ಬೆಂಗಳೂರು: ವೀರ ಮದಕರಿ ಸಿನಿಮಾ ಸೆಟ್ಟೇರುವುದಕ್ಕೆ ಮೊದಲೇ ಈಗ ಜಾತಿ ವಿಚಾರದಲ್ಲಿ ಸಂಘರ್ಷ ಆರಂಭವಾಗಿದೆ. ಇಷ್ಟು ದಿನ ಅಭಿಮಾನಿಗಳ ನಡುವೆ ಸಣ್ಣದಾಗಿ ಹೊತ್ತಿಕೊಂಡಿದ್ದ ಬೆಂಕಿಗೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಮಾತು ತುಪ್ಪ ಸುರಿದಂತಾಗಿದೆ.
ಮದಕರಿ ನಾಯಕನ ಪಾತ್ರವನ್ನು ಸುದೀಪ್ ಮಾಡಬೇಕು ಅಂತ ವಾಲ್ಮೀಕಿ ಸಮುದಾಯ ಧ್ವನಿ ಎತ್ತಿತ್ತೋ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸಿನಿಮಾಗೆ ಜಾತಿ ಸ್ಪರ್ಶ ಮಾಡುವುದು ಅದೆಷ್ಟು ಸರಿ? ಕಲೆಗೆ ಅದ್ಯಾವ ಜಾತಿ ಇದೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದರ್ಶನ್, ಸುದೀಪ್- ಅಭಿಮಾನಿಗಳಿಗೆ ಪತ್ರ ಬರೆದ ಕಿಚ್ಚ
Advertisement
Advertisement
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ವಾಲ್ಮೀಕಿ ಮಠದ ಪ್ರಸನ್ನಾಂದ ಸ್ವಾಮೀಜಿ, ಬೇರೆಯವರು ಸಿನಿಮಾ ಮಾಡುವುದರ ಬದಲು ನಮ್ಮ ಸಮುದಾಯದವರಾದ ಸುದೀಪ್ ಅವರೇ ಈ ಸಿನಿಮಾ ಮಾಡಬೇಕು. ಈ ಸಿನಿಮಾ ಸುದೀಪ್ ಅವರೇ ಮಾಡಬೇಕೆಂದು 7-8 ವರ್ಷದಿಂದ ನಾವು ಅವರನ್ನು ಒತ್ತಾಯಿಸುತ್ತಿದ್ದೇನೆ. ಹೀಗಿರುವಾಗ ರಾಕ್‍ಲೈನ್ ವೆಂಕಟೇಶ್ ಸಿನಿಮಾ ಮಾಡುತ್ತಿರುವುದಕ್ಕೆ ನನ್ನ ಅಸಮಾಧಾನವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಂದೇ ಕತೆಯ ಸಿನಿಮಾದಲ್ಲಿ ದಚ್ಚು, ಕಿಚ್ಚ- ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದೇನು?
Advertisement
Advertisement
ವೀರ ಮದಕರಿ ಸಿನಿಮಾ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಮುನಿರತ್ನ, ನಟ ದರ್ಶನ್ ಮತ್ತು ಸುದೀಪ್ ಸ್ಯಾಂಡಲ್ ವುಡ್‍ನ ದೊಡ್ಡ ನಟರು. ಚಿತ್ರರಂಗದ ನಟರ ನಡುವೆ ಜಾತಿ ತರುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
ಸುದೀಪ್ ಹಾಗೂ ದರ್ಶನ್ ನಡುವೆ ಮದಕರಿ ಚಿತ್ರ ವಿವಾದ ತಂದಿದೆ. ಕಲೆಗೆ ಜಾತಿ ಇಲ್ಲ, ಜಾತಿಯನ್ನು ಬಿಂಬಿಸುವುದು ತಪ್ಪು. ಸಿನಿಮಾಗೆ ಜಾತಿಯನ್ನು ತರಬಾರದು. ಕಲೆಯನ್ನು ಕಲೆಯಾಗಿ ನೋಡಬೇಕು. ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ ಈಗ ಸಿನಿಮಾಕ್ಕೆ ಜಾತಿ ತರುವುದು ಬೇಡ. ರಾಜ್ ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿತ್ತು. ಆಗ ಜಾತಿ ಇರಲಿಲ್ಲ ಈಗ ಜಾತಿಯ ನಂಟನ್ನು ಸ್ವಾಮೀಜಿ ತರಬಾರದು ಎಂದರು. ಇದನ್ನೂ ಓದಿ: 100 ಕೋಟಿ ರೂ. ವೆಚ್ಚದಲ್ಲಿ ಪತಿಗಾಗಿ ಪ್ರಿಯಾ ಸುದೀಪ್ ಚಿತ್ರ ನಿರ್ಮಾಣ!
ಜಾತಿಯನ್ನು ಬಿಟ್ಟು ದರ್ಶನ್ ಹಾಗೂ ಸುದೀಪ್ ಸಿನಿಮಾ ಮಾಡಬೇಕು. ಸಿನಿಮಾವನ್ನು ಚೆನ್ನಾಗಿ ಮಾಡಿ ಪ್ರೇಕ್ಷಕರ ಮನಗೆಲ್ಲಬೇಕು. ಪ್ರಸನ್ನಾನಂದ ಸ್ವಾಮೀಜಿಗಳು ಕಲೆಯನ್ನು ಗೌರವಿಸಬೇಕು. ದರ್ಶನ್ ಹಾಗೂ ಸುದೀಪ್ ಇಬ್ಬರೂ ಸಿನಿಮಾ ಮಾಡಲಿ. ಆದರೆ ಎಲ್ಲಿಯೂ ಕಥೆ ರಿಪೀಟಾಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಅಂದಿನಿಂದ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಜಾತಿ ಬಿಂಬಿಸೊದು ದೊಡ್ಡ ತಪ್ಪು. ಕಲೆಯನ್ನು ಕಲೆಯಾಗಿ ನೋಡಿ. ಕಲೆಯಲ್ಲಿ ಜಾತಿಯನ್ನು ನೋಡಬೇಡಿ ಎಂದು ತಿಳಿಸಿದರು.
ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದೇ ಕತೆಯ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಅವರು ಈಗಾಗಲೇ `ಗಂಡುಗಲಿ ಮದಕರಿ ನಾಯಕ’ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ. ದರ್ಶನ್ ಚಿತ್ರದ ನಾಯಕನಾಗಿ ನಟಿಸುವುದಾಗಿ ಹೇಳಿದ್ದರು. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಇತ್ತ ಕಿಚ್ಚ ಸುದೀಪ್ ಅಭಿನಯದ ಈ ಚಿತ್ರಕ್ಕೆ `ದುರ್ಗದ ಹುಲಿ’ ಅಥವಾ `ನಾಯಕ’ ಹೆಸರನ್ನು ಇಡಲು ಚರ್ಚೆ ನಡೆದಿದ್ದು, `ದುರ್ಗದ ಹುಲಿ’ ಟೈಟಲ್ ಅಂತಿಮಗೊಳ್ಳುವ ಸಾಧ್ಯತೆಯಿದೆ. ಕೆಲ ದಿನಗಳಿಂದ ಈ ಚಿತ್ರದ ಕೆಲಸ ಆರಂಭಗೊಂಡಿದ್ದು, ವಿಶೇಷವಾಗಿ ಸುದೀಪ್ ಅವರೇ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಈ ಚಿತ್ರಕ್ಕೆ ಪ್ರಿಯಾ ಸುದೀಪ್ ಅವರು 100 ಕೋಟಿ ಬಂಡವಾಳ ಹಾಕಲಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=gGcw0ZhMPUM
https://www.youtube.com/watch?v=_l254HQALME