Saturday, 7th December 2019

Recent News

2 days ago

ಕೊಳವೆ ಬಾವಿಯಿಂದ ಚಿಮ್ಮುತ್ತಿದೆ ತೈಲ ಮಿಶ್ರಿತ ಕೊಳಕು ನೀರು

ಕೋಲಾರ: ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಯಿಂದ ತೈಲ ಮಿಶ್ರಿತ ಕೊಳಕು ನೀರು ಹೊರ ಚಿಮ್ಮುತ್ತಿರುವ ವಿಚಿತ್ರ ಘಟನೆ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಡೆದಿದೆ. ಮಾಲೂರಿನ ಗ್ರೀನ್ ಸಿಟಿ ಶಾಲೆ ಆವರಣದಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗುತ್ತಿದ್ದು, ಕೊಳವೆ ಬಾವಿ ಕೊರೆಯುವ ಯಂತ್ರ 1,300 ಅಡಿ ಆಳ ತಲುಪುತ್ತಿದ್ದಂತೆ ಒಳಗಿನಿಂದ ತೈಲ ಮಿಶ್ರಿತ ಕೊಳಕು ನೀರು ಹೊರಬರಲು ಆರಂಭವಾಗಿದೆ. ಸಾಮಾನ್ಯವಾಗಿ ಕೊಳವೆ ಬಾವಿ ಕೊರೆದರೆ ಮಣ್ಣು ಮಿಶ್ರಿತ ನೀರು ಹೊರಬರುತ್ತದೆ. ಆದರೆ ಗ್ರೀನ್ ಸಿಟಿ ಶಾಲಾ ಆವರಣದಲ್ಲಿ ಕೊರೆದ ಕೊಳವೆ […]

5 days ago

ಕೆಸಿ ವ್ಯಾಲಿಗೆ ಮತ್ತೆ ಕೊಳಚೆ ನೀರು

ಕೋಲಾರ: ಜಿಲ್ಲೆಗೆ ಹರಿದ ಮೊದಲ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ನೀರು ಮತ್ತೆ ಕಪ್ಪು ಬಣ್ಣ, ವಾಸನೆ, ನೊರೆ ಕಾಣಿಸಿಕೊಂಡಿದೆ. ಕೆಮಿಕಲ್ ಮಿಶ್ರಿತ ನೀರು ಜಿಲ್ಲೆಯ ರೈತರು ಹಾಗೂ ಜನರಲ್ಲಿ ಆತಂಕ ಮೂಡಿಸಿದೆ. ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಯುತ್ತಿರುವ ಬೆಂಗಳೂರಿನ ಕೋರಮಂಗಲ-ಚಲ್ಲಘಟ್ಟ ಸಂಸ್ಕರಿಸಿದ ನೀರು ಸದ್ಯ ಜಿಲ್ಲೆಯ 35ಕ್ಕೂ ಹೆಚ್ಚು ಕೆರಗಳನ್ನ ತುಂಬಿದೆ. ಬಯಲುಸೀಮೆ ಕೋಲಾರ...

ಹೋಟೆಲ್ ಒಳಗಡೆ ಹೋಗಿ ಬರುವಷ್ಟರಲ್ಲಿ ಬೈಕ್ ಮಾಯ

1 week ago

ಕೋಲಾರ: ಬೈಕ್ ನಿಲ್ಲಿಸಿ ಹೋಟೆಲ್ ಅಥವಾ ಯಾವುದೇ ಅಂಗಡಿಯೊಳಗೆ ಹೋಗುವ ಮುನ್ನ ಎಚ್ಚರದಿಂದಿರಿ, ಇಲ್ಲವಾದಲ್ಲಿ ಕ್ಷಣಾರ್ಧದಲ್ಲೇ ನಿಮ್ಮ ವಾಹನ ಮಾಯವಾಗುತ್ತದೆ. ಕೋಲಾರದ ಡೂಂ ಲೈಟ್ ವೃತ್ತದಲ್ಲಿರುವ ಹೋಟೆಲ್ ಮುಂಭಾಗ ಈ ಘಟನೆ ನಡೆದಿದೆ. ಪಲ್ಸರ್ ಬೈಕ್ ನಿಲ್ಲಿಸಿ ಒಳಗೆ ಹೋಗಿ ಬರುವಷ್ಟರಲ್ಲಿ...

ಪೊಲೀಸ್ ಸಮವಸ್ತ್ರ ಧರಿಸಿ ದರೋಡೆಗೆ ಇಳಿಯುತ್ತಿದ್ದ ನಾಲ್ವರು ಖದೀಮರು ಅರೆಸ್ಟ್

2 weeks ago

ಕೋಲಾರ: ಪೊಲೀಸ್ ಸಮವಸ್ತ್ರ ಧರಿಸಿ ರಾತ್ರಿ ದರೋಡೆ ಮಾಡುತ್ತಿದ್ದ ನಾಲ್ವರು ಖದೀಮರನ್ನು ಬೆಂಗಳೂರು ಹೊರ ವಲಯದ ಮಾಲೂರು ಪೊಲೀಸರು ಬಂಧಿಸಿದ್ದಾರೆ. ಬಂಗಾರಪೇಟೆ ಮೂಲದ ಅನಿಲ್ ಕುಮಾರ್ (32), ಶೇಷಾದ್ರಿ (21), ರಾಬಿನ್ (21) ಹಾಗೂ ಶಬ್ಬೀರ್ (20) ಬಂಧಿತ ಆರೋಪಿಗಳು. ದರೋಡೆಗೆ...

16 ದಿನದಲ್ಲಿ ಒಂದೇ ಗ್ರಾಮದ 11 ಜನರ ನಿಗೂಢ ಸಾವು- ಗ್ರಾಮಸ್ಥರಲ್ಲಿ ಶುರುವಾಯ್ತು ಆತಂಕ

3 weeks ago

ಕೋಲಾರ: ಗ್ರಾಮದಲ್ಲಿ ಕಳೆದ 16 ದಿನಗಳಿಂದ ನಡೆಯುತ್ತಿರುವ ಸರಣಿ ನಿಗೂಢ ಸಾವು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ ಘಟನೆ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ. ಆಂಧ್ರಪ್ರದೇಶ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಮಕಲಹಳ್ಳಿಯಲ್ಲಿ 16 ದಿನದಲ್ಲಿ 11 ಜನರು ನಿಗೂಢವಾಗಿ ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ಜನರೇ ಕೆಲವು ದಿನಗಳ...

ಹಾಲಾಯ್ತು, ಈಗ ಆಲ್ಕೋಹಾಲ್‍ನಲ್ಲೂ ಕಲಬೆರಕೆ – ಅರ್ಧ ಬಾಟಲ್ ಖಾಲಿ ಮಾಡ್ದಾಗ ಗೊತ್ತಾಯ್ತು ಸತ್ಯ

3 weeks ago

ಕೋಲಾರ: ಬಿಯರ್ ಕುಡಿಯುವಾಗ ಬಾಟಲಿಯಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದ್ದು, ಕೋಲಾರದ ಗ್ರಾಹಕರೊಬ್ಬರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನ ಬೈರಸಂದ್ರ ಬಳಿಯ ಶ್ರೀ ಲಕ್ಷ್ಮೀ ವೈನ್ಸ್‍ನಲ್ಲಿ ಖರೀದಿಸಿದ ಬಿಯರ್ ನಲ್ಲಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ. ಚಿಲ್ಡ್...

ಅಕ್ರಮವಾಗಿ ವಾಸವಿದ್ದು ವೇಶ್ಯಾವಾಟಿಕೆ ನಡೆಸಿದ್ದ ಬಾಂಗ್ಲಾ ಮಹಿಳೆಯರು ಅರೆಸ್ಟ್

4 weeks ago

ಕೋಲಾರ: ಅಕ್ರಮವಾಗಿ ವಾಸವಾಗಿದಿದ್ದು ಅಷ್ಟೇ ಅಲ್ಲದೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಬಾಂಗ್ಲಾದೇಶದ ವಲಸಿಗ ಮಹಿಳೆಯರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿಲ್ಪಿ ಅಕ್ತಾರ್ ಪಾಕಿಯಾ ಹಾಗೂ ರುಬೀಯಾ ಬಂಧಿತ ಬಾಂಗ್ಲಾ ಮೂಲದ ಮಹಿಳೆಯರು. ಈ ಇಬ್ಬರು ಬಂಗಾರಪೇಟೆ ಪಟ್ಟಣದ ದೇಶಿಹಳ್ಳಿಯಲ್ಲಿ ಅಕ್ರಮವಾಗಿ ವಾಸವಿದ್ದು,...

ಎರಡು ವರ್ಷ ಏನು ಮಾಡ್ತಿದ್ರಿ?: ಶಾಸಕಿ ರೂಪಕಲಾಗೆ ಸಾರ್ವಜನಿಕರಿಂದ ತರಾಟೆ

4 weeks ago

ಕೋಲಾರ: ಎರಡು ವರ್ಷ ಏನು ಮಾಡುತ್ತಿದ್ರಿ ಎಂದು ಕೆಜಿಎಫ್ ನಿವಾಸಿಗಳು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ, ಶಾಸಕಿ ರೂಪಕಲಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೆಜಿಎಫ್ ನಗರಸಭೆ ಚುನಾವಣೆ ನವೆಂಬರ್ 12ರಂದು ನಡೆಯಲಿದೆ. ಹೀಗಾಗಿ ಶಾಸಕಿ ರೂಪಕಲಾ ಅವರು ಕಾಂಗ್ರೆಸ್ ಅಭ್ಯರ್ಥಿ ಸೇಂದಿಲ್...