Friday, 23rd August 2019

21 hours ago

ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ – ಡ್ರಾಪ್ ಪಡೆದಿದ್ದ ತಾಯಿ, ಮಗ ಸೇರಿ ಮೂವರ ದುರ್ಮರಣ

ಹಾಸನ: ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕಾಟ್ನಾಳು ಗ್ರಾಮದ ಬಳಿ ನಡೆದಿದೆ. ಬೈಕ್ ಸವಾರ ಮಣಿ(27), ಮಂಜುಳ(35) ಮತ್ತು ಮಗ ಆಕಾಶ್(9) ಮೃತ ದುರ್ದೈವಿಗಳು. ಮೃತರು ರಾಮನಾಥಪುರ ಮೂಲದವರು ಎಂದು ತಿಳಿದು ಬಂದಿದೆ. ಬುಧವಾರ ರಾತ್ರಿ ತಾಯಿ ಮತ್ತು ಮಗ ರಾಮನಾಥಪುರದಿಂದ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್ ಸವಾರ ಮಣಿ ಬಳಿ ಡ್ರಾಪ್ ಕೇಳಿ ಬೈಕ್ ಹತ್ತಿದ್ದಾರೆ. ಆದರೆ ಸವಾರನ ನಿರ್ಲಕ್ಷ್ಯದಿಂದ […]

2 days ago

ಯೇಸುವಿನ ಹೆಸರಿನಲ್ಲಿ ಕ್ರೈಸ್ತ ದಂಪತಿ ಬಳಿ ಲಕ್ಷಾಂತರ ರೂ. ದೋಚಿದ ಕಳ್ಳ

ಹಾಸನ: ಇತ್ತೀಚಿಗೆ ಆನ್‍ಲೈನ್ ದೋಖಾಗಳು ಪದೆ ಪದೇ ನಡೆಯುತ್ತಲೇ ಇದ್ದರೂ ಕೂಡ ಕೆಲವು ಮುಗ್ಧರು ಬಲಿಯಾಗುತ್ತಲೆ ಇದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಜಿಲ್ಲೆಯ ದಂಪತಿ ಕ್ರೈಸ್ತ ಧರ್ಮ ಮತ್ತು ಯೇಸುವಿನ ಹೆಸರಿನಲ್ಲಿ ಮೋಸಹೋಗಿದ್ದಾರೆ. ಫೇಸ್ ಬುಕ್‍ನಲ್ಲಿ ಪರಿಚಯದ ವ್ಯಕ್ತಿ ಗಿಫ್ಟ್ ಕಳುಹಿಸುತ್ತೇನೆ ಎಂದು ಒಂದು ಲಕ್ಷದ ಎಪ್ಪತ್ತು ಸಾವಿರ ಪಂಗನಾಮ ಹಾಕಿರುವ ಘಟನೆ ಬೆಳಕಿಗೆ...

ಹಳೆ ಮೈಸೂರು ಭಾಗದಲ್ಲಿ ಒಬ್ಬರಿಗೂ ಸಿಕ್ಕಿಲ್ಲ ಮಂತ್ರಿಗಿರಿ

3 days ago

ಬೆಂಗಳೂರು: ದೋಸ್ತಿ ಸರ್ಕಾರದಲ್ಲಿ ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಹೌದು. ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಸಿಎಂ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ....

ಮಹಾಮಳೆಗೆ ಕೊಚ್ಚಿಹೋಯ್ತು 50 ಲಕ್ಷ ವೆಚ್ಚದ ಸೇತುವೆ- 15 ಹಳ್ಳಿಗಳ ಸಂಪರ್ಕ ಕಡಿತ

6 days ago

ಹಾಸನ: ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆಯೊಂದು ಕೊಚ್ಚಿಹೋಗಿದ್ದು, ತಾಲೂಕು ಕೇಂದ್ರ ಬೇಲೂರಿನ ಜೊತೆ 15 ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಸಾಕಷ್ಟು ಅನಾಹುತ ಸೃಷ್ಟಿಸಿತ್ತು. ಮಳೆ ನಿಂತ ಬಳಿಕ...

ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರು ಸ್ಥಳದಲ್ಲೇ ಸಾವು

1 week ago

ಹಾಸನ: ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರ ತಾಲೂಕು ಸಿಗರನಹಳ್ಳಿ ಬಳಿ ನಡೆದಿದೆ. ಅಪಘಾತದಲ್ಲಿ ಸಿಗರನಹಳ್ಳಿ ನಿವಾಸಿಗಳಾದ 23 ವರ್ಷದ ಉಮೇಶ್ ಮತ್ತು 22 ವರ್ಷದ ಹರೀಶ್ ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ...

ಮಹಾಮಳೆಗೆ ಹಾಸನದಲ್ಲಿ ಮೂವರು ಬಲಿ

1 week ago

ಹಾಸನ: ಮಹಾಮಳೆಗೆ ಹಾಸನ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.  ಮೃತರನ್ನು ರಂಗಮ್ಮ (60), ಪುಷ್ಪಾ(40) ಹಾಗೂ ಪ್ರಕಾಶ್(61) ಎಂದು ಗುರುತಿಸಲಾಗಿದೆ. ಹಾಸನ ತಾಲೂಕಿನ ಕೌಶಿಕ ಗ್ರಾಮದಲ್ಲಿ ಆಗಸ್ಟ್ 9 ರಂದು ಮನೆ ಕುಸಿದಿತ್ತು. ಮನೆಯ ಅವಶೇಷಗಳಡಿ ರಂಗಮ್ಮ ಸಿಲುಕಿ ಗಾಯಗೊಂಡಿದ್ದರು....

ತುರ್ತು 100 ಕೋಟಿ ರೂ. ಬಿಡುಗಡೆ – ಯಾವ ಜಿಲ್ಲೆಗೆ ಎಷ್ಟು ಕೋಟಿ?

2 weeks ago

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಗಳಿಗೆ ನೆರವಾಗಲು ಸರ್ಕಾರ 15 ಜಿಲ್ಲೆಗಳಿಗೆ ಒಟ್ಟಾಗಿ ತುರ್ತು 100 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಹಾನಿಯಾಗಿರುವ ಬೆಳಗಾವಿಗೆ 25 ಕೋಟಿ ರೂ. ಬಿಡುಗಡೆ ಮಾಡಿದ್ದರೆ ಬಾಗಲಕೋಟೆ...

ಸಕಲೇಶಪುರದಲ್ಲಿ ಗುಡ್ಡ ಕುಸಿತ, ಮಂಗ್ಳೂರು ಹೆದ್ದಾರಿ ಬಂದ್ – ಮಡಿಕೇರಿಯಿಂದ ತೆರಳುವಂತೆ ಮನವಿ

2 weeks ago

ಹಾಸನ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರ ಬಂದ್ ಆಗಿದೆ. ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ಪರದಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ...