ನವದೆಹಲಿ: ಕಪ್ಪು ಹಣದ ಮೇಲಿನ ಸಮರವನ್ನು ಕೇಂದ್ರ ಸರ್ಕಾರ ಮುಂದುವರೆಸಿದ್ದು, ಇಂದಿನ ಬಜೆಟ್ ನಲ್ಲಿ ಅರುಣ್ ಜೇಟ್ಲಿ, 3 ಲಕ್ಷಕ್ಕೂ ಮೀರಿದ ನಗದು ವಹಿವಾಟನ್ನು ರದ್ದು ಮಾಡುವ ಪ್ರಸ್ತಾಪವನ್ನು ಹೇಳಿದ್ದಾರೆ.
SIT has suggested no cash transaction above Rs 3 lakhs. Govt has accepted this: FM Jaitley
— ANI (@ANI_news) February 1, 2017
Advertisement
2017ರ ಏಪ್ರಿಲ್ 1 ರಿಂದ 3 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟು ರದ್ದಾಗಲಿದ್ದು. ಈ ಮೊತ್ತಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಆನ್‍ಲೈನ್ ಮೂಲಕವೇ ಮಾಡಬೇಕಾಗುತ್ತದೆ. ಕಪ್ಪು ಹಣದ ಮೇಲಿನ ವಿಶೇಷ ತನಿಖಾ ತಂಡ ಸರ್ಕಾರಕ್ಕೆ ಈ ಶಿಫಾರಸ್ಸು ನೀಡಿತ್ತು. ಜಸ್ಟಿಸ್ ಎಂಬಿ ಷಾ ನೇತೃತ್ವದ ವಿಶೇಷ ತನಿಖಾ ತಂಡ, ಕಪ್ಪು ಹಣ ನಿಯಂತ್ರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಜುಲೈನಲ್ಲಿ ತನ್ನ 5ನೇ ವರದಿಯನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿತ್ತು.
Advertisement
ಕಪ್ಪು ಹಣ ಹೆಚ್ಚಾಗಿ ನಗದು ರೂಪದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಎಸ್‍ಐಟಿ ನಗದು ವಹಿವಾಟಿಗೆ ಮಿತಿ ಹೇರಬೇಕು ಎಂದು ಸೂಚಿಸಿತ್ತು. 3 ಲಕ್ಷಕ್ಕಿಂತ ಹೆಚ್ಚಿನ ನಗದು ವಹಿವಾಟನ್ನು ರದ್ದು ಮಾಡಬೇಕು. ಈ ಮೊತ್ತಕ್ಕಿಂತ ಹೆಚ್ಚಿನ ನಗದು ವಹಿವಾಟು ಮಾಡಿದರೆ ಅದನ್ನು ಅಕ್ರಮ ಎಂದು ಪರಿಗಣಿಸಲು ಕಾಯ್ದೆ ರೂಪಿಸಬೇಕೆಂದು ಎಸ್‍ಐಟಿ ಹೇಳಿತ್ತು.
Advertisement
Some key figures fromBudget 2017-18 #BudgetForBetterIndia pic.twitter.com/22lheYwSmC
— Ministry of Finance (@FinMinIndia) February 1, 2017
Advertisement
Here are the ten themes of FM @arunjaitley's #Budget2017 speech #BudgetForBetterIndia pic.twitter.com/MRUwtQXKdV
— PIB India (@PIB_India) February 1, 2017