Friday, 23rd August 2019

10 hours ago

ಚಿದಂಬರಂ ಬಂಧನದ ಹಿಂದೆ ರಾಜಕೀಯ ದ್ವೇಷವಿಲ್ಲ: ನಿರ್ಮಲಾ ಸೀತಾರಾಮನ್

– ತೆರಿಗೆ ಅಧಿಕಾರಿ ಜೊತೆಗೆ ಮುಖಾಮುಖಿ ಇಲ್ಲ ಮೈಸೂರು: ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಬಂಧನದ ಹಿಂದೆ ರಾಜಕೀಯ ದ್ವೇಷವಿಲ್ಲ. ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ನಿರಾಧಾರ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಿಬಿಐ ಎಲ್ಲಾ ಮಾಹಿತಿ ಕಲೆ ಹಾಕುವವರೆಗೂ ಸುಮ್ಮನಿರಬೇಕು. ಸುಖಾಸುಮ್ಮನೆ ಆರೋಪ ಮಾಡುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) […]

15 hours ago

ಮೈಸೂರಿಗೆ ವಿ. ಸೋಮಣ್ಣ ಉಸ್ತುವಾರಿ

ಮೈಸೂರು: ಸಚಿವ ವಿ. ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಆಗಿದ್ದು, ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆದೇಶ ಪತ್ರದಲ್ಲಿ, ವಿ ಸೋಮಣ್ಣ, ಮಾನ್ಯ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಆದೇಶಿಸಿದೆ. ನೆರೆ ಬಗ್ಗೆ ಪರಿಶೀಲನೆ ಮಾಡಿ...

ಮುನ್ನೆಚ್ಚರಿಕಾ ಕ್ರಮವಾಗಿ ಕೆಆರ್‌ಎಸ್‌ ಸುತ್ತ ನಿಷೇಧಾಜ್ಞೆ ಜಾರಿ

22 hours ago

ಮೈಸೂರು: ಕೆಆರ್‌ಎಸ್‌ ಡ್ಯಾಂ ಭರ್ತಿಯಾಗಿರುವುದು ಹಾಗೂ ಇತ್ತೀಚೆಗೆ ಡ್ಯಾಂ ಬಳಿ ನಿಗೂಢ ಶಬ್ಧ ಕೇಳಿ ಬಂದಿದ್ದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಆರ್‍ಎಸ್ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೆಆರ್‌ಎಸ್‌ ಡ್ಯಾಂ ಬಳಿ ಇತ್ತೀಚೆಗೆ ಭಾರೀ ವಿಚಿತ್ರ ಶಬ್ಧ ಕೇಳಿ ಬರುತ್ತಿತ್ತು. ಈ ಹಿನ್ನೆಲೆ...

ಸ್ಥಳೀಯ ಶಾಸಕರು ಅನರ್ಹ, ಸಚಿವರಿಲ್ಲ – ದಸರಾ ಗಜಪಯಣ ಚಾಲನೆಗೆ ಶುರುವಾಯ್ತು ಗೊಂದಲ

2 days ago

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ದಸರಾ ಗಜಪಯಣಕ್ಕೆ ನಾಳೆಯಿಂದ ಚಾಲನೆ ನೀಡಬೇಕಿದೆ. ಆದರೆ ಒಂದೆಡೆ ಜಿಲ್ಲೆಯ ಸ್ಥಳೀಯ ಶಾಸಕರು ಅನರ್ಹಗೊಂಡಿದ್ದಾರೆ, ಇನ್ನೊಂದು ಕಡೆ ಈ ಭಾಗದಲ್ಲಿ ಯಾವ ಸಚಿವರು ಇಲ್ಲ. ಹೀಗಾಗಿ ದಸರಾ ಗಜಪಯಣಕ್ಕೆ ಸ್ವಾಗತ, ಚಾಲನೆ ನೀಡುವವರು ಯಾರು...

ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸಲು ಸಿಎಂ ಇನ್ನಿಲ್ಲದ ಯತ್ನ- ಸಾ.ರಾ.ಮಹೇಶ್ ವ್ಯಂಗ್ಯ

2 days ago

ಮೈಸೂರು: ಮೈಸೂರು ಭಾಗದ ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಬಗೆ ಬಗೆಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಪರೋಕ್ಷವಾಗಿ ಎಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಪ್ರೇತವನ್ನು ಸಮಾಧಾನ ಪಡಿಸುವ ಕಾರ್ಯ...

ಎಚ್‍ಡಿಕೆಯನ್ನು ಹಳೆ ಮೈಸೂರು ಸಿಎಂ ಎಂದಿದ್ದ ಇವರನ್ನು ಏನಂತ ಕರೆಯಬೇಕು – ಸಾ.ರಾ. ಮಹೇಶ್ ಕಿಡಿ

3 days ago

ಮೈಸೂರು: ಕೊನೆಗೂ ಮಂತ್ರಿ ಮಂಡಲದ ಗಜ ಪ್ರಸವ ಆಗಿದೆ. ಆದರೆ, ಬಿಜೆಪಿ ಸರ್ಕಾರದಲ್ಲಿ ಹಳೇ ಮೈಸೂರು ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆಯಲ್ಲಿ ಅಸಮಾಧಾನ ಹೊರ ಹಾಕಿರುವ ಅವರು, ಮಂತ್ರಿ...

ಭಾರತಿ ವಿಷ್ಣುವರ್ಧನ್‍ರಿಂದ ಸಂತ್ರಸ್ತರಿಗೆ ಸ್ವೆಟರ್, ಬಟ್ಟೆ ವಿತರಣೆ

3 days ago

ಮೈಸೂರು: ನೆರೆ ಪೀಡಿತ ಪ್ರದೇಶಗಳಿಗೆ ಕೆಲ ಸ್ಯಾಂಡಲ್‍ವುಡ್ ನಟರು ಹೋಗಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ದಾರೆ. ಅವರ ಅಭಿಮಾನಿಗಳು ತಮ್ಮ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು ಸಂತ್ರಸ್ತರ ಕೇಂದ್ರಕ್ಕೆ ಹೋಗಿ ಸಾಂತ್ವನ ಹೇಳಿದ್ದಾರೆ. ಜಿಲ್ಲೆಯಲ್ಲಿ...

ಹಳೆ ಮೈಸೂರು ಭಾಗದಲ್ಲಿ ಒಬ್ಬರಿಗೂ ಸಿಕ್ಕಿಲ್ಲ ಮಂತ್ರಿಗಿರಿ

3 days ago

ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೌದು. ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ....