Monday, 10th December 2018

Recent News

1 day ago

ನನ್ನ ತಂಟೆಗೆ ಬರಬೇಡ ಬಿಟ್ಟು ಬಿಡು – ಮಿಂಚಿನ ಓಟ ಬೀರಿದ ಹೋರಿಗಳು

ಹಾವೇರಿ: ಜನರ ಕೇಕೆ, ಸಿಳ್ಳೆಗಳ ಸುರಿಮಳೆಯ ನಡುವೆ ಅಲಂಕಾರಗೊಂಡಿದ್ದ ಒಂದೊಂದೇ ಹೋರಿಗಳು ಗೆಲುವು ನನ್ನದೇ ಅಂತಾ ಮಿಂಚಿನ ಓಟ ಪ್ರದರ್ಶಿಸುತ್ತಿದ್ದ ದೃಶ್ಯಗಳು ಹಾವೇರಿ ತಾಲೂಕು ದೇವಿಹೊಸೂರು ಗ್ರಾಮದಲ್ಲಿ ಕಂಡುಬಂದಿತು. ಕೊಬ್ಬರಿ ಹಾರ, ಪೀಪಿ, ಬಲೂನ್ ಸರಗಳನ್ನು ಹಾಕಿಕೊಂಡು ಶರವೇಗದಲ್ಲಿ ಓಡುತ್ತಿದ್ದ ಹೋರಿ ಓಟ ನೋಡುವುದೇ ನೆರೆದಿದ್ದ ಜನರಿಗೆ ಕಣ್ಣಿಗೆ ಹಬ್ಬವಾಗಿತ್ತು. ದೇವಿಹೊಸೂರು ಗ್ರಾಮದ ಗೆಳೆಯ ಬಳಗದವರು ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಸುಮಾರು ಹತ್ತು ವರ್ಷಗಳಿಂದ ಇಂತಹ ಸ್ಪರ್ಧೆ ನಡೆಸಲಾಗುತ್ತಿದೆ. ಹಾವೇರಿ, ಶಿವಮೊಗ್ಗ ಸೇರಿದಂತೆ ವಿವಿಧ […]

6 days ago

ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯ ಕೊಲೆ

ಹಾವೇರಿ: ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಗೃಹಿಣಿಯನ್ನು ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. ಮೃತ ಗೃಹಿಣಿಯನ್ನ ಸುಮಾ ಕೆರ್ನೆಲ್ಲಿ(23) ಎಂದು ಗುರುತಿಸಲಾಗಿದೆ. 2015ರಲ್ಲಿ ಮಾಲತೇಶ್ ಜೊತೆ ಸುಮಾಳ ಮದುವೆ ಆಗಿತ್ತು. ಮದುವೆ ನಂತರ ಪತಿ ಹಾಗೂ ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ...

ಕಾಂಗ್ರೆಸ್ ಮುಖಂಡನಿಂದ್ಲೇ ಮಗಳಿಗೆ ಕಿರುಕುಳ- ಪ್ರೀತ್ಸಿ ಮದ್ವೆಯಾದಾಕೆ ತಂದೆಗೆ ಮನವಿ

2 weeks ago

ಹಾವೇರಿ: ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಮಗಳಿಗೆ ಕಾಂಗ್ರೆಸ್ ಮುಖಂಡನೊಬ್ಬ ಕಿರುಕುಳ ಕೊಡುತ್ತಿದ್ದು, ರಕ್ಷಣೆಕೋರಿ ಹಾವೇರಿ ಎಸ್‍ಪಿ ಕಚೇರಿಗೆ ನವಜೋಡಿ ಆಗಮಿಸಿದ್ದಾರೆ. ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕೆರೆಮಲ್ಲಾಪುರದ ಜಯವರ್ದನ್ ಹಾಗೂ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ನಿಖಿತಾ ಮಹಾನಶೆಟ್ಟರ್...

ಬಾಲ ರಾಮಾಚಾರಿಯಾಗಿ ವಿಷ್ಣು ಪಾತ್ರಕ್ಕೆ ಜೀವ- ದಿವ್ಯಾಂಗರು, ಗರ್ಭಿಣಿಯರಿಗೆ ಉಚಿತ ಊಟ ನೀಡ್ತಿದ್ದಾರೆ ಹೇಮಚಂದ್ರ..!

2 weeks ago

ಹಾವೇರಿ: ಕನ್ನಡ ಅಲ್ಲ ಭಾರತ ಸಿನಿ ಇತಿಹಾಸದ ಪುಟ ಸೇರಿರೋದು ನಾಗರಹಾವು. ಈ ಚಿತ್ರದ ಮೂಲಕ ಎಂಟ್ರಿಕೊಟ್ಟ ವಿಷ್ಣುವರ್ಧನ್, ಅಂಬರೀಶ್ ದಿಗ್ಗಜರಾಗಿದ್ದಾರೆ. ಚಿತ್ರದಲ್ಲಿ ಹೇಮಚಂದ್ರ ಬಾಲರಾಮಾಚಾರಿಯಾಗಿ ಕಾಣಿಸಿಕೊಂಡಿದ್ದರು. ಅವರೀಗ ಸಮಾಜಮುಖಿ ಕಾರ್ಯದಲ್ಲಿ ನಿರತರಾಗಿದ್ದು, ಪಬ್ಲಿಕ್ ಹೀರೋ ಆಗಿದ್ದಾರೆ. ಹೇಮಚಂದ್ರ ಅವರು ನಾಗರಹಾವು...

16ರ ಮಗನ ಜೊತೆ ತಂದೆಯ ಬರ್ಬರ ಹತ್ಯೆ

2 weeks ago

ಹಾವೇರಿ: ಕೊಡಲಿಯಿಂದ ಹೊಡೆದು ತಂದೆ ಮತ್ತು ಮಗನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಗುಡ್ಡದಮುತ್ತಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ಯೆಯಾದವರನ್ನ ಮಾಹಾಂತೇಶ ಕುರುಬರ(40) ಮತ್ತು ಮಗ ಚಂದ್ರು ಕುರುಬರ(16) ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರಕ್ಕಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ...

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೂ ನಿಂತು ನೋಡಿ ಮಾನವೀಯತೆ ಮರೆತ್ರು!

3 weeks ago

ಹಾವೇರಿ: ಬೈಕ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಸವಾರ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳುತ್ತಿದ್ದರೂ ಯಾರೊಬ್ಬರೂ ಆಸ್ಪತ್ರೆಗೆ ಸೇರಿಸದೇ ಅಮಾನವೀಯತೆ ಮೆರೆದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹಾನಗಲ್ ತಾಲೂಕಿನ ಹಿರೇಕಾಂಶಿ ಗ್ರಾಮದ ನಿವಾಸಿ ಗದಿಗೆಯ್ಯ ಹಿರೇಮಠ (38)...

ಶಾಸಕ ಬಿಸಿ ಪಾಟೀಲ್‍ಗೆ ಸಿಹಿ ಸುದ್ದಿಕೊಟ್ಟ ಜಮೀರ್ ಅಹ್ಮದ್!

3 weeks ago

ಹಾವೇರಿ: ಸಮ್ಮಿಶ್ರ ಸರ್ಕಾರದ ರಚನೆಯಾದ ಬಳಿಕ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಶಾಸಕ ಬಿಸಿ ಪಾಟೀಲ್ ಅವರಿಗೆ ಮುಂದಿನ ಸಚಿವ ಸಂಪುಟ ವಿಸ್ತರಣೆಗೆ ವೇಳೆ ಮಂತ್ರಿಸ್ಥಾನ ನೀಡಲಾಗುವುದು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,...

ವಾಹನದ ಹಿಂಭಾಗದಲ್ಲಿ ಚಾಲಕ ನೇಣು ಬಿಗಿದು ಆತ್ಮಹತ್ಯೆ

3 weeks ago

ಹಾವೇರಿ: ವಾಹನದ ಹಿಂಭಾಗದಲ್ಲಿಯೇ ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿಯ ಆರ್.ಟಿ.ಕಚೇರಿಯ ಬಳಿ ನಡೆದಿದೆ. ಮೃತ ಚಾಲಕನನ್ನು ಕರಬಸಪ್ಪ ನಾಗಮ್ಮನವರ್(45) ಎಂದು ಗುರುತಿಸಲಾಗಿದೆ. ಕರಬಸಪ್ಪ ಹಾವೇರಿ ತಾಲೂಕು ಚಿಕ್ಕಲಿಂಗದಹಳ್ಳಿ ಗ್ರಾಮದ ನಿವಾಸಿ ಎಂದು ಹೇಳಲಾಗುತ್ತಿದೆ. ಕರಬಸಪ್ಪ ಎರಡು ಗೂಡ್ಸ್...