Monday, 10th December 2018

Recent News

4 hours ago

ವಿಶ್ವದಾಖಲೆ ನಿರ್ಮಿಸಿದ ಕೈಗಾ ಅಣುವಿದ್ಯುತ್ ಘಟಕ

ಕಾರವಾರ: ದೇಶದಲ್ಲಿಯೇ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೆಸರು ಮಾಡಿರುವ ಕಾರವಾರ ತಾಲೂಕಿನಲ್ಲಿರುವ ಕೈಗಾ ಅಣುವಿದ್ಯುತ್ ಘಟಕ ವಿಶ್ವದಾಖಲೆ ನಿರ್ಮಿಸಿದೆ. ಕೈಗಾ ಒಂದನೇ ಘಟಕವು ಸತತ 941 ದಿನಗಳ ಕಾಲ ನಿರಂತರ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಇಂದು ವಿಶ್ವದಾಖಲೆ ನಿರ್ಮಿಸಿದೆ. 2000 ನೇ ಇಸವಿಯಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಘಟಕ 1 ನಿರ್ಮಾಣ ಮಾಡಲಾಗಿತ್ತು. ನಂತರ ಮೇ 15, 2016ರಿಂದ ಕೈಗಾ ಒಂದನೇ ಘಟಕವು ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿಕೊಂಡು ಬಂದಿದ್ದು ಸೋಮವಾರ ಬೆಳಗ್ಗೆ 9.15ಕ್ಕೆ ಈ ದಾಖಲೆ ಬರೆದಿದೆ. […]

1 day ago

ಕರಾವಳಿ ಉತ್ಸವದಲ್ಲಿ ಕುಣಿದು ಕುಪ್ಪಳಿಸಿದ ಬಿಜೆಪಿ ಶಾಸಕಿ

ಕಾರವಾರ: ಒಂದೊಳ್ಳೆ ಸಂಗೀತ ರಿದಮ್ ಇದ್ರೆ ಎಂತವರಿಗೂ ಒಂದು ಸ್ಟೆಪ್ ಹಾಕಬೇಕು ಅನಿಸುತ್ತದೆ. ಸಾಮಾನ್ಯ ಮನುಷ್ಯನಾದ್ರೆ ತನ್ನ ಇಷ್ಟಕ್ಕೆ ತಕ್ಕಂತೆ ಏನು ಬೇಕಾದ್ರೂ ಮಾಡುತ್ತಾರೆ. ಸಮಾಜದಲ್ಲಿ ಮನ್ನಡೆಯಲ್ಲಿದ್ದು ಅದರಲ್ಲೂ ಶಾಸಕರ ಸ್ಥಾನದಲ್ಲಿದ್ದರೇ ಕಟ್ಟುಪಾಡುಗಳಿಗೆ ಅಂಜಿ ತಮ್ಮ ಇಚ್ಚೆ ಇದ್ದರೂ ಏನೂ ಮಾಡಲು ಹಿಂದೇಟು ಹಾಕುತ್ತಾರೆ. ಕಾರವಾರದ ಶಾಸಕಿ ರೂಪಾಲಿ ನಾಯ್ಕ್ ತುಂಬು ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿದದಾರೆ....

ಮಗನ ಹುಟ್ಟುಹಬ್ಬಕ್ಕೆಂದು ಪಠಾಣ್‍ಕೋಟ್‍ನಿಂದ ಹೊರಟಿದ್ದ ಯೋಧ ಅನುಮಾನಾಸ್ಪದವಾಗಿ ಸಾವು

6 days ago

ಕಾರವಾರ: ಮಗನ ಹುಟ್ಟುಹಬ್ಬಕ್ಕೆ ಸರ್‍ಪ್ರೈಸ್ ನೀಡಲೆಂದು ಪಂಜಾಬಿನ ಪಠಾಣ್‍ಕೋಟ್ ನಿಂದ ಹೊರಟಿದ್ದ ಯೋಧರೊಬ್ಬರು ಅನುಮಾನಸ್ಪದವಾಗಿ ರೈಲಿಗೆ ಬಿದ್ದು ಮೃತಪಟ್ಟಿದ್ದಾರೆ. ದುಮ್ಮಿಂಗ್ ಸಿದ್ದಿ (39) ಮೃತ ಯೋಧರಾಗಿದ್ದು, ಮೂಲತಃ ಕಾರವಾರ ತಾಲೂಕಿನ ಮಖೇರಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ 15 ವರ್ಷದಿಂದ ದುಮ್ಮಿಂಗ್ ಬಳಿ...

ಅಗ್ನಿಶಾಮಕ ದಳದ ಎಡವಟ್ಟಿಗೆ ಸುಟ್ಟು ಭಸ್ಮವಾಯ್ತು ಮನೆ, ದನದ ಕೊಟ್ಟಿಗೆ!

1 week ago

– ಬೆಂಕಿ ನಂದಿಸಲು ನೀರು ತುಂಬಿರದ ವಾಹನ ತಂದಿದ್ದ ಸಿಬ್ಬಂದಿ ಕಾರವಾರ: ಮನೆ ಹಾಗೂ ಕೊಟ್ಟಿಗೆಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಂದಿದ್ದ ವಾಹನದಲ್ಲಿ ನೀರು ಇಲ್ಲದೆ ಅಗ್ನಿಶಾಮಕ ಸಿಬ್ಬಂದಿ ಪರದಾಡಿದ ಘಟನೆ ಉತ್ತರ ಕನ್ನಡ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿ ನಡೆದಿದೆ....

ಅವೈಜ್ಞಾನಿಕ ಡೈವರ್ಷನ್‍ಗೆ ಸವಾರ ಬಲಿ..!

2 weeks ago

ಕಾರವಾರ: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಕಡೇಕೋಡಿ ಗ್ರಾಮದ ಬಳಿ ನಡೆದಿದೆ. ತುಕಾರಾಂ ಪಟಗಾರ್ (30) ಮೃತಪಟ್ಟ ಬೈಕ್ ಸವಾರ. ಕಡೇಕೋಡಿ ಗ್ರಾಮದ ಬಳಿ...

ಬೀದಿಯಲ್ಲಿ ಎಸೆದ ನವಜಾತ ಶಿಶುವನ್ನ ಕಿತ್ತು ತಿಂದ ಬೀದಿ ನಾಯಿಗಳು!

2 weeks ago

ಕಾರವಾರ: ಬೀದಿಯಲ್ಲಿ ಎಸೆದ ನವಜಾತ ಶಿಶುವೊಂದನ್ನು ನಾಯಿಗಳು ಕಿತ್ತು ತಿಂದಿರುವ ಘಟನೆ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ನಡೆದಿದೆ. ಹುನಗುಂದ ಗ್ರಾಮದಲ್ಲಿ ರಸ್ತೆಬದಿಯಲ್ಲಿ ಯಾರೋ ನವಜಾತ ಶಿಶುವೊಂದನ್ನು ಎಸೆದು ಹೋಗಿದ್ದರು. ಇಂದು ಬೆಳಗ್ಗೆ ನವಜಾತ ಶಿಶುವನ್ನು ಬೀದಿ ನಾಯಿಗಳು...

6 ತಿಂಗ್ಳಿನಿಂದ ಗ್ರಾಮದಲ್ಲಿ ಓಡಾಡ್ತಿದ್ದ ಹುಲಿ ಕೊನೆಗೂ ಟ್ರಾಪ್

2 weeks ago

-ಟ್ರಾಪ್ ಆಗಿದ್ದು ಹೇಗೆ? ಇಲ್ಲಿದೇ ಮಾಹಿತಿ ಕಾರವಾರ: ಕಳೆದ ಆರು ತಿಂಗಳ ಹಿಂದೆ ಕದ್ರಾ ಗ್ರಾಮದ ಸುತ್ತಮುತ್ತ ಹುಲಿ ಓಡಾಡುತ್ತಿದೆ ಎಂಬ ಸುದ್ದಿ ಹರಿದಾಡಿ ಜನರನ್ನು ಆತಂಕಕ್ಕೀಡುಮಾಡಿತ್ತು. ನಿಜವಾಗಿಯೂ ಹುಲಿ ನಾಡಿನ ಸುತ್ತಮುತ್ತ ಓಡಾಡುತ್ತಿವೆಯೇ ಎಂಬ ಜನರ ಭಯಕ್ಕೆ ಅರಣ್ಯ ಇಲಾಖೆ...

289 ಮದ್ಯದ ಬಾಕ್ಸ್ ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು

3 weeks ago

ಕಾರವಾರ: ಮನೆಯ ನೆಲಮಾಳಿಗೆಯಲ್ಲಿ ಅಡಗಿಸಿಟ್ಟು ಮಾರಾಟ ಮಾಡುತಿದ್ದ ಗೋವಾ ಮದ್ಯವನ್ನು ಬೆಂಗಳೂರು ಮೂಲದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿ 20 ಲಕ್ಷ ರೂ. ಮೌಲ್ಯದ 289 ಮದ್ಯದ ಬಾಕ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ರಾಮನಗರದ...