Saturday, 21st July 2018

Recent News

2 days ago

ಉತ್ತರ ಕರ್ನಾಟಕವನ್ನ ಕಡೆಗಣಿಸಿದ್ರೆ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸ್ತೇನೆ- ಶಾಸಕ ಶ್ರೀರಾಮಲು

ಕೊಪ್ಪಳ: ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿದರೆ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ನಾನೇ ಮುಂದಾಳತ್ವ ವಹಿಸುತ್ತೇನೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಇಂದು ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನೀನು ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದಾಗ ಹೈದ್ರಾಬಾದ್ ಕರ್ನಾಟಕಕ್ಕೇ ಏನು ಮಾಡಿದ್ದೀಯಾ? ಉತ್ತರ ಕರ್ನಾಟಕವನ್ನು ನೀನು ನಿರ್ಲಕ್ಷಿಸಿದ್ದೀಯಾ? ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಆರಂಭಿಸಿದ್ರು. ಈಗಾಗಲೇ ಪ್ರತ್ಯೇಕ ರಾಜ್ಯದ ಕೂಗು ಕೇಳಿಬರುತ್ತಿದೆ. ಇದೇ ರೀತಿ ತಾರತಮ್ಯ ಮಾಡಿದರೆ […]

2 days ago

ಸೆಲ್ಫಿ ಸ್ಪಾಟ್ ಆದ ತುಂಗಭದ್ರಾ ಜಲಾಶಯ

ಕೊಪ್ಪಳ: ಸತತ ನಾಲ್ಕು ವರ್ಷಗಳಿಂದ ಬರಗಾಲದಿಂದ ತತ್ತರಿಸಿಹೋಗಿದ್ದ ತುಂಗಾಭದ್ರಾ ಜಲಾಶಯ ಈ ಭಾರಿ ಮತ್ತೆ ಮೈದುಂಬಿದ್ದು, ಜಲಾಶಯದಿಂದ ನೀರುಬಿಟ್ಟ ದೃಶ್ಯವನ್ನ ನೋಡಲು ಜನರು ತಂಡೋಪತಂಡವಾಗಿ ಆಗಮಿಸಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಾಭದ್ರಾ ಜಲಾಶಯವೀಗ ಮೈದುಂಬಿಕೊಂಡಿದೆ. ಕಳೆದ ದಿನದಿಂದ 32 ಕ್ರಷ್ಟ್ ಗೇಟ್ ಗಳ ಪೈಕಿ 20 ಗೇಟ್ ಗಳಿಂದ...

5 ವರ್ಷದ ಬಳಿಕ ಟಿಬಿ ಡ್ಯಾಂ ಭರ್ತಿ-ಜಲಾಶಯದಿಂದ 10 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

3 days ago

ಕೊಪ್ಪಳ: ಐದು ವರ್ಷದ ನಂತರ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಬುಧವಾರ ಸಂಜೆ ಜಲಾಶಯದ ಗೇಟ್ ಮೂಲಕ ನೀರು ಹೊರ ಬಿಡಲಾಯಿತು. ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯ ಜನರ ಜೀವನಾಡಿ ತುಂಗಭದ್ರಾ ಜಲಾಶಯ ಕಳೆದ 5 ವರ್ಷದಿಂದ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ...

ಕೇವಲ 24 ಗಂಟೆಯಲ್ಲಿ 5 ಲಕ್ಷ ವೀವ್ಸ್, 10 ಸಾವಿರ ಶೇರ್ ಆಯ್ತು ಕೊಪ್ಪಳದ ಹಾಡು ಕೋಗಿಲೆಯ ವಿಡಿಯೋ!

4 days ago

ಕೊಪ್ಪಳ: ಇದು ಸೋಶಿಯಲ್ ಮೀಡಿಯಾ ಕಾಲ. ಪ್ರತಿಭೆ ಇದ್ದವರನ್ನು ಜನ ರಾತ್ರೋರಾತ್ರಿ ಸ್ಟಾರ್ ಮಾಡಿ ಬಿಡ್ತಾರೆ. ಹೀಗೆ ಸೋಶಿಯಲ್ ಮೀಡಿಯಾ ಮೂಲಕ 24 ಗಂಟೆಯಲ್ಲಿ ಲಕ್ಷಂತರ ಜನರ ಮನಸ್ಸು ಗೆದ್ದವರ ಸಾಲಿಗೆ 50 ವರ್ಷದ ಗಡಿ ದಾಟಿದ ಕೊಪ್ಪಳದ ಪ್ರತಿಭೆ ಸೇರಿದ್ದಾರೆ....

ಮಳೆಗಾಗಿ ಅನ್ನ, ನೀರು ಬಿಟ್ಟು ಮೌನ ಅನುಷ್ಠಾನಕ್ಕೆ ಕುಳಿತ ಮಹಿಳೆ

5 days ago

ಕೊಪ್ಪಳ: ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಮಳೆ ಇಲ್ಲದೇ ರೈತರು ಕಂಗಾಲಾಗುತ್ತಿರುವುದನ್ನು ಕಂಡ ಮಹಿಳೆಯೊಬ್ಬರು ಮಳೆಗಾಗಿ ತಪಸ್ಸು ಕುಳಿತಿದ್ದಾರೆ. ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದ ಹುಲಿಗೆಮ್ಮ ಎಂಬ ಮಹಿಳೆ ತಾಲೂಕಿನ ಬಿಕನಳ್ಳಿ ಗ್ರಾಮದ...

ಮಾನವೀಯತೆ ಇದ್ದವ್ರಿಗೆ ಸಹಜವಾಗಿ ಕಣ್ಣೀರು ಬರುತ್ತೆ- ಎಚ್‍ಡಿಕೆ ಬೆನ್ನಿಗೆ ನಿಂತ ವೆಂಕಟರಾವ್ ನಾಡಗೌಡ

6 days ago

ಕೊಪ್ಪಳ: ಮಾನವೀಯತೆ ಇದ್ದವರಿಗೆ ಸಹಜವಾಗಿ ಕಣ್ಣೀರು ಬರುತ್ತದೆ. ಕಲ್ಲು ಹೃದಯಿಗಳಿಗೆ ಬರೋದಿಲ್ಲ. ಸಾಕಷ್ಟು ಕೆಲಸ ಮಾಡಿದ್ರೂ ಟೀಕೆ ಬಂದಾಗ ಮನೋಸಹಜವಾಗಿ ಕಣ್ಣೀರು ಬರುತ್ತೆ ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟರಾವ್ ನಾಡಗೌಡ ಅವರು ಕಾಂಗ್ರೆಸ್ ಶಾಸಕ ಸುಧಾಕರ್ ಗೆ ಟಾಂಗ್ ಕೊಟ್ಟಿದ್ದಾರೆ....

ಮೂರು ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ ಭರ್ತಿ- ರೈತರ ಮೊಗದಲ್ಲಿ ಸಂಭ್ರಮ

6 days ago

ಕೊಪ್ಪಳ: ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ದಾಖಲಾಗುತ್ತಿದ್ದು, ಸದ್ಯ ಡ್ಯಾಂನಲ್ಲಿ 75 ಟಿಎಂಸಿಗೂ ಹೆಚ್ಚು ನೀರಿದೆ. ಈ ಬಾರಿ ಡ್ಯಾಂ ಭರ್ತಿಯಾಗುವ ಎಲ್ಲ ಸಾಧ್ಯತೆ ಇದೆ. ಕಳೆದ ನಾಲ್ಕು ವರ್ಷದಿಂದ ಭರ್ತಿಯಾಗದ ತುಂಗಭದ್ರಾ ಜಲಾಶಯದಲ್ಲಿ...

ಬರದ ನಾಡಲ್ಲಿ ಬಂಗಾರದ ಬೆಳೆ- 100 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿದ್ರು ಕುಷ್ಟಗಿಯ ರಮೇಶ್ ಬಳೂಟಗಿ

1 week ago

ಕೊಪ್ಪಳ: ಕರ್ನಾಟಕ ಶ್ರೀಗಂಧದ ನಾಡು ಅಂತಾರೆ. ಆದ್ರೆ ಇತ್ತೀಚೆಗೆ ಶ್ರೀಗಂಧ ಕಡಿಮೆ ಆಗ್ತಿದೆ. ಆದ್ರೆ, ಬರದ ನಾಡು ಕೊಪ್ಪಳದ ಇವತ್ತಿನ ನಮ್ಮ ಪಬ್ಲಿಕ್ ಹೀರೋ ರಮೇಶ್ ಬಳೂಟಗಿ. ಬರೋಬ್ಬರಿ 100 ಎಕರೆಯಲ್ಲಿ ಶ್ರೀಗಂಧದ ಕೃಷಿ ಮಾಡಿ, ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಹೌದು....