ಶಿವಮೊಗ್ಗ: ಜಾತಿ ಜನಗಣತಿ ವರದಿ ಅವೈಜ್ಞಾನಿಕವಾಗಿದ್ದು, ಈ ವರದಿಯನ್ನು ಮನೆ ಬಾಗಿಲಿಗೆ ಹೋಗಿ ತಯಾರಿಸಲಾಗಿಲ್ಲ. ಬದಲಿಗೆ ಯಾವುದೋ ಕಂಪನಿಗೆ ಕೊಟ್ಟು ಏನೇನೋ ಮಾಡಿ ಆ ವರದಿ ತಯಾರು ಮಾಡಿದ್ದಾರೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆರೋಪಿಸಿದ್ದಾರೆ.
ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಒಕ್ಕಲಿಗರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ಬಗ್ಗೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಒಕ್ಕಲಿಗ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ನಾನು ಸಹ ಭಾಗವಹಿಸಿದ್ದೆ. ಒಕ್ಕಲಿಗ ಸಮಾಜಕ್ಕೆ ಇನ್ನೊಂದು ವರ್ಗಕ್ಕೆ ಏನು ಸಿಗಬಾರದು ಎಂಬ ಕೆಟ್ಟ ಆಲೋಚನೆ ಇಲ್ಲ ಎಂದರು.
Advertisement
Advertisement
ಜಾತಿ ಜನಗಣತಿ ವರದಿ ತಯಾರಾಗಿ 8 ವರ್ಷ ಕಳೆದಿದೆ. 2017 ರ ಕೊನೆಯಲ್ಲಿ ಈ ವರದಿ ತಯಾರಾಗಿದೆ. ಅಂದಿನ ಮುಖ್ಯಮಂತ್ರಿ ಆ ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಇವತ್ತು ಅದೇ ಮುಖ್ಯಮಂತ್ರಿ ಸ್ವೀಕಾರ ಮಾಡುತ್ತೇನೆ ಅಂತಿದ್ದಾರೆ ಎಂದರು.
Advertisement
ಈ ಹಿಂದೆ ನೀವು ಅಧಿಕಾರದಲ್ಲಿ ಇದ್ದಾಗ ಏಕೆ ವರದಿ ಸ್ವೀಕರಿಸಲಿಲ್ಲ? ಈ ವರದಿಯಲ್ಲಿ ಏನೋ ಇದೆ ಎಂಬುದು ನಿಮಗೆ ಗೊತ್ತಿದೆ. ನಮ್ಮ ಎಲ್ಲಾ ಸಮುದಾಯದ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗೆ ಸರಿ ಹೋಗುವುದಾದರೆ ಆ ವರದಿ ಬರಲಿ. ವರದಿ ಬರುವುದಾಗಿದ್ದರೆ 5 ವರ್ಷದ ಹಿಂದೆಯೇ ಬರುತ್ತಿತ್ತು. ಅದೊಂದು ರಾಜಕಾರಣದ ಆಟ ಆಗಬಾರದು ಎಂದರು. ಇದನ್ನೂ ಓದಿ: ಎಷ್ಟೇ ಅಸಮಾಧಾನವಿದ್ರೂ ಮೋದಿ ಪ್ರಧಾನಿಯಾಗಲು ಒಟ್ಟಾಗಿ ಕೆಲಸ ಮಾಡಿ: ಪ್ರೀತಂಗೌಡ
Advertisement
ಜಾತಿ ಜನಗಣತಿ ವರದಿಯಲ್ಲಿ ತಪ್ಪು ತಪ್ಪು ಅಂಕಿ ಅಂಶಗಳು ಇದ್ದಾವೆ. ವರದಿಯಿಂದ ಯಾರಿಗೋ ಏಟು ಆಗುತ್ತದೆ, ಯಾವುದೋ ಒಂದು ಸಮುದಾಯಕ್ಕೆ ಏಟು ಆಗುತ್ತದೆ ಅಂತಲ್ಲ. ಈ ವರದಿಗೆ ಅದರ ಕಾರ್ಯದರ್ಶಿಯೇ ಸಹಿ ಹಾಕಿಲ್ಲ. ಮನೆ ಮನೆಗೆ ಹೋಗಿ ಸರಿಯಾದ ರೀತಿಯಲ್ಲಿ ಸರ್ವೇ ಮಾಡಿಲ್ಲ. ಅಂತಹ ವರದಿ ಕೈ ಸೇರಿದರೆ ಅಂತಹ ವರದಿಯನ್ನು ಅಧಿಕಾರಕ್ಕಾಗಿ ಜಾರಿಗೊಳಿಸಿದರೆ ನಮ್ಮಂತಹ ಸಮುದಾಯಕ್ಕೆ ಹೊಡೆತ ಬೀಳುತ್ತದೆ ಎಂದರು.
ಒಕ್ಕಲಿಗ ಸಮುದಾಯದಲ್ಲಿ ಎಲ್ಲರೂ ಶ್ರೀಮಂತರಾಗಿಲ್ಲ. ಎಲ್ಲರೂ ಅನುಕೂಲಸ್ಥರಾಗಿಲ್ಲ. ಇವತ್ತಿಗೂ ಯಾರು ಯಾರದ್ದೋ ತೋಟ ಕಾಯುವವರಿದ್ದಾರೆ. ಅವರ ಮಕ್ಕಳಿಗೆ ಶಿಕ್ಷಣ ಇಲ್ಲ. ಅವರ ಬದುಕು ಇನ್ನು ನೆಟ್ಟಗಾಗಿಲ್ಲ. ಅಂತಹವರು ಮೇಲೆ ಬರಬೇಕು ಅಂದರೆ ಆ ವರದಿಯಿಂದ ಅಂತಹವರ ಬದುಕಿಗೂ ಶಕ್ತಿ ಬರಬೇಕು. ಆ ನಿಟ್ಟಿನಲ್ಲಿ ವರದಿಯನ್ನು ನಮ್ಮ ಒಕ್ಕಲಿಗರ ಸಂಘ ರಾಜ್ಯ ಮಟ್ಟದಲ್ಲಿ ವಿರೋಧ ಮಾಡುತ್ತಿದೆ. ವೈಜ್ಞಾನಿಕವಾಗಿ ವರದಿ ತಯಾರಿಸಿ ಎಲ್ಲರಿಗೂ ಒಳ್ಳೆಯದು ಆಗಲಿ ಎಂದರು. ಇದನ್ನೂ ಓದಿ: ನಾವಿಂದು ಜೈ ಭೀಮ್, ಜೈ ಭಾರತ್ ಅನ್ನಬೇಕು, ಸಂವಿಧಾನ ರಕ್ಷಣೆ ಮಾಡಬೇಕು: ಸಿ.ಟಿ ರವಿ