ರಾಯಚೂರಿನಲ್ಲಿ ಹೆಚ್ಚುತ್ತಿರುವ ಬೆಕ್ಕು ಜ್ವರ – 38 ಬೆಕ್ಕು ಸಾವು

Public TV
1 Min Read
Raichur Cat fever

ರಾಯಚೂರು: ಜಿಲ್ಲೆಯಲ್ಲಿ ಬೆಕ್ಕು ಜ್ವರ ಹೆಚ್ಚಾಗಿದ್ದು ಕಳೆದ 15 ದಿನಗಳಲ್ಲಿ ಸುಮಾರು 38 ಬೆಕ್ಕುಗಳು ಸಾವನ್ನಪ್ಪಿವೆ. ರಾಜ್ಯದಲ್ಲೆಡೆ ಬೆಕ್ಕುಗಳಲ್ಲಿ ಕಾಣಿಸಿಕೊಂಡಿರುವ ಮಾರಣಾಂತಿಕ ಎಫ್‌ಪಿವಿ(FPV) ವೈರಸ್ ಈ ಬಾರಿ ರಾಯಚೂರಿನ (Raichuru) ಬೆಕ್ಕುಗಳನ್ನ ಹೆಚ್ಚು ಬಾಧಿಸುತ್ತಿದೆ.

ರಾಯಚೂರಿನಲ್ಲಿ ಇದುವರೆಗೆ 100ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ಫಿಲೈನ್ ಪ್ಯಾನ್‌ಲೀಕೊಪೇನಿಯಾ ವೈರಸ್ (Feline Panleukopenia Virus) ಪತ್ತೆಯಾಗಿದೆ. ಇದರಲ್ಲಿ 62 ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿವೆ. ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿದ್ದರೂ, ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಇದನ್ನೂ ಓದಿ: ಸಾಕು ನಾಯಿ ದಾಳಿ – ಮಹಿಳೆಯ ಮುಖಕ್ಕೆ ಬಿತ್ತು 20 ಸ್ಟಿಚ್

ಹೈ ಫೀವರ್, ವಾಂತಿ, ಬೇಧಿ, ನಿರ್ಜಲೀಕರಣದಿಂದ ಬೆಕ್ಕುಗಳ ಸಾಯುತ್ತಿವೆ. ಬೆಕ್ಕಿನಿಂದ ಬೇರೆ ಪ್ರಾಣಿಗಳಿಗೆ, ಮನುಷ್ಯರಿಗೆ ವೈರಸ್ ಹರಡುವುದಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಇದನ್ನೂ ಓದಿ: ಸಾಲಬಾಧೆಗೆ ಬೇಸತ್ತು ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಮೊದಲೆಲ್ಲಾ ಪರ್ಷಿಯನ್ ಬೆಕ್ಕುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಯಿಲೆ, ಈಗ ಎಲ್ಲಾ ಬೆಕ್ಕುಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಕ್ರಾಸ್ ಬ್ರೀಡ್ ಬೆಕ್ಕುಗಳಲ್ಲಿ ಹೆಚ್ಚಾಗಿ ವೈರಸ್ ಕಂಡು ಬರುತ್ತಿದೆ. ವಾಕ್ಸಿನ್ ಹಾಕಿಸದ ಬೆಕ್ಕುಗಳು ವೈರಸ್ ಬಾಧೆಗೆ ತುತ್ತಾಗುತ್ತಿವೆ. ಪ್ರತೀ ವರ್ಷಕ್ಕಿಂತ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿದ್ದು ಬೆಕ್ಕು ಪ್ರಿಯರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮಿನಿ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

Share This Article