Sunday, 21st July 2019

Recent News

2 years ago

ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಕನಕಾಚಲಪತಿ ಅದ್ಧೂರಿ ಕಲ್ಯಾಣೋತ್ಸವ

ಕೊಪ್ಪಳ: ಕರ್ನಾಟಕದ ಎರಡನೇ ತಿರುಪತಿ ಎಂದು ಕರೆಯಲ್ಪಡುವ ಕನಕಾಚಲಪತಿ ಕಲ್ಯಾಣೋತ್ಸವ ಅದ್ಧೂರಿಯಾಗಿ ಕೊಪ್ಪಳದಲ್ಲಿ ನಡೆಯಿತು. ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ 14 ದಿನಗಳ ಕಾಲ ಉತ್ಸವ ನಡೆಯುತ್ತದೆ. ತಿರುಪತಿಯಲ್ಲಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ನಡೆಯುವಂತೆ ಕನಕಗಿರಿಯ ಶ್ರೀ ಕನಕಾಚಲನ ಕಲ್ಯಾಣವು ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಹೆಣ್ಣಿನ ಕಡೆಯಿಂದ ಶಾಸಕ ಶಿವರಾಜ್ ತಂಗಡಗಿ ಅವರ ಧರ್ಮಪತ್ನಿ ಶ್ರೀಮತಿ ವಿದ್ಯಾ ತಂಗಡಗಿ ಭಾಗವಹಿಸಿದ್ದರು. ಕನಕಾಚಲನ ವಿವಾಹ ಮಹೋತ್ಸವ ಶ್ರೀ ದೇವಿ ಹಾಗೂ ಭೂದೇವಿಯರೊಂದಿಗೆ ನಡೆದು ನಂತರದಲ್ಲಿ […]

2 years ago

ಕೊಪ್ಪಳ: 42 ವರ್ಷಗಳಲ್ಲಿಯೇ ಭೀಕರ ಬರಕ್ಕೆ ತುತ್ತಾಗಿದೆ, ಗುಳೆ ಹೋಗಿದ್ದಾರೆ ಜನ!

ಮುಕ್ಕಣ್ಣ ಕತ್ತಿ ಕೊಪ್ಪಳ: ಬರಪೀಡಿತ ಜಿಲ್ಲೆ ಅಂತಾನೇ ಹಣೆಪಟ್ಟಿ ಕಟ್ಟಿಕೊಂಡಿರೋ ಜಿಲ್ಲೆ. ಈ ಜಿಲ್ಲೆಯಲ್ಲಿ ಬಿರು ಬಿಸಿಲಿಗೆ ಒಣಗಿ ಬಾಯಿಬಟ್ಟಿರೋ ಹೊಲ, ಕೆರೆಗಳು.. ಉದ್ಯೋಗ ಅರಿಸಿ ಗುಳೆಹೋಗಿ ಖಾಲಿ ಹೊಡೆಯುತ್ತಿರೋ ತಾಂಡಾಗಳು. ರಣ ರಣ ಬಿಸಿಲಿನಲ್ಲಿ ಬದುಕನ್ನರಿಸಿ ಹೊರಟ ಜೀವಗಳು.. ಇವೆಲ್ಲಾ ಕೊಪ್ಪಳ ಜಿಲ್ಲೆಯ ಬರದ ಭೀಕರತೆ..ಕೊಪ್ಪಳ ಅಂದ್ರೆ ಬರ.. ಬರ ಅಂದ್ರೆ ಕೊಪ್ಪಳ ಅನ್ನುವಷ್ಟರ...

ಹೈದ್ರಾಬಾದ್ ಕರ್ನಾಟಕದಲ್ಲಿ ಮಳೆ -ಸಿಡಿಲು ಬಡಿದು ಇಬ್ಬರ ಸಾವು

2 years ago

ಹೈದ್ರಾಬಾದ್ ಕರ್ನಾಟಕ: ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಮಳೆರಾಯ ರಾತ್ರಿ ಸದ್ದು ಮಾಡಿದ್ದಾನೆ. ಬಳ್ಳಾರಿ, ರಾಯಚೂರು, ಕೊಪ್ಪಳದಲ್ಲಿ ಮಳೆಯಾಗಿದೆ. ಗಣಿನಾಡಲ್ಲಿ ಗುಡುಗು-ಸಿಡಿಲಿನೊಂದಿಗೆ 2 ಗಂಟೆ ಮಳೆ ಸುರಿದಿದೆ. ಮಳೆಯ ಪರಿಣಾಮ ಅನೇಕ ನಗರ ಸೇರಿದಂತೆ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ರಾಯಚೂರಿನ ಲಿಂಗಸುಗೂರು,...

ಕೊಪ್ಪಳ: ವಿದೇಶಿಗರಿಂದ ರಂಗುರಂಗಿನ ಮೋಜಿನ ಹೋಳಿ ಆಚರಣೆ

2 years ago

ಕೊಪ್ಪಳ: ಇಂದು ದೇಶವೆ ಬಣ್ಣ ಬಣ್ಣದ ಹೋಳಿ ಹಬ್ಬದಲ್ಲಿ ಭಾಗಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ವಿದೇಶಿ ಪ್ರವಾಸಿಗರು ಅತ್ಯಂತ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು. ವಿದೇಶಿ ಪ್ರವಾಸಿಗರ ಮೋಜಿನ ತಾಣವೆಂದೇ ಕರೆಯಲ್ಪಡುವ ಈ ಪ್ರದೇಶದಲ್ಲಿ ಹೋಳಿ ಹಬ್ಬವನ್ನು...

ಹೋಳಿಯಾಟವಾಡಿ ನದಿ ಸ್ನಾನಕ್ಕೆ ಹೋದವ ಶವವಾದ

2 years ago

ಕೊಪ್ಪಳ: ಹೋಳಿ ಹಬ್ಬದಂದು ಬಣ್ಣದ ಓಕುಳಿ ಆಡಿ ನಂತರ ನದಿ ಸ್ನಾನಕ್ಕೆ ಹೋದ ಯುವಕ ಜಲಸಮಾಧಿ ಆದ ಘಟನೆ ಕೊಪ್ಪಳ ತಾಲೂಕಿನ ನೇಲಗಿಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ. 25 ವರ್ಷದ ಬಸವರಾಜ್ ಮ್ಯಾಳಿ ಮೃತ ಯುವಕ. ಭಾನುವಾರದಂದು ಹೋಳಿ ಆಡಿದ ನಂತರ...

ಹಣವೆಂದು ಬ್ಯಾಗ್ ತೆರೆದು ನೋಡಿದ್ರೆ ಶಾಕ್: ಹೃದಯಾಘಾತದಿಂದ ವ್ಯಕ್ತಿ ಸಾವು

2 years ago

ಕೊಪ್ಪಳ: ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಅದೇ ರೀತಿ ಹಣ ಡಬಲ್ ಮಾಡಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬರು ಹೆಣವಾದ ಘಟನೆ ಕೊಪ್ಪಳದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಸಜ್ಜಿ ಹೊಲ ಪ್ರದೇಶದ ನಿವಾಸಿ ಕೆ.ಹುಸೇನ್ ಖಾನ್ ರಾತ್ರೋರಾತ್ರಿ ಶ್ರೀಮಂತರಾಗಲು...

ಯಾದಗಿರಿಯಲ್ಲಿ ಅಭಿಮಾನಿಗಳಿಂದ ಯಶ್ ಕಾರು ಜಖಂ

2 years ago

– ಕೊಪ್ಪಳದಲ್ಲಿ ಸುದೀಪ್-ಯಶ್ ಅಭಿಮಾನಿಗಳ ಕಿತ್ತಾಟ ಯಾದಗಿರಿ/ಕೊಪ್ಪಳ: ಸೋಮವಾರದಂದು ಜಿಲ್ಲೆಯಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮಕ್ಕೆ ನಟ ಯಶ್ ಐದೂವರೆ ಗಂಟೆ ತಡವಾಗಿ ಬಂದಿದ್ದಕ್ಕೆ ರೊಚ್ಚಿಗೆದ್ದ ರೈತರು ಹಾಗೂ ಅಭಿಮಾನಿಗಳು ಕುರ್ಚಿಗಳನ್ನ ಧ್ವಂಸ ಮಾಡಿದ್ದಾರೆ. ಸಂಜೆ 4 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ...

ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆಗೆ ಯತ್ನ!

2 years ago

ಕೊಪ್ಪಳ: ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಗ್ರಾಮ ಲೆಕ್ಕಾಧಿಕಾರಿಯಾಗಿರುವ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಯಲಬುರ್ಗಾ ತಾಲೂಕಿನ ರಾಜೂರ ಗ್ರಾಮದ ನಿವಾಸಿ, ಮಾಳೆಕೊಪ್ಪ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅನ್ನಪೂರ್ಣ ಆತ್ಮಹತ್ಯೆಗೆ ಯತ್ನಿಸಿದ ಯುವತಿಯಾಗಿದ್ದಾಳೆ. ಕಳೆದ 9 ತಿಂಗಳ ಹಿಂದೆಯಷ್ಟೇ...