ಲಕ್ನೋ: ಉತ್ತರಪ್ರದೇಶ ರಾಜ್ಯದ ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಕರ್ತವ್ಯ ನಿರತ ಎಸ್‍ಪಿಗೆ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೊಲೀಸ್ ಅಧಿಕಾರಿ ಶಾಸಕರನ್ನು ಗುರುತಿಸಲು ವಿಫಲವಾಗಿದ್ದರಿಂದ ಸಿಎಂ ಯೋಗಿ ಆದಿತ್ಯನಾಥ್‍ರ ನಿವಾಸ ಪ್ರವೇಶಕ್ಕೆ ನಿರ್ಬಂಧ ಹಾಕಿದ್ರು. ಇದರಿಂದ ಕೋಪಗೊಂಡ ಶಾಸಕ ಹರ್ಷವರ್ಧನ್ ‘ತುಮ್ ಲಾತೋ ಕೆ ಭೂತ್ ಹೋ, ಲಾತೋಂ ಸೇ ಹಿ ಮಾನತೇ ಹೈ’ (ಕೇವಲ ಅಹಿಂಸೆಯ ಮಾತುಗಳು ಮಾತ್ರ ನಿಮಗೆ ಅರ್ಥವಾಗುತ್ತದೆ) ಎಂದು ನಿಂದಿಸುವ ಮೂಲಕ ಅವಾಜ್ ಹಾಕಿದ್ದಾರೆ.
Advertisement
ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ (ಉತ್ತರ) ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಷವರ್ಧನ್ ಬಾಜಪೇಯಿ ಪೊಲೀಸ್ ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಗೇಟ್ ಬಳಿಯೇ ತಮ್ಮನ್ನು ತಡೆದಿದ್ದರಿಂದ ಕೋಪಗೊಂಡ ಶಾಸಕರು ಸಾರ್ವಜನಿಕವಾಗಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Advertisement
#WATCH: BJP MLA Harshvardhan Bajpayee threatening Superintendent of Police in Allahabad. MLA said, 'Tum laaton ke bhoot ho, laaton se hi maante ho'. SP had allegedly failed to recognise the MLA & stopped him to enter premises where a meeting was being held by CM Yogi Adityanath. pic.twitter.com/jrVAhlvcgr
— ANI UP/Uttarakhand (@ANINewsUP) May 20, 2018