Wednesday, 21st November 2018

Recent News

1 month ago

ಮಡಿಕೇರಿಯಲ್ಲಿ ಗುಂಡಿನ ಸದ್ದು – ಬಾಕಿ ಹಣ ಕೊಡುವಂತೆ ಕೇಳಿದ್ದೇ ತಪ್ಪಾಯ್ತು

ಮಡಿಕೇರಿ: ಹಣ ಕೇಳಿದ್ದಕ್ಕೆ ಕ್ಯಾಂಟೀನ್ ಯುವಕರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ರಾತ್ರಿ ನಡೆದಿದೆ. ನಗರದ ಮಾರ್ಕೆಟ್ ಹಿಂಭಾಗ ಕ್ಯಾಂಟೀನ್ ನಲ್ಲಿ ಈ ದುರ್ಘಟನೆ ನಡೆದಿದೆ. ಕ್ಯಾಂಟೀನ್ ನಡೆಸುತ್ತಿದ್ದ ರಿಯಾಝ್ ಮತ್ತು ಸಮೀಮ್ ಮೇಲೆ ಗುಂಡಿನ ದಾಳಿ ನಡೆದಿದ್ದು, ರಿಯಾಝ್ ತೊಡೆ ಭಾಗಕ್ಕೆ ಹಾಗೂ ಸಮೀಮ್ ಕಾಲಿಗೆ ಗಾಯಗಳಾಗಿದ್ದು, ಇಬ್ಬರು ಗಾಯಾಳುಗಳನ್ನ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟೀನ್ ನಲ್ಲಿ ಯುವಕರು ಎಗ್‍ರೋಲ್ ಪಡೆದು ಹಣ ಕೊಡದೆ ತೆರಳುತ್ತಿದ್ದರು. ಈ […]

1 month ago

ಅಧಿಕಾರ ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ್ರೆ ಹೋಗಲ್ಲ: ಸಿಎಂ ಎಚ್‍ಡಿಕೆ

ಮಡಿಕೇರಿ: ಅಧಿಕಾರಕ್ಕೆ ಬರುವುದು ಮೊದಲೇ ನಿಶ್ಚಯವಾಗಿರುತ್ತೆ, ತಲಕಾವೇರಿಗೆ ಬಂದ ಕೂಡಲೇ ಅಧಿಕಾರ ಹೋಗುವುದಿಲ್ಲವೆಂದು ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ. ಕಾವೇರಿ ತಾಯಿಯ ತೀರ್ಥೋದ್ಭವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೇ ಆಗಲಿ ಅಧಿಕಾರಕ್ಕೆ ಬರುವುದು ಮೊದಲೇ ನಿಶ್ಚಯವಾಗಿರುತ್ತದೆ. ಕೇವಲ ತಲಕಾವೇರಿಗೆ ಬಂದ ಮಾತ್ರಕ್ಕೆ ಅಧಿಕಾರ ಹೋಗುತ್ತದೆ ಎನ್ನುವುದು ಅವರವರ ವಿಚಾರಕ್ಕೆ ಬಿಟ್ಟಿದ್ದು, ತಲಕಾವೇರಿಗೆ ಬಂದರೆ ಅಧಿಕಾರ...

ಎಂಪಿ ಚುನಾವಣೆಗೆ ಬಿಜೆಪಿಯಿಂದ ಟಿಪ್ಪು ಜಯಂತಿ ಅಸ್ತ್ರ: ನಾಣಯ್ಯ ವ್ಯಂಗ್ಯ

1 month ago

ಮಡಿಕೇರಿ: ಚುನಾವಣೆ ಉದ್ದೇಶದಿಂದ ಟಿಪ್ಪು ಜಯಂತಿಯನ್ನು ವಿರೋಧಿಸಿ, ಸಮಾಜದ ಸ್ವಾಸ್ಥ್ಯ ಹಾಳುಮಾಡುವವರ ವಿರುದ್ಧ ಕಠಿಣ ಕ್ರಮಗೊಳ್ಳಬೇಕು ಎಂದು ಹಿರಿಯ ರಾಜಕಾರಣಿ ಎಂ.ಸಿ ನಾಣಯ್ಯ ಹೇಳಿದ್ದಾರೆ. ಮಾಧ್ಯಮಗಳ ಜೊತೆಗೆ ಇಂದು ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಟಿಪ್ಪು ಜಯಂತಿಯನ್ನು ಬಿಜೆಪಿ...

ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭ!

1 month ago

ಮಡಿಕೇರಿ: ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿಯಲ್ಲಿ ಬುಧವಾರ ಸಂಜೆ 6 ಗಂಟೆ 43 ನಿಮಿಷಕ್ಕೆ ಮೇಷ ಲಗ್ನದಲ್ಲಿ ಬ್ರಹ್ಮ ಕುಂಡಿಕೆಯಿಂದ ತೀರ್ಥೋದ್ಭವ ಉಕ್ಕಿ ಬರಲಿದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ...

ಮಡಿಕೇರಿ ಮಹಾಮಳೆಗೆ ತತ್ತರಿಸಿದ ಜೀವಗಳಿಗೆ ಬೇಕಿದೆ ನೆಮ್ಮದಿಯ ಸೂರು!

1 month ago

ಮಡಿಕೇರಿ: ಕೊಡಗಿನ ಮಹಾಮಳೆಗೆ ಸಂತ್ರಸ್ತರಾಗಿ ಸೂರು ಕಳೆದುಕೊಂಡ ಇಬ್ಬರು ಸಹೋದರಿಯರು ಸಹಾಯಕ್ಕಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಕೊಡಗು ಸಂಪಾಜೆ ಸಮೀಪದ ಕೊಯನಾಡಿನ ನಿವಾಸಿಗಳಾದ 80 ವರ್ಷದ ಸಾಯಿಬಾ ಮತ್ತು ಅಂಗವಿಕಲ ತಂಗಿ ಸೈನಬಾ ಇಬ್ಬರು ಯಾವುದೇ ಕ್ಷಣದಲ್ಲಿ ಬೀಳುವ...

ಜಲಪ್ರಳಯದ ನಂತ್ರ ಮಡಿಕೇರಿಯಲ್ಲಿ 9 ದಿನ ಸರಳ ದಸರಾ ಆಚರಣೆ

1 month ago

ಮಡಿಕೇರಿ: ನಾಡಹಬ್ಬ ಐತಿಹಾಸಿಕ ದಸರಾಕ್ಕೆ ಮಡಿಕೇರಿಯಲ್ಲಿ ಚಾಲನೆ ಸಿಕ್ಕಿದೆ. ನಗರದ ನಾಲ್ಕು ಶಕ್ತಿದೇವತೆಯ ಕರಗಗಳು ಸಾಂಪ್ರದಾಯಿಕವಾಗಿ ನಗರ ಪ್ರದಕ್ಷಿಣೆ ಆರಂಭಿಸಿವೆ. ಜಲಪ್ರಳಯ ಹಿನ್ನಲೆ ಇದೇ ಮೊದಲ ಬಾರಿಗೆ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸಲಾಗ್ತಿದ್ದು, 10 ದಿನಗಳ ಕಾಲ ಅದ್ಧೂರಿಯಿಂದ ನಡೆಯುತ್ತಿದ್ದ ದಸರಾ...

ಮೃತದೇಹ ಸಿಗದ್ದಕ್ಕೆ ಗೊಂಬೆ ಅಲಂಕರಿಸಿ, ಮದುವೆ ಮಾಡಿಸಿ ಮಗಳ ಅಂತ್ಯಸಂಸ್ಕಾರ ನೆರವೇರಿಸಿದ ಹೆತ್ತವರು!

1 month ago

ಮಡಿಕೇರಿ: ಮಹಾಮಳೆಗೆ ಕೊಚ್ಚಿ ಹೋಗಿದ್ದ ಮಗಳ ಮೃತದೇಹ ಪತ್ತೆಗಾಗಿ ಪೋಷಕರು ಹುಡುಕಾಡಿದರೂ ಶವ ಮಾತ್ರ ಪತ್ತೆಯಾಗಲೇ ಇಲ್ಲ. ಕೊನೆಗೆ ಮಗಳ ಆತ್ಮಕ್ಕೆ ಶಾಂತಿ ದೊರಕಲು ಗೊಂಬೆಯನ್ನು ಅಲಂಕರಿಸಿ, ಮದುವೆ ಮಾಡಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಮನಕಲಕುವ ಘಟನೆ ಕೊಡಗಿನ ಮದೆನಾಡಿನಲ್ಲಿ ನಡೆದಿದೆ. ಮಡಿಕೇರಿ...

ಅಮಾವಾಸ್ಯೆಯೆಂದು ಚಿಕಿತ್ಸೆ ನೀಡದೆ ಮಾನವೀಯತೆ ಮರೆತ ಸರ್ಕಾರಿ ವೈದ್ಯೆ

1 month ago

ಮಡಿಕೇರಿ: ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುವ ವೈದ್ಯ ಕುಲಕ್ಕೆ ಅವಮಾನವಾಗುವಂತೆ ವೈದ್ಯನೊಬ್ಬ ಮಹಾಲಯ ಅಮಾವಾಸ್ಸೆಗೆ ರಜೆ ಇದೆ ಎಂದು ನೆಪವೊಡ್ಡಿ ರೋಗಿಗೆ ಚಿಕಿತ್ಸೆ ನೀಡದೆ ಮಾನವೀಯತೆಯನ್ನು ಮರೆತಿದ್ದಾರೆ. ಕುಶಾಲನಗರದ ವೈದ್ಯಾಧಿಕಾರಿ ವಸುಂದರಾ ಹೆಗ್ಡೆ ರೋಗಿಗೆ ಚಿಕಿತ್ಸೆ ನೀಡದೇ ಅಸಡ್ಡೆಯ...