Friday, 19th July 2019

Recent News

3 weeks ago

ಇದುವರೆಗೆ ಯಾರೂ ನನಗೆ ರಾಜೀನಾಮೆ ಕೊಟ್ಟಿಲ್ಲ- ಸ್ಪೀಕರ್ ಸ್ಪಷ್ಟನೆ

ಕೋಲಾರ: ನನಗೆ ಯಾರೂ ರಾಜೀನಾಮೆ ಕೊಟ್ಟಿಲ್ಲ. ರಾತ್ರಿಯಿಂದ ನಾನು ಮನೆಯಲ್ಲೇ ಇದ್ದೇನೆ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಹೀಗಾಗಿ ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ. ಶಾಸಕ ಆನಂದ್ ಸಿಂಗ್ ರಾಜೀನಾಮೆ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೂವರೆಗೂ ನನ್ನನ್ನು ಯಾರೂ ಸಂಪರ್ಕಿಸಿಲ್ಲ. 20 ಶಾಸಕರು ರಾಜೀನಾಮೆ ಬೇಕಾದ್ರೆ ಕೊಡಲಿ. ತಮ್ಮ ಪಿಎ ವಿಶಾಲಾಕ್ಷಿಗೆ ರಾಜೀನಾಮೆ ಕೊಟ್ಟಿರುವುದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಾದ್ರೂ ರಾಜೀನಾಮೆ ಕೊಡಲಿ, ಬಿಜೆಪಿ ಪಕ್ಷದಿಂದ ಆದ್ರೂ ರಾಜೀನಾಮೆ […]

3 weeks ago

ಸಿದ್ದರಾಮಯ್ಯ ಏನ್ ಆಗಲ್ಲ ಅಂತಾರೊ ಅದಾಗುತ್ತೆ, ಏನು ಆಗುತ್ತೆ ಅಂತಾರೊ ಅದು ಆಗಲ್ಲ: ಈಶ್ವರಪ್ಪ

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಆಗಲ್ಲ ಅಂತಾರೊ ಅದಾಗುತ್ತೆ. ಏನು ಆಗತ್ತೆ ಅಂತಾರೊ ಅದು ಆಗಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಇಂದು ನಗರದಲ್ಲಿ ಟಿ.ಚನ್ನಯ್ಯ ರಂಗ ಮಂದಿರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೆಸರಿಗೆ ಮಾತ್ರ ಸರ್ಕಾರವಿದೆ, ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ಮೈತ್ರಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡರು....

ರಸ್ತೆ ಮಧ್ಯೆ ವ್ಯಾಯಾಮ ಮಾಡಿ ಕ್ರೀಡಾಪಟುಗಳಿಂದ ಪ್ರತಿಭಟನೆ

3 weeks ago

ಕೋಲಾರ: ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆಯನ್ನು ಖಂಡಿಸಿ ಬೆಳ್ಳಂಬೆಳಗ್ಗೆ ಕೋಲಾರದ ಕ್ರೀಡಾಪಟುಗಳೆಲ್ಲ ರಸ್ತೆ ಮಧ್ಯೆ ವ್ಯಾಯಾಮ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ಕ್ರೀಡಾಭಿಮಾನಿಗಳು ಹಾಗೂ ಕ್ರೀಡಾಪಟುಗಳು...

2 ವರ್ಷ, 100 ಪ್ರಕರಣಗಳ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾ.ರೇಖಾ

3 weeks ago

ಕೋಲಾರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ ಜೀವಾವಧಿ ಶಿಕ್ಷೆ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪಿಗೆ 10 ವರ್ಷ ಜೈಲು, 1 ಲಕ್ಷ ರೂ. ದಂಡ ಹೀಗೆ ಒಂದಲ್ಲ ಎರಡಲ್ಲ ಕೇವಲ ಎರಡು ವರ್ಷಗಳಲ್ಲಿ ಬರೋಬ್ಬರಿ 100 ಪ್ರಕರಣಗಳಲ್ಲಿ...

ಕಚೇರಿಯಲ್ಲಿಯೇ ಅಧಿಕಾರಿಗಳಿಂದ ಗುಂಡು, ತುಂಡು ಪಾರ್ಟಿ

3 weeks ago

ಕೋಲಾರ: ಮೀನುಗಾರಿಕಾ ಕಚೇರಿಯಲ್ಲಿ ಅಧಿಕಾರಿಗಳು ಮದ್ಯಪಾನ ಪಾರ್ಟಿ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬೂದಿಕೋಟೆಯ ಮಾರ್ಕಂಡೇಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಹಾರಾಜರ ಕಾಲದ ಮೀನುಮರಿ ಸಾಕಾಣಿಕಾ ಕೇಂದ್ರದಲ್ಲಿ ಅಧಿಕಾರಿಗಳು ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ. ಉಪನಿರ್ದೇಶಕ ಮಹೇಶ್ ಹಾಗೂ...

ನಿಧಿ ಶೋಧ ಮಾಡ್ತಿದ್ದವರಿಗೆ ಗ್ರಾಮಸ್ಥರಿಂದ ಧರ್ಮದೇಟು

3 weeks ago

ಕೋಲಾರ: ಪುರಾತನ ಬೆಟ್ಟವೊಂದರಲ್ಲಿ ನಿಧಿ ಶೋಧ ಮಾಡುತ್ತಿದ್ದ ಐವರನ್ನ ಗ್ರಾಮಸ್ಥರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ತಾಲೂಕಿನ ಅರಾಭಿಕೊತ್ತನೂರು ಬೆಟ್ಟದಲ್ಲಿ ನಿಧಿ ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಐದು ಮಂದಿ ನಿಧಿ ಕಳ್ಳರು ಗ್ರಾಮಸ್ಥರ...

ಫೇಸ್‍ಬುಕ್ ಲೈವ್ ಮಾಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನ

4 weeks ago

ಕೋಲಾರ: ಫೇಸ್ ಬುಕ್ ಲೈವ್ ಮಾಡಿ ವಿಷ ಸೇವಿಸುವ ಮೂಲಕ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಈದ್ಗಾ ಮಸೀದಿ ಬಳಿ ನಡೆದಿದೆ. ಸುಲೇಮಾನ್ (28) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ನಿವಾಸಿಯಾಗಿದ್ದಾರೆ. ಇಂದು...

9 ದಿನ ಸಂಸಾರ ಮಾಡಿ ಪತಿ ಎಸ್ಕೇಪ್- ಗಂಡನ ಮನೆ ಮುಂದೆ ಪತ್ನಿ ಧರಣಿ

4 weeks ago

ಕೋಲಾರ: 9 ದಿನ ಸಂಸಾರ ಮಾಡಿದ ಗಂಡ ಕಾಣೆಯಾಗಿದ್ದು ಈಗ ಪತ್ನಿ ಪತಿಯ ಮನೆ ಮುಂದೆ ಧರಣಿ ಕುಳಿತಿರುವ ಘಟನೆ ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಕೋಲಾರ ತಾಲೂಕಿನ ವೇಮಗಲ್ ಮೂಲದ 24 ವರ್ಷದ ನಾಗವೇಣಿ ಎಂಬವರನ್ನ ಅದೇ...