ಪಾಟ್ನಾ: ಯುವಕನೊಬ್ಬ ಮಧ್ಯರಾತ್ರಿ ತನ್ನ ಪ್ರೇಯಸಿ ಮನೆಗೆ ಕಳ್ಳನಂತೆ ಪ್ರವೇಶಿಸಿದ್ದಾನೆ. ಆದರೆ ಸಿಕ್ಕಿಬಿದ್ದ ಆತನಿಗೆ ಈಗ ಕಂಕಣ ಭಾಗ್ಯ ಕೂಡಿ ಬಂದಿದೆ.
ಈ ಘಟನೆ ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ನಡೆದಿದೆ. 25 ವರ್ಷದ ವಿಶಾಲ್ ಸಿಂಗ್ ಕಳ್ಳನಂತೆ ಪ್ರೇಮಿ ಮನೆಗೆ ನುಗ್ಗಿದ ಪ್ರಿಯತಮ. ಆರ್ಮಿಯಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಶಾಲ್ ಸಿಂಗ್ ಮೂಲತಃ ತಿಲೌತು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಾರಾಜ್ ಗಂಜ್ ಗ್ರಾಮದವರು. ಇವರು ನೆರೆಯ ಗ್ರಾಮದ ತಮ್ಮ ಸಂಬಂಧಿಯಾದ ಲಕ್ಷ್ಮಿನಾ ಕುಮಾರಿಯುನ್ನು ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು.
Advertisement
ಇತ್ತೀಚೆಗೆ ವಿಶಾಲ್ ರಜೆಯ ಮೇರೆಗೆ ಮನೆಗೆ ಬಂದಿದ್ದಾರೆ. ಯುವತಿಯ ಮನೆಯವರು ಮನೆಯ ಮೇಲ್ಛಾಣಿಯ ಮೇಲೆ ಮಲಗುತ್ತಾರೆ ಎಂದು ತಿಳಿದುಕೊಂಡು ಪ್ರೇಯಸಿಯನ್ನು ನೋಡಲು ಮಧ್ಯರಾತ್ರಿ ಮನೆಗೆ ಹೋಗಿದ್ದಾರೆ. ಈ ವೇಳೆ ಕುಟುಂಬದ ಸದಸ್ಯರೊಬ್ಬರು ಎಚ್ಚರಗೊಂಡು ಕಳ್ಳ ಮನೆಯೊಳಗೆ ನುಗ್ಗಿದ್ದಾನೆ ಎಂದು ಕೂಗಿ ಎಲ್ಲರನ್ನೂ ಎಚ್ಚರಿಸಿ ಕೊನೆಗೆ ಒಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ.
Advertisement
Advertisement
ಗ್ರಾಮಸ್ಥರೆಲ್ಲರೂ ಸೇರಿ ವಿಶಾಲ್ ಗೆ ಥಳಿಸಲು ಮುಂದಾಗಿದ್ದಾರೆ. ಆಗ ಪ್ರೇಮಿಗಳಿಬ್ಬರು ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಬಳಿಕ ವಿಶಾಲ್ ಹಿಡಿದಿರುವ ಬಗ್ಗೆ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
Advertisement
ಮಾಹಿತಿ ತಿಳಿದ ವಿಶಾಲ್ ಕುಟುಂಬದವರು ಸ್ಥಳಕ್ಕೆ ಬಂದಿದ್ದಾರೆ. ಆಗ ವಿಶಾಲ್ ಅಜ್ಜ ಪಂಚ ಯಾದವ್ ಗೌರವಾನ್ವಿತ ವ್ಯಕ್ತಿಯಾಗಿದ್ದು, ಎರಡೂ ಹಳ್ಳಿಯವರನ್ನು ಸೇರಿಸಿ ಮಾತನಾಡಿದ್ದಾರೆ. ವರದಕ್ಷಿಣೆ ತೆಗೆದುಕೊಳ್ಳದೆ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಬಳಿಕ ಇಬ್ಬರು ಗ್ರಾಮಸ್ಥರು, ಹಿರಿಯರು ಕುಳಿತು ಮಾತನಾಡಿ ಮದುವೆಗೆ ಒಪ್ಪಿಕೊಂಡಿದ್ದಾರೆ.
ಹಿರಿಯರು ನಿಶ್ಚಯಿಸಿರುವಂತೆ ಗುರುವಾರ ಬೆಳಿಗ್ಗೆಯೇ ಇಬ್ಬರಿಗೂ ಹಿಂದೂ ಧರ್ಮದಂತೆ ನೂರಾರು ಜನರು ಮುಂದೆ ಮದುವೆ ಮಾಡಿಸಿದ್ದಾರೆ. ಇಬ್ಬರು ಪ್ರಾಪ್ತ ವಯಸ್ಕರಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡಿಸಿದ್ದಾರೆ. ನಾವು ಯಾವ ರೀತಿಯ ಕ್ರಮತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಇವರಿಬ್ಬರ ಮದುವೆಗೆ ಪೊಲೀಸರು ಆಗಮಿಸಿ ಶುಭ ಹಾರೈಸಿ ಹೋಗಿದ್ದಾರೆ.