Friday, 19th July 2019

2 years ago

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ

ಕಾರವಾರ: ಮಳೆ ಶುರುವಾಗ್ತಿದ್ದಂತೆ ಕಪ್ಪೆಗಳು ವಟಗುಟ್ಟುವುದು ಸರ್ವೆ ಸಾಮಾನ್ಯ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆಯಾಗಿದೆ. ಮೀನಕ್ಕಿಯಂತೆ ಶಬ್ದ ಮಾಡೋದು ಇದರ ವಿಶೇಷ. ಹಸಿರು ಬಣ್ಣ, ನೀಲಿ ಬಣ್ಣದ ಎರಡು ಗಾಳಿ ಚೀಲ ಹೊಂದಿರೋದು ಇದರ ವಿಶೇಷತೆ. ವಿಶ್ವದ ಅಳಿವಿನಂಚಿಲ್ಲಿರುವ ಕಪ್ಪೆ ಜಾತಿ ಇದಾಗಿದ್ದು, ಕರಾವಳಿ ಚಿಮ್ಮುವ ಕಪ್ಪೆ ಎಂದು ನಾಮಕರಣ ಮಾಡಲಾಗಿದೆ. ಅಣಶಿ ಉಪವಲಯ ಅರಣ್ಯಾಧಿಕಾರಿ ಸಿಆರ್ ನಾಯಕ್ ಮೊದಲ ಬಾರಿಗೆ ಈ ಕಪ್ಪೆಯನ್ನು ಪತ್ತೆ ಹಚ್ಚಿಸಿದ್ದರು.

2 years ago

`ಮಾಸ್ತಿಗುಡಿ’ ಯಶಸ್ಸಿಗೆ 500 ಮೀಟರ್ ಮೊಣಕಾಲಿನಲ್ಲಿ ನಡೆದ ಅಭಿಮಾನಿ!

ದಾವಣಗೆರೆ: ದುನಿಯಾ ವಿಜಯ್ ಅಭಿನಯದ `ಮಾಸ್ತಿಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಚಿತ್ರದ ಯಶಸ್ಸಿಗಾಗಿ ಅಭಿಮಾನಿಯೊಬ್ಬರು ವಿಶಿಷ್ಟವಾಗಿ ಹರಕೆ ಸಲ್ಲಿಸಿದ್ದಾರೆ. ಹೌದು. ವಿಜಿ ಅಭಿಮಾನಿಯೊಬ್ಬರು ಮೊಣಕಾಲಿನಲ್ಲೇ ನಡೆಯುವ ಮೂಲಕ ನೆರೆದವರಿಗೆ ಅಚ್ಚರಿ ಮೂಡಿಸಿದ್ದಾರೆ. ದುನಿಯಾ ವಿಜಯ್ ಅಭಿಮಾನಿ ಬಳಗದ ಅಧ್ಯಕ್ಷ ದೊಡ್ಡೇಶ ಈ ವಿಶಿಷ್ಟ ಹರಕೆ ಸಲ್ಲಿಸಿದ್ದಾರೆ. ದಾವಣಗೆರೆ ನಗರದ ಅಶೋಕ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗಿದೆ....

ಮರಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್ ಕಾರ್- ಓರ್ವನ ದುರ್ಮರಣ

2 years ago

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಭಟ್ಕಳ ಪಟ್ಟಣದ ಸಾಗರ ರಸ್ತೆಯ ಕಿತ್ತರೆ ಬಸ್ ನಿಲ್ದಾಣದ ಬನೀ ಅಪಘಾತ...

ಸತ್ತು 7 ದಿನಗಳಾದ್ರೂ ಗುರುವಿನ ಆತ್ಮ ಜೀವಂತ, ಅನುಯಾಯಿಗಳಿಂದ ಶವವಿಟ್ಟು ಪೂಜೆ!

2 years ago

ಕಾರವಾರ: ಧರ್ಮಗುರುಗಳು ಸಾವನ್ನಪ್ಪಿ ಏಳು ದಿನಗಳು ಕಳೆದ್ರೂ, ಅವರ ಆತ್ಮವಿನ್ನೂ ಜಾಗೃತವಾಗಿದೆ ಎಂಬ ಕಾರಣಕ್ಕೆ ಶವ ಸಂಸ್ಕಾರ ಮಾಡದೇ ಕೊಠಡಿಯೊಂದರಲ್ಲಿಟ್ಟು ಪೂಜೆ ಮಾಡಲಾಗ್ತಿತ್ತು. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಗೆಲುಕ್ಪಾ ಪಂಗಡದ ಪ್ರಮುಖ ನಾಯಕ ಗೆಶೆ ಲೋಬ್ಸಂಗ್...

ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

2 years ago

ಉತ್ತರ ಕನ್ನಡ: ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಹಣ ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಡಗೋಡು ಮೂಲದ ಜಯಶ್ರೀ...

ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

2 years ago

ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ....

ಬೇರೊಬ್ಬ ಮೌಲ್ವಿಯ ಉಪದೇಶ ಆಲಿಸಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಫತ್ವಾ

2 years ago

ಕಾರವಾರ: ಬೇರೊಬ್ಬ ಮೌಲ್ವಿಯ ಉಪದೇಶವನ್ನು ಆಲಿಸಿದ ಕಾರಣಕ್ಕಾಗಿ ಜಿಲ್ಲೆಯ ಚಿತ್ತಾಕುಲದ ಮಾಲ್ದಾರವಾಡದ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ. ಗ್ರಾಮದ ಅನ್ವರ್ ಮಹಮದ್ ಖಾನ್, ಅಬ್ದುಲ್ ಸಲಾಂ ಸೇರಿದಂತೆ 12 ಕುಟುಂಬಗಳು ಆಂಧ್ರಪ್ರದೇಶದ ದಾವಲ್-ಅಲಿ-ಶಾಹಾರ್...

ಪ್ರಾಣವನ್ನೂ ಲೆಕ್ಕಿಸದೆ ಆಪತ್ತಿನಲ್ಲಿರೋ ಪ್ರಾಣಿಗಳ ಜೀವರಕ್ಷಣೆ ಮಾಡ್ತಿದೆ ಈ ತಂಡ

2 years ago

ಕಾರವಾರ: ಇವತ್ತಿನ ಪಬ್ಲಿಕ್‍ಹೀರೋ ಕಾರವಾರದ ಒಂದು ತಂಡ. ಮನುಷ್ಯರ ಸಹಾಯಕ್ಕೆ ಬರೋಕೇ ಜನ ಹಿಂದೇಟು ಹಾಕೋ ಈ ಕಾಲದಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಈ ತಂಡ ವನ್ಯಜೀವಿಗಳ ರಕ್ಷಣೆ ಮಾಡ್ತಿದೆ. ನಗರೀಕರಣದಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬಂದು ತೊಂದರೆಗೆ ಸಿಲುಕಿಕೊಳ್ಳೋದನ್ನ ನೋಡಿದ್ದೇವೆ. ಹೀಗೆ ಬಂದ...