ಬೆಂಗಳೂರು: ಜಾತಿ ಗಣತಿ ವಿರೋಧಿಸಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ (High Court) ಕೇಂದ್ರದ ಸೆನ್ಸಸ್ ಕಮಿಷನರ್, ಹಿಂದುಳಿದ ವರ್ಗಗಳ ಆಯೋಗ, ರಾಜ್ಯ ಹಾಗೂ ಕೆಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರದ ಜಾತಿ ಗಣತಿ (Caste Census) ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರು ಹಾಗೂ ಹಲವು ಖಾಸಗಿ ವ್ಯಕ್ತಿಗಳಿಂದಲೂ ಪ್ರತ್ಯೇಕವಾಗಿ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದನ್ನೂ ಓದಿ: ಕ್ಯಾಬಿನೆಟ್‌ನಲ್ಲಿ ಗೆರಿಲ್ಲಾ ಮಾದರಿ ಪೊಲಿಟಿಕಲ್ ಆಟ್ಯಾಕ್ – ಸಿಎಂ ಸೇರಿ ಹಲವರಿಗೆ ಶಾಕ್ ಕೊಟ್ಟ ಸಚಿವರ ಗುಂಪು
ಹಿಂದುಳಿದ ವರ್ಗಗಳ ಆಯೋಗದ ಪರ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಕಾಲಾವಕಾಶ ಕೋರಿದರು. ಬುಧವಾರದವರೆಗೆ ವಿಚಾರಣೆ ಮುಂದೂಡಲು ಸರ್ಕಾರದ ಪರ ಎಎಜಿ ಪ್ರತಿಮಾ ಹೊನ್ನಾಪುರ ಮನವಿ ಮಾಡಿದರು.ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ವಿವೇಕ್ ರೆಡ್ಡಿ ವಾದ ಮಾಡಿದರು. ಇದನ್ನೂ ಓದಿ: ಲಿಂಗಾಯತರನ್ನು ತುಂಡು ತುಂಡು ಮಾಡಲು ಹೇಳಿದ್ಯಾರು- ಪೇಪರ್ ಎಸೆದು ಕ್ಯಾಬಿನೆಟ್ ಸಭೆಯಲ್ಲಿ ಎಂಬಿಪಿ ರೋಷಾವೇಶ
ಮೀಟರ್ ರೀಡರ್‌ಗಳಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಂಗ್ರಹಿಸುವ ಅಂಕಿ ಅಂಶಕ್ಕೆ ರಕ್ಷಣೆ ಇಲ್ಲವೆಂದು ವಾದ ಮಂಡಿಸಿದರು. ಈಗಾಗಲೇ 2 ಕೋಟಿ ಮನೆಗಳಿಂದ ಪ್ರಕ್ರಿಯೆ ಆರಂಭಿಸಲಾಗಿದೆ. ಮೇಲ್ವರ್ಗದ ರಿಟ್ ಅರ್ಜಿಗಳೇ ಹೆಚ್ಚಾಗಿವೆ. ಹೀಗಾಗಿ ತುರ್ತು ವಿಚಾರಣೆಗೆ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಎಲ್ಲಾ ಅರ್ಜಿ ಸಂಬಂಧ ಸರ್ಕಾರ, ಕೇಂದ್ರ ಸರ್ಕಾರ, ಸಮೀಕ್ಷಾ ಆಯೋಗಕ್ಕೆ ನೊಟೀಸ್ ನೀಡಿದ ಹೈಕೋರ್ಟ್, ಅಡ್ವೋಕೇಟ್ ಜನರಲ್ ಇಲ್ಲದ ಕಾರಣ ವಿಚಾರಣೆ ಮುಂದೂಡಿದೆ. ಎಲ್ಲಾ ರಿಟ್ ಅರ್ಜಿಗಳ ವಿಚಾರಣೆ ಸೆ.22ಕ್ಕೆ ನಿಗದಿ ಪಡಿಸಿದೆ.