ಬೆಂಗಳೂರು: ಇಲ್ಲಿನ ಬಿಜೆಪಿ ಕಚೇರಿಯಲ್ಲಿಂದು (BJP Office) ಸಂವಿಧಾನ ಸಮರ್ಪಣಾ ದಿನ (Constitution Day) ಆಚರಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗ್ಡೆ ಕಾಗೇರಿ, ಸಿ.ಟಿ ರವಿ, ಕಾರ್ಯದರ್ಶಿ ರಾಜೇಶ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಇತರ ಗಣ್ಯರು ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಸಂವಿಧಾನ ಪೀಠಿಕೆ ಓದಿದರು.
Live : ಸಂವಿಧಾನ ಸಮರ್ಪಣಾ ದಿನ ಆಚರಣೆ
ಸ್ಥಳ : ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ#ConstitutionDay #SamvidhanDiwas https://t.co/LmubPPOYrU
— BJP Karnataka (@BJP4Karnataka) November 26, 2023
Advertisement
ಬಳಿಕ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ (CT Ravi), 2015ರ ವರೆಗೂ ಈ ದಿನವನ್ನು ಕಾನೂನು ದಿನ ಅಂತ ಕರೆಯುತ್ತಿದ್ದರು. ಆದ್ರೆ ಪ್ರಧಾನಿ ಮೋದಿ ಅವರು ಸಮರ್ಪಣಾ ದಿನ ಅಂತ ಘೋಷಣೆ ಮಾಡಿದರು. ಕೆಲವರು ಭಾರತರತ್ನ ಅವರಿಗೆ ಅವರೇ ಕೊಟ್ಟುಕೊಳ್ಳುತ್ತಾರೆ. ಆದ್ರೆ ನಿಜವಾದ `ರತ್ನ’ ಅಂಬೇಡ್ಕರ್ (Ambedkar) ಅವರಿಗೆ ಕೊಡಲಿಲ್ಲ. ಅಟಲ್ ಜೀ ಪ್ರಸ್ತಾಪ ಮಾಡಿದ ಬಳಿಕ ಅವರಿಗೆ ಭಾರತರತ್ನ ಕೊಟ್ಟರು. ಹಾಗಾಗಿ ಅಂಬೇಡ್ಕರ್ ಅವರಿಗೆ ತಡವಾಗಿ ನ್ಯಾಯ ಸಿಕ್ಕಿತು ಎಂದು ಹೇಳಿದರು.
Advertisement
ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಸ್ಮಾರಕಗಳನ್ನ ಅಭಿವೃದ್ಧಿ ಮಾಡಲಿಲ್ಲ. ಆದ್ರೆ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಅಂಬೇಡ್ಕರ್ ಸ್ಮಾರಕ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ (BJP Government) ಎಂದು ಬೀಗಿದರು. ಇದನ್ನೂ ಓದಿ: ಶಕುಂತಲೆ ಪ್ರೇಮ ಬಯಸಿ ಹೊರಟ ʻದುಷ್ಯಂತʼನ ಬದಕು ಕೊಲೆಯಲ್ಲಿ ಅಂತ್ಯ – ಡೇಟಿಂಗ್ ಆ್ಯಪ್ ಪ್ರಿಯತಮೆಗೆ ಜೀವಾವಧಿ ಶಿಕ್ಷೆ
Advertisement
Advertisement
ಲಂಡನ್‌ನಲ್ಲಿ ಅಂಬೇಡ್ಕರ್ ಅವರ ನಿವಾಸವನ್ನು ಅಭಿವೃದ್ಧಿಪಡಿಸಿದ್ದು, ಬಿಜೆಪಿ ಸರ್ಕಾರ. ನಾಗಪುರ ದೀಕ್ಷಾ ಭೂಮಿ ಅಭಿವೃದ್ಧಿ ಆಗ್ತಿದೆ. ದೆಹಲಿಯ ಆಲಿಪುರ ಮನೆಯನ್ನ ಸ್ಮಾರಕವನ್ನಾಗಿಸಲು ಅಲಟ್ ಬಿಹಾರಿ ವಾಜಪೇಯಿ ಅವರು ಮುಂದಡಿಯಿಟ್ಟರು. ಮೋದಿ ಅದಕ್ಕೆ ಪ್ರೋತ್ಸಾಹ ನೀಡಿದರು. ಅಂಬೇಡ್ಕರ್ ಸಮಾಧಿ ಸ್ಥಳ ಅಭಿವೃದ್ಧಿ ಮಾಡಿದ್ದು ಬಿಜೆಪಿ ಸರ್ಕಾರ, ಅಂಬೇಡ್ಕರ್ ಸ್ಮಾರಕ ಅಭಿವೃದ್ಧಿ ಮಾಡಿದ್ದು ಬಿಜೆಪಿ ಸರ್ಕಾರ. ಆದರೂ ಬಿಜೆಪಿ ಅಂಬೇಡ್ಕರ್ ವಿರೋಧಿ, ದಲಿತ ವಿರೋಧಿ ಸರ್ಕಾರ ಅಂತ ಅಪಪ್ರಚಾರ ಮಾಡ್ತಾರೆ ಎಂದು ಕಿಡಿ ಕಾರಿದರು.
ಭಾರತರತ್ನದಿಂದ ಹಿಡಿದು ಅಂಬೇಡ್ಕರರ 5 ಜೀವನ ಪ್ರಮುಖ ಸ್ಥಳ ಸ್ಮಾರಕ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಅವರು ಅಂಬೇಡ್ಕರ್‌ಗೆ ಏನ್ ಮಾಡಿದ್ರು? ಹೇಳಲಿ ಚರ್ಚೆಗೆ ನಾವು ರೆಡಿ ಇದ್ದೇವೆ. ಅಂಬೇಡ್ಕರ್ ಅವರ ಅಂತ್ಯ ಸಂಸ್ಕಾರಕ್ಕೆ ಆರಡಿ-ಮೂರಡಿ ಜಾಗ ಕೊಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: IPL 2024: 10 ತಂಡಗಳಲ್ಲಿ ಯಾರಿಗೆಲ್ಲಾ ಗೇಟ್ ಪಾಸ್ – ರಿಲೀಸ್ ಆಟಗಾರರ ಪಟ್ಟಿ ಸಲ್ಲಿಕೆಗೆ ಇಂದು ಕೊನೆಯ ದಿನ
ಪ್ರತಿಯೊಬ್ಬರು ಸಂವಿಧಾನ ಅರ್ಥ ಮಾಡಿಕೊಂಡು ಬೇಡುವವರಾಗದೇ, ನೀಡುವ ಸಾಮರ್ಥ್ಯ ಗಳಿಸಿಕೊಳ್ಳಬೇಕು. ಸತ್ಯ ಯಾವುದು, ಸುಳ್ಳು ಯಾವುದು ಅಂತ ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಇವತ್ತು ಜೈ ಭೀಮ್, ಜೈ ಭಾರತ್ ಅನ್ನಬೇಕು. ಅಖಂಡ ಭಾರತ ಇರಬೇಕು ಅಂದವರು ಅಂಬೇಡ್ಕರ್. ಅವರ ವಿಚಾರಧಾರೆ ಇರೋದು ಭಾರತದ ಜೊತೆ. ಆದ್ರೆ ಜೈ ಭೀಮ್.. ಜೈ ಭಾರತ್ ಎಂದು ಹೇಳುತ್ತಾ ಯಾರೂ ಅವರ ವಿಚಾರಧಾರೆಗಳನ್ನ ಅಪಪ್ರಚಾರ ಮಾಡ್ತಾರೆ ಅವರಿಗೆ ಪಾಠ ಕಲಿಸಬೇಕು, ಸಂವಿಧಾನ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ.