Tuesday, 16th October 2018

8 hours ago

ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

ಚಾಮರಾಜನಗರ: ಆಪ್ತ ಸಹಾಯಕನಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಕಾರಿನಲ್ಲಿದ್ದ ಚಪ್ಪಲಿಯನ್ನು ಆತ ನನ್ನ ಬಳಿ ತಂದಾಗ ಹಾಗೆ ತರಬಾರದು ಎಂದು ಹೇಳಿದೆ. ನನ್ನ ಚಪ್ಪಲಿ ಮುಟ್ಡಿದ್ದ ಆತನನ್ನು ಮುಟ್ಟಿ ನಮಸ್ಕರಿಸಿ ನಾನೇ ಚಪ್ಪಲಿ ಧರಿಸಿಕೊಂಡಿದ್ದೇನೆ. ನಾನು ಮಾನವೀಯತೆಗೆ ಬೆಲೆ ಕೊಡುವ ಮನುಷ್ಯ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲರನ್ನು ಸರಿಸಮನಾಗಿ ಕಾಣುವ ಗುಣ ನನ್ನದು. ಮಾಧ್ಯಮಗಳಲ್ಲಿ ಬಂದ ವರದಿಯಿಂದ ಮನ ನೊಂದಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ […]

1 day ago

ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ. ಪುಟ್ಟರಂಗಶೆಟ್ಟಿ ತುಂಬಾ ಸರಳ ವ್ಯಕ್ತಿ ಎಂದೇ ಹೆಸರಾದವರು. ಆದರೆ ಯಾಕೋ ಸಚಿವರಾದ ನಂತರ ಅಧಿಕಾರದ ಮದದಿಂದ ವರ್ತಿಸುತ್ತಿದ್ದಾರಾ ಎನ್ನುವ ಅನುಮಾನ ಎದ್ದಿದೆ. ಇಂದು ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿಗೆ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು...

ಮೈಸೂರು ದಸರಾ 2018: `ಕೈ’ ನಾಯಕರ ಗೈರು ಹಿಂದಿನ ರಹಸ್ಯ ಬಿಚ್ಚಿಟ್ರು ಪುಟ್ಟರಂಗ ಶೆಟ್ಟಿ

5 days ago

ಚಾಮರಾಜನಗರ: ಮೈಸೂರು ದಸರಾ ನಾಡಹಬ್ಬದಲ್ಲಿ ಈ ಹಿಂದಿನಿಂದಲೂ ಚಾಮರಾಜನಗರ, ಮೈಸೂರು ಉಸ್ತುವಾರಿ ಸಚಿವರು ಹಾಗೂ ಸಿಎಂ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಉಸ್ತುವಾರಿಯಾಗಿರುವ ಸಚಿವ ಜಿ.ಟಿ ದೇವೇಗೌಡ ಅವರು ತಮ್ಮ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ...

ಪ್ರಪಾತಕ್ಕೆ ಉರುಳಿದ ಬಸ್ – ಇಬ್ಬರ ಸಾವು, 39ಕ್ಕೂ ಹೆಚ್ಚು ಮಂದಿಗೆ ಗಾಯ

1 week ago

ಚಾಮರಾಜನಗರ: ಪ್ರಪಾತಕ್ಕೆ ಬಸ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿದ್ದು, 39ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ತಮಿಳುನಾಡಿನ ದಿಂಬಮ್ ಘಾಟ್ ಬಳಿ ಜರುಗಿದೆ. ಶುಕ್ರವಾರ ಸಂಜೆ ಖಾಸಗಿ ಬಸ್ ಮೈಸೂರಿನಿಂದ ತಮಿಳುನಾಡಿಗೆ ಹೋಗುತ್ತಿತ್ತು. ಈ ವೇಳೆ ಬಸ್ ದಿಂಬಮ್ ಘಾಟ್ ನ...

ಕಾಂಗ್ರೆಸ್, ಜೆಡಿಎಸ್ ವಿರುದ್ಧವೇ ಶಿಕ್ಷಣ ಸಚಿವ ಎನ್. ಮಹೇಶ್ ಕಿಡಿ

2 weeks ago

ಚಾಮರಾಜನಗರ: ಜಾತಿ ವ್ಯವಸ್ಥೆ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಬಿಜೆಪಿ, ಕಾಂಗ್ರೆಸ್, ಜನತಾದಳ ಅಸ್ತಿತ್ವದಲ್ಲಿರುತ್ತವೆ. ಜಾತಿ ವ್ಯವಸ್ಥೆ ಅಸಮಾನತೆ ಯಾವತ್ತು ಕೊನೆಗೊಳ್ಳುತ್ತದೋ ಆ ದಿನ ಬಸವಣ್ಣನ ಪಕ್ಷವಾದ ಬಹುಜನ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬರುತ್ತದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಮೈತ್ರಿ...

ಇಂದಿನಿಂದಲೇ ಶಿಕ್ಷಕರ ವರ್ಗಾವಣೆ ಆರಂಭ: ಎನ್. ಮಹೇಶ್

2 weeks ago

ಚಾಮರಾಜನಗರ: ಇಂದಿನಿಂದಲೇ ಶಿಕ್ಷಕರ ವರ್ಗಾವಣೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಎನ್ ಮಹೇಶ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಶಿಕ್ಷಕರ ವರ್ಗಾವಣೆಯಲ್ಲಿ ಸಣ್ಣಪುಟ್ಟ ಗೊಂದಲಗಳು ಇದ್ದವು. ಹೀಗಾಗಿ ವರ್ಗಾವಣೆಯನ್ನು ಎರಡು ದಿನಗಳ ಕಾಲ ತಡೆ ಹಿಡಿಯಲಾಗಿತ್ತು. ಇದೀಗ ಕಾನೂನು ತಜ್ಞರ...

ಚಾಮರಾಜನಗರದಲ್ಲಿ ಲೋಕಾರ್ಪಣೆಯಾಯ್ತು ಡಿಜಿಟಲ್ ಲೈಬ್ರರಿ

2 weeks ago

ಚಾಮರಾಜನಗರ: 1 ರಿಂದ 12 ನೇ ತರಗತಿ ವರೆಗಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲೆಯ ಕೊಳ್ಳೇಗಾಲದಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆಯಾಗಿದೆ. ಸಾರ್ವಜನಿಕ ಗ್ರಂಥಾಲಯ ಹಾಗೂ ಕೇರಳದ ಸಾಯಿ ಸಂಜೀವಿನಿ ಚಾರಿಟೇಬಲ್ ಸಹಯೋಗದಲ್ಲಿ ಡಿಜಿಟಲ್ ಗ್ರಂಥಾಲಯವನ್ನು ಕೊಳ್ಳೇಗಾಲ...

ಬಂಡೀಪುರದಲ್ಲಿ ಸಫಾರಿಗೆ ಹೋದಾಗ ದಾಳಿಗೆ ಮುಂದಾದ ಮರಿಯಾನೆ!

2 weeks ago

ಚಾಮರಾಜನಗರ: ಸಫಾರಿಗೆ ತೆರಳಿದ್ದ ವೇಳೆ ಕಾಡಾನೆ ದಾಳಿಯಿಂದ ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಭಾನುವಾರ ಸಂಜೆ ಪ್ರವಾಸಿಗರು ಬಂಡೀಪುರಕ್ಕೆ ಬಂದಿದ್ದರು. ಹೀಗೆ ಬಂದವರು ಸಫಾರಿ ಹೋಗುತ್ತಿದ್ದ ವೇಳೆ...