Saturday, 21st July 2018

Recent News

2 days ago

ಮಂಗ್ಳೂರಲ್ಲಿ ನೋಡ ನೋಡುತ್ತಲೇ ಹೊತ್ತಿ ಉರಿದ KTM ಬೈಕ್!

ಮಂಗಳೂರು: ನಗರದ ಎಸ್.ಡಿ.ಎಂ ಕಾನೂನು ಕಾಲೇಜು ಮುಂಭಾಗದಲ್ಲಿ ನಿಲ್ಲಿಸಿದ್ದ ಕೆಟಿಎಮ್ ಬೈಕೊಂದು ನೋಡ ನೋಡುತ್ತಲೇ ಬೆಂಕಿ ಹೊತ್ತಿಕೊಂಡು ಉರಿದು ಬೂದಿಯಾದ ಘಟನೆ ನಡೆದಿದೆ. ವಿದ್ಯಾರ್ಥಿ ಕಾಲೇಜು ಮುಂಭಾಗ ಬೈಕ್ ನಿಲ್ಲಿಸಿ ಕಾಲೇಜಿಗೆ ಹೋಗಿದ್ದಾನೆ. ಆದರೆ ವಿದ್ಯಾರ್ಥಿ ಹೋದ ಕೆಲ ಹೊತ್ತಿನಲ್ಲೇ ಧಗ ಧಗನೆ ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ. ಮೊದಲು ಬೈಕಿನ ಪೆಟ್ರೋಲ್ ಟ್ಯಾಂಕಿಗೆ ಬೆಂಕಿ ಹತ್ತಿ ಇಡೀ ಬೈಕ್ ಸುಟ್ಟು ಹೋಗಿದೆ. ಬಳಿಕ ಬೈಕಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಓಡಿ […]

3 days ago

ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗ್ಲೇ ಸುದ್ದಿ ಕೇಳಿ ಆಘಾತವಾಯ್ತು- ವೀರೇಂದ್ರ ಹೆಗ್ಗಡೆ

ಮಂಗಳೂರು: ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಶಿರೂರು ಶ್ರೀಗಳ ಆರೋಗ್ಯ ಸರಿಯಿಲ್ಲವೆಂದು ತಿಳಿದುಪಟ್ಟೆ. ಹೀಗಾಗಿ ಸ್ವಾಮಿಯ ಪೂಜೆ ಸಲ್ಲಿಸಿದ ಬಳಿಕ ಅವರ ಆರೋಗ್ಯದ ಬಗ್ಗೆ ವಿಚಾರಿಸುವ ಕುರಿತು ಯೋಚಿಸುತ್ತಿರುವಾಗಲೇ ಶಿರೂರು ಶ್ರೀ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ ಅಂತ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೀಗ ಶಿರೂರು...

ಮತ್ತೆ ದ.ಕ ಜಿಲ್ಲೆಯಲ್ಲಿ ವರ್ಷಧಾರೆ – 8ನೇ ದಿನ ಮುಳುಗಿದ ಹೊಸ್ಮಠ ಸೇತುವೆ, ಕುಮಾರಾಧಾರ ಸ್ನಾನ ಘಟ್ಟ

6 days ago

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವರುಣ ಮತ್ತೆ ಅಬ್ಬರಿಸಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಹಲವು ಅನಾಹುತಗಳು ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕಡಬದ ಹೊಸ್ಮಠ ಸೇತುವೆ ಸತತ ಎಂಟನೇ ದಿನವೂ ಮುಳುಗಡೆಯಾಗುತ್ತಿದ್ದು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ...

ಕಾಡಿನಿಂದ ನಾಡಿಗೆ ಬಂದ 10 ಅಡಿ ಉದ್ದದ ಕಾಳಿಂಗ ಸರ್ಪ!

6 days ago

ಮಂಗಳೂರು: ಕಾಡಿನಿಂದ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಮರಳಿ ಕಾಡಿಗಟ್ಟಿದ ಪ್ರಸಂಗ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ. ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶಕ್ಕೆ ಬರುತ್ತವೆ. ಭಾರೀ ವಿಷಯುಕ್ತ ಆಗಿರುವ ಈ ಹಾವುಗಳನ್ನು...

ಯುವತಿಯ ನಗ್ನ ಫೋಟೋ ವೈರಲ್ ಮಾಡಿದವರು ಅರೆಸ್ಟ್!

1 week ago

ಮಂಗಳೂರು: ಯುವತಿಯ ನಗ್ನ ಫೋಟೋವನ್ನು ವೈರಲ್ ಮಾಡಿದ ಮೂವರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಪೊಲೀಸರು ಬಂಧಿಸಿದ್ದಾರೆ. ಸಂದೇಶ್, ಜಗದೀಶ್ ಮತ್ತು ನವೀನ್ ಬಂಧಿತ ಆರೋಪಿಗಳು. ಮೊದಲು ಸಂದೇಶ್ ಯುವತಿಯನ್ನು ಪರಿಚಯ ಮಾಡಿಕೊಂಡು ಪುಸಲಾಯಿಸಿ ನಗ್ನ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದನು....

#KumaraswamynotmyCm- ಎಚ್ ಡಿಕೆ ವಿರುದ್ಧ ಕರಾವಳಿಯ ಜನರಿಂದ ಆನ್‍ಲೈನ್ ಹೋರಾಟ

1 week ago

ಮಂಗಳೂರು: ಕುಮಾರಸ್ವಾಮಿ ನಾಟ್ ಮೈ ಸಿಎಂ. ಇದು ಬಜೆಟ್ ನಲ್ಲಿ ಕಿಂಚಿತ್ತೂ ಅನುದಾನ ನೀಡದ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಕರಾವಳಿಯ ಜನ ಸಾಮಾಜಿಕ ಜಾಲತಾಣದಲ್ಲಿ ಹೋರಾಟ ಮಾಡುತ್ತಿದ್ದಾರೆ. ಕುಮಾರಸ್ವಾಮಿ ನಾಟ್ ಮೈ ಸಿಎಂ ಎಂಬ ಫೇಸ್‍ಬುಕ್ ಪೇಜ್ ನಲ್ಲಿ ಸಿಎಂ...

21 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾದ್ರೂ ಸೋರುವ ಕಟ್ಟಡದಲ್ಲೇ ಶಿಶು, ಬಾಣಂತಿಯರು!

1 week ago

ಮಂಗಳೂರು: ನಗರದ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳು ಮಳೆಗಾಲದಲ್ಲಿ ಪಡುವ ದುಸ್ಥಿತಿ ಯಾರಿಗೂ ಬೇಡ. ಹಳೆ ಆಸ್ಪತ್ರೆ ಎದುರಲ್ಲೇ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದೆ. ಎಂಆರ್ ಪಿಎಲ್ ಸಹಯೋಗದಲ್ಲಿ 21 ಕೋಟಿ ವೆಚ್ಚದಲ್ಲಿ 290 ಹಾಸಿಗೆ ಸಾಮಥ್ರ್ಯದ ಆರು ಅಂತಸ್ತಿನ...

ತ್ರಿಮೂರ್ತಿಗಳಿಂದಾಗಿ ನನ್ನ ರಾಜಕೀಯ ಜೀವನ ಹಾಳಾಯ್ತು: ಆತ್ಮಚರಿತ್ರೆಯಲ್ಲಿ ಕೈ ನಾಯಕರ ಬಗ್ಗೆ ಬಿ.ಎ.ಮೊಯಿದ್ದೀನ್ ಅಸಮಾಧಾನ

1 week ago

ಮಂಗಳೂರು: ಮಾಜಿ ಸಚಿವ ಬಿ.ಎ.ಮೊಯ್ದೀನ್ ಮೊನ್ನೆಯಷ್ಟೆ ನಿಧನರಾಗಿದ್ದಾರೆ. ಆದರೆ, ಅದಕ್ಕೂ ಮುನ್ನ ಮೊಯಿದ್ದೀನ್ ಬರೆದಿಟ್ಟ ಆತ್ಮಚರಿತ್ರೆ ಕಾಂಗ್ರೆಸ್ ರಾಜಕೀಯ ವಲಯದಲ್ಲಿ ಸದ್ದು ಮಾಡುವ ಲಕ್ಷಣ ಕಂಡುಬಂದಿದೆ. ತನ್ನನ್ನು ರಾಜಕೀಯದಲ್ಲಿ ಮೇಲೆ ಬರದಂತೆ ತುಳಿದು ಹಿಂಡಿ ಹಿಪ್ಪೆ ಮಾಡಿದ್ದು ಜನಾರ್ದನ ಪೂಜಾರಿ, ಆಸ್ಕರ್...