ಬೆಂಗಳೂರು: ಬಂದ್ ಮಾಡಿದರೆ ಬ್ರ್ಯಾಂಡ್ ಬೆಂಗಳೂರಿಗೆ (Brand Bengaluru) ಧಕ್ಕೆ ಆಗುತ್ತದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಬೆಂಗಳೂರಿನಲ್ಲಿ ಬಂದ್‌ಗೆ (Bengaluru Bandh) ಕರೆ, ಬೆಂಬಲ ನೀಡಿದಾಗ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ ಆಗಲಿಲ್ವೇ? ನೀವು ಇದ್ದಾಗ ಸರಿ, ಈಗ ತಪ್ಪು ಹೇಗಾಗುತ್ತದೆ ಎಂಬ ಆಕ್ರೋಶವು ವ್ಯಕ್ತವಾಗುತ್ತಿದೆ.
ಡಿಕೆಶಿ ಹೇಳಿದ್ದೇನು?
ಬೆಂಗಳೂರು ಗೌರವವನ್ನು ಹಾಳು ಮಾಡಿದರೆ ನೀವೇ ನಿಮ್ಮ ಹೃದಯಕ್ಕೆ ಚುಚ್ಚಿಕೊಂಡಂತೆ. ನಾವು ಎಲ್ಲಾ ತರದ ಸಹಕಾರ ರೈತರಿಗೆ ಕೊಟ್ಟಿದ್ದೇವೆ ಕಾಪಾಡಿದ್ದೇವೆ. ಮುಂದೆ ಕೂಡ ಕಾಪಾಡುತ್ತೇವೆ. ಇದರಿಂದ ನಿಮಗೆ ಏನು ಲಾಭ? ಏನಾದರೂ ಲಾಭ ಆಗುವುದಾದರೆ ಏನ್ ಬೇಕಾದರೂ ಮಾಡಿ. ನಿಮ್ಮ ಪರವಾಗಿ, ರಾಜ್ಯದ ಪರವಾಗಿ ಹೋರಾಟ ಮಾಡಲು ನಾವಿದ್ದೇವೆ. ದಯವಿಟ್ಟು ಅಂತಹ ತಪ್ಪುಗಳನ್ನು ಮಾಡಲು ಹೋಗಬೇಡಿ. ಕರ್ನಾಟಕ (Karnataka) ಸರ್ಕಾರನೇ ರಾಜ್ಯದ ಹಿತ ಕಾಪಾಡುತ್ತದೆ.
ಇದೊಂದು ಬೇಜವಾಬ್ದಾರಿ ಹೇಳಿಕೆ
ಕಾವೇರಿ ನೀರು (Cauvery Water) ಬೆಂಗಳೂರಿನ ಜೀವನಾಡಿ. ಕಾವೇರಿ ಸಂಕಷ್ಟದ ಸಂದರ್ಭದಲ್ಲಿ ಬೆಂಗಳೂರಿಗರು ಬೆಂಬಲಿಸಬೇಕು ಎಂಬುದು ಕನ್ನಡಪರ ಹಾಗೂ ರೈತ ಪರ ಸಂಘಟನೆಗಳ ವಾದ. ಈ ವಿಚಾರದಲ್ಲಿ ಬಂದ್ ಮಾಡಿದರೆ ಅದು ಬೆಂಗಳೂರಿನ ಗೌರವಕ್ಕೆ ಹೇಗೆ ಧಕ್ಕೆ ಆಗುತ್ತದೆ ಎಂದು ರೈತ ಸಂಘಟನೆಗಳು ಪ್ರಶ್ನಿಸಿವೆ. ಡಿಕೆಶಿ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಅಂತ ಕುರುಬೂರು ಶಾಂತಕುಮಾರ್ (Kurubur Shanthakumar) ಆಗ್ರಹಿಸಿದ್ದಾರೆ.
ಡಿಕೆಶಿ ಹೀಗೆ ಅವಾಂತರ ಮಾಡಿ ತಮಿಳುನಾಡಿಗೆ (Tamil Nadu) ನೀರು ಬಿಟು ಬಿಟ್ಟರು. ಬೇಜವಾಬ್ದಾರಿ ಹೇಳಿಕೆಗಳು ಕರ್ನಾಟಕ ರಾಜ್ಯದ ರೈತರನ್ನು ಬಲಿ ತೆಗೆಯುವ ಕೆಲಸ ಮಾಡುತ್ತಿದೆ. ಸರ್ಕಾರ ಹೋರಾಟ ಮಾಡಿದರೆ ನೀರು ಯಾಕೆ ಬಿಡುತ್ತಿದ್ದರು. ನೀರು ಬಿಡುವುದಿಲ್ಲ ಎಂದು ಹೇಳಿಕೆ ನೀಡಿ ನೀರು ಬಿಡುತ್ತಿರುವುದು ಇವರೇ ಅಲ್ವಾ? ಈ ರೀತಿಯ ನಡವಳಿಕೆಗಳಿಗೇ ಜನರು ಸಾಯುತ್ತಿದ್ದಾರೆ. ಸೆ.26ಕ್ಕೆ ಬಂದ್ ಮಾಡುತ್ತೇವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವೇನು ರಾಜಕೀಯ ಮಾಡುತ್ತಿಲ್ಲ ಎಂದು ಶಾಂತಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಒಂದೇ ದಿನ 19 ಮಂದಿ ಸಂಚಾರಿ ಪೊಲೀಸರ ಅಮಾನತು
ಬಂದ್ ಮಾಡಿದರೆ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ ಆಗುತ್ತದೆ ಎಂದು ಡಿಕೆಶಿ ಈ ಹೇಳಿಕೆ ನೀಡುತ್ತಿದ್ದಂತೆ ಹಿಂದೆ ಕಾಂಗ್ರೆಸ್ ಏನು ಮಾಡಿತ್ತು? ಅಂದು ಅವತ್ತು ಮಾಡಿದಾಗ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ ಆಗಿರಲಿಲ್ವಾ ಎಂಬ ಪ್ರಶ್ನೆಗಳು ಈಗ ಎದ್ದಿದೆ.
2019 ಮಾರ್ಚ್ 28:
ಆದಾಯ ತೆರಿಗೆ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಜಂಟಿಯಾಗಿ ಐಟಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. 3-4 ಗಂಟೆಗಳ ಕಾಲ ಐಟಿ ದಾಳಿ ಖಂಡಿಸಿ ನಡೆಸಿದ ಪ್ರತಿಭಟನೆ ಫುಲ್ ಟ್ರಾಫಿಕ್ ಜಾಮ್‌ಗೆ ಕಾರಣವಾಗಿತ್ತು.
2021 ಜನವರಿ 20
ಕೃಷಿ ಕಾಯ್ದೆ ವಿರೋಧಿಸಿ ನಡೆಸಿದ ಬಂದ್‌ಗೆ ಬೆಂಬಲ ನೀಡಿತ್ತು. ಕಾಂಗ್ರೆಸ್ ನಾಯಕರು ಫ್ರೀಡಂ ಪಾರ್ಕ್‌ವರೆಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದ್ದರು.
2021 ಮಾರ್ಚ್ 1-3ರವರೆಗೆ
3 ದಿನ ಮೇಕೆದಾಟು ಪಾದಯಾತ್ರೆ ಬೆಂಗಳೂರಿನಲ್ಲಿ ನಡೆದಿತ್ತು. 7 ದಿನದ ಪಾದಯಾತ್ರೆಯಲ್ಲಿ 3 ದಿನ ಬೆಂಗಳೂರಲ್ಲೇ ನಡೆದಿದ್ದು, ಟ್ರಾಫಿಕ್ ಜಾಮ್ ಆಗಿತ್ತು.
2022 ಜೂನ್ 16
ಜಾರಿ ನಿರ್ದೇಶನಾಲಯ ವಿರುದ್ಧ ಪ್ರತಿಭಟನೆ ಹಾಗೂ ರ‍್ಯಾಲಿ ನಡೆಸಲಾಗಿತ್ತು. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ರಾಹುಲ್ ಗಾಂಧಿಗೆ ಇಡಿ ತೊಂದರೆ ಕೊಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿಯಿಂದ ರಾಜಭವನಕ್ಕೆ ಪ್ರತಿಭಟನಾ ರ‍್ಯಾಲಿ ನಡೆದಿತ್ತು.
2022 ಆಗಸ್ಟ್ 15
ಕಾಂಗ್ರೆಸ್ ಸ್ವತಂತ್ರ ನಡಿಗೆ ಜಾಥಾ ಆಯೋಜಿಸಿತ್ತು. ಫ್ರೀಡಂ ಪಾರ್ಕ್‌ನಿಂದ ನ್ಯಾಷನಲ್ ಕಾಲೇಜು ಮೈದಾನದವರೆಗೆ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರ‍್ಯಾಲಿಯನ್ನು ಭಾಗವಹಿಸಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]