ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡು (Tamil Nadu) ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದೆ.
ಕರ್ನಾಟಕ ಮತ್ತು ತಮಿಳುನಾಡು ಪ್ರತಿನಿಧಿಗಳ ಜೊತೆ CWRC ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದೆ. ಸೆ.13ರಂದು ಹದಿನೈದು ದಿನ ನಿತ್ಯ 5,000 ಕ್ಯೂಸೆಕ್ ಕಾವೇರು ನೀರು (Cauvery Water) ಹರಿಸುವಂತೆ ನೀಡಿದ ಆದೇಶ ಇಂದಿಗೆ ಅಂತ್ಯವಾಗುತ್ತಿರುವ ಹಿನ್ನೆಲೆ ಈ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
Advertisement
Advertisement
ಈ ಚರ್ಚೆಯ ವೇಳೆ ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ 123 ಟಿಎಂಸಿ ಹರಿಸಬೇಕಿತ್ತು. ಕರ್ನಾಟಕ (Karnataka) ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಹೀಗಾಗಿ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ. ಇದನ್ನೂ ಓದಿ: Bengaluru Bandh: ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್‍ನಲ್ಲಿ ಇಲಿ!
Advertisement
ಸಮಿತಿ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಾರದು. ಅಕ್ಟೋಬರ್ 22 ಟಿಎಂಸಿ ನೀರನ್ನು ಸಹ ಕರ್ನಾಟಕ ಹರಿಸಬೇಕು. ರಾಜ್ಯಕ್ಕೆ ಹರಿಸಬೇಕಾದ ನೀರನ್ನು ಸಮಿತಿ ಕೊಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಬೇಡಿಕೆ ಇಟ್ಟಿದೆ. ಎರಡೂ ರಾಜ್ಯಗಳಲ್ಲಿ ರೈತರ ಹೋರಾಟ ತೀವ್ರವಾಗುತ್ತಿರುವ ಹೊತ್ತಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹೈವೋಲ್ಟೇಜ್ ಸಭೆ ನಡೆಯುತ್ತಿದೆ.
Advertisement
Web Stories