ಬೆಂಗಳೂರು: ಅಂತೂ ಇಂತೂ ಜಾತಿಗಣತಿ ವರದಿ (Caste Census Report) ಕ್ಯಾಬಿನೆಟ್ ನಲ್ಲಿ ಮಂಡನೆ ಆಗಿದೆ. ಆದ್ರೆ ವರದಿ ಏನ್ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಆಗಲೇ ಇಲ್ಲ. ಮುಂದಿನ ಕ್ಯಾಬಿನೆಟ್ ನಲ್ಲಿ ಮಹತ್ವದ ತೀರ್ಮಾನಕ್ಕೆ ಸರ್ಕಾರ ಮುಂದಾಗಿದ್ದು, ಸಚಿವರಿಗೆಲ್ಲ ವರದಿ ಪ್ರತಿ ಕೊಡಲು ಸಿಎಂ ಸೂಚಿಸಿದ್ದಾರೆ. ಹಾಗಾದ್ರೆ ಜಾತಿ ಗಣತಿ ವರದಿ ಏನ್ ಆಗಬಹುದು? ಅನ್ನೋದರ ಡಿಟೇಲ್ಸ್ ಇಲ್ಲಿದೆ…
ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿರುವ ಜಾತಿಗಣತಿ ವರದಿ ಸಸ್ಪೆನ್ಸ್ ಇನ್ನೂ ಮುಂದುವರಿದಿದೆ. ಕ್ಯಾಬಿನೆಟ್ ನಲ್ಲಿ (Congress Cabinet) ಇವತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಜಾತಿಗಣತಿ ವರದಿ ಬಾಕ್ಸ್ ಸೀಲ್ ಓಪನ್ ಮಾಡಿದ್ರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಸಂಜಯ್ ಶೆಟ್ಟಣನವರ್ ವರದಿಯಲ್ಲಿನ ಸಾರಾಂಶವನ್ನ ಕ್ಯಾಬಿನೆಟ್ ಮುಂದೆ ವಿವರಿಸಿದ್ರು. ಇದೇ ವೇಳೆ ಜಾತಿಗಣತಿ ವರದಿ ಅಧ್ಯಯನಕ್ಕೆ ಕ್ಯಾಬಿನೆಟ್ ಸಬ್ ಕಮಿಟಿ ರಚಿಸುವಂತೆಯೂ ಕೆಲ ಸಚಿವರು ಸಲಹೆ ನೀಡಿದ್ರು. ಆದ್ರೆ ಸಿಎಂ ಸಿದ್ದರಾಮಯ್ಯ (Siddaramaiah) ಮಧ್ಯಪ್ರವೇಶ ಮಾಡಿ, ಎಲ್ಲ ಸಚಿವರಿಗೂ ಜಾತಿಗಣತಿ ವರದಿ ಕೊಡುತ್ತೇನೆ. ಮುಂದಿನ ಕ್ಯಾಬಿನೆಟ್‌ಗೆ ಅಧ್ಯಯನ ಮಾಡಿಕೊಂಡು ಬನ್ನಿ. ಏಪ್ರಿಲ್ 17ರ ಗುರುವಾರ ವಿಶೇಷ ಸಂಪುಟ ಸಭೆಯಲ್ಲಿ ವರದಿ ಬಗ್ಗೆ ತೀರ್ಮಾನಿಸೋಣ ಎಂದು ಸೂಚಿಸಿದ್ರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಏಪ್ರಿಲ್ 17ಕ್ಕೆ ತೀರ್ಮಾನ ಮಾಡುವುದಾಗಿ ಸ್ಪಷ್ಟಪಡಿಸಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಸಲಹೆಯನ್ನ ಸಚಿವರು ಸಹ ಒಪ್ಪಿದ್ದಾರೆ. ಅಲ್ಲದೇ ಜಾತಿಗಣತಿ ವರದಿ ವೈಜ್ಞಾನಿಕವಾಗಿದೆ. 1.35 ಕೋಟಿ ಕುಟುಂಬಗಳ 5.98 ಕೋಟಿ ಜನರ ಸಮೀಕ್ಷೆ ನಡೆದಿದ್ದು, 54 ಮಾನದಂಡಗಳೊಂದಿಗೆ ಸಮೀಕ್ಷೆ ಮಾಡಿದ್ದಾರೆ. 165 ಕೋಟಿ ರೂ. ವೆಚ್ಚ ಮಾಡಿದ್ದು, ಮುಂದಿನ ಕ್ಯಾಬಿನೆಟ್ ನಲ್ಲಿ ವರದಿ ಅಂಗೀಕರಿಸುತ್ತೇವೆ ಅಂತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದ್ದಾರೆ. ಕೆಲ ಸಚಿವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕಳ್ಳರು ದಲಿತರನ್ನು ತುಳಿದಿದ್ದಾರೆಯೇ ಹೊರತು ಉದ್ಧಾರ ಮಾಡಿಲ್ಲ: ಅಶೋಕ್
ಇನ್ನೂ ಈ ಹಿಂದೆ ಜಾತಿಗಣತಿ ವರದಿ ಸೋರಿಕೆಯಾಗಿದ್ದು ಹೆಚ್ಚು ಕಮ್ಮಿ ಅದೇ ಡೇಟಾ ಹೊರಬೀಳುವ ಸಾಧ್ಯತೆ ಇದೆ. ಆದ್ರೆ ರಾಜ್ಯ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡದಿದ್ದರೂ ದಾಖಲೆ ಸೋರಿಕೆ ಆಗಬಹುದು. ಹಾಗಾದ್ರೆ ಸೋರಿಕೆ ಡೇಟಾ ಏನು? ಅಂತ ನೋಡೊದಾದ್ರೆ… ಇದನ್ನೂ ಓದಿ: ಕೇವಲ ಹಿಂದೂಗಳಿಗೆ ಮಾತ್ರವಲ್ಲ, ದಲಿತರಿಗೂ ವಿರೋಧಿಗಳು – ಕಾಂಗ್ರೆಸ್ ವಿರುದ್ಧ ಜೋಶಿ ಆಕ್ರೋಶ
ಈ ಹಿಂದೆ ಸೋರಿಕೆಯಾಗಿದ್ದ ಜಾತಿಗಣತಿ..!
> ಪರಿಶಿಷ್ಟ ಜಾತಿ- 1.08 ಕೋಟಿ
> ಪರಿಶಿಷ್ಟ ಪಂಗಡ-42ಲಕ್ಷ
> ಮುಸ್ಲಿಂ – 74
> ಲಿಂಗಾಯತ -73 ಲಕ್ಷ
> ಒಕ್ಕಲಿಗ-70 ಲಕ್ಷ
> ಕುರುಬ-45 ಲಕ್ಷ
> ಮರಾಠ-16 ಲಕ್ಷ
> ಬ್ರಾಹ್ಮಣ-15 ಲಕ್ಷ
> ವಿಶ್ವಕರ್ಮ-15 ಲಕ್ಷ
> ಈಡಿಗ-14 ಲಕ್ಷ
> ಬೆಸ್ತ -14.50 ಲಕ್ಷ
> ಕ್ರೈಸ್ತ-12 ಲಕ್ಷ
> ಗೊಲ್ಲ(ಯಾದವ)-10.50 ಲಕ್ಷ
> ಉಪ್ಪಾರ, ಮಡಿವಾಳ, ಅರೆ ಅಲೆಮಾರಿ- ತಲಾ 7 ಲಕ್ಷ
> ಕುಂಬಾರ, ತಿಗಳರು- ತಲಾ 5 ಲಕ್ಷ
> ಜೈನ-3 ಲಕ್ಷ
ಒಟ್ಟಿನಲ್ಲಿ ಮುಂದಿನ ಗುರುವಾರ ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಲಿದ್ದು, ವರದಿ ಅಂಗೀಕಾರ ಮಾಡಿ, ಸಂಪುಟ ಉಪಸಮಿತಿ ರಚಿಸುವ ಸಾಧ್ಯತೆಯಿದ್ದು, ಜಾತಿಗಣತಿ ಕ್ಲೈಮ್ಯಾಕ್ಸ್ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ಪ್ರಮೋದಾದೇವಿ ಒಡೆಯರ್‌ಗೆ ನಮ್ಮ ಗ್ರಾಮ ರಿಜಿಸ್ಟರ್ ಮಾಡಿಕೊಡಬೇಡಿ: ಡಿಸಿಗೆ ಗ್ರಾಮಸ್ಥರ ಮನವಿ