಗ್ಗ ಪ್ರಸ್ತಾಪ ಮಾಡಿತು. ಆದರೆ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವ ಕಾರಣ ಈ ಬಗ್ಗೆ ಚರ್ಚೆ ಮಾಡದಂತೆ ಕೇರಳ, ಪುದುಚೇರಿ ಮತ್ತು ತಮಿಳುನಾಡು ಒತ್ತಾಯ ಮಾಡಿದವು. ಈ ಹಿನ್ನೆಲೆ ಈ ಚರ್ಚೆಯನ್ನು ಮುಂದೂಡಲಾಯಿತು. ಕರ್ನಾಟಕವೂ ವೆಲ್ಲಾರು – ಗುಂಡಾರು ನದಿ ಜೋಡಣೆಗೆ ವಿರೋಧ ವ್ಯಕ್ತಪಡಿಸಿತು. ಯೋಜನೆಗೆ ಅನುಮತಿ ನೀಡದಂತೆ ಮನವಿ ಮಾಡಿತು. ಇದಕ್ಕೆ ತಮಿಳುನಾಡು ವಿರೋಧ ಹಿನ್ನಲೆ ಈ ಚರ್ಚೆಯನ್ನು ಮುಂದೂಡಲಾಯಿತು. ಇದನ್ನೂ ಓದಿ: ಕಾಬೂಲ್ ತೊರೆಯುವ ಮುನ್ನ 73 ಏರ್ಕ್ರಾಫ್ಟ್ ನಿಷ್ಕ್ರಿಯಗೊಳಿಸಿದ ಅಮೆರಿಕ ಸೈನಿಕರು
ಈ ಎರಡು ವಿಚಾರಗಳು ಮುಂದಿನ ಸಭೆಯಲ್ಲಿ ಚರ್ಚೆಗೆ ಬರುವ ನಿರೀಕ್ಷೆ ಇದೆ. ಸೆಪ್ಟೆಂಬರ್ 24ಕ್ಕೆ ಮುಂದಿನ ಸಭೆಗೆ ದಿನಾಂಕ ನಿಗದಿ ಮಾಡಿದೆ. ಸಭೆ ಬಳಿಕ ಮಾತನಾಡಿದ ಅಧ್ಯಕ್ಷ ಎಸ್.ಕೆ ಹಲ್ದರ್ ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ನೇರ ರಾಜ್ಯಗಳ ಸಹಮತ ಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: 2027ಕ್ಕೆ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ ಕರ್ನಾಟಕದ ನ್ಯಾ. ಬಿ.ವಿ.ನಾಗರತ್ನ