– ಬ್ಯಾಗಲ್ಲಿರೋದು ಮಾವಿನ ಹಣ್ಣು ಎಂದ್ರು; ಪರಿಶೀಲನೆ ವೇಳೆ ಪತ್ತೆಯಾಗಿದ್ದು ಹಣ!
ಬೆಂಗಳೂರು: ಎರಡು ಕಾರುಗಳಲ್ಲಿದ್ದ ಕಂತೆ ಕಂತೆ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಪ್ರಕರಣ ಜಯನಗರದಲ್ಲಿ (Jayanagar) ನಡೆದಿದೆ. ಅನುಮಾನಾಸ್ಪದ ಕಾರಿನ ಗ್ಲಾಸ್ ಒಡೆದು ಮಹಿಳಾ ಅಧಿಕಾರಿ ಹಣ ಸೀಜ್ (Cash Seized) ಮಾಡಿ ದಿಟ್ಟತನ ಮೆರೆದಿದ್ದಾರೆ.
ಅಧಿಕಾರಿಗಳು ಬರುತ್ತಿದ್ದಂತೆ ಕಾರಿನಲ್ಲಿದ್ದ ಐವರು, ಚೀಲದಲ್ಲಿರುವುದು ಮಾವಿನ ಹಣ್ಣು ಎಂದಿದ್ದಾರೆ. ಬಳಿಕ ಅಧಿಕಾರಿಗಳು ಪರಿಶೀಲನೆಗೆ ಮುಂದಾದಾಗ ಒಂದು ಕಾರಿನಲ್ಲಿದ್ದ ಐವರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು ಎನ್‍ಐಎ ಕಸ್ಟಡಿಗೆ
ಬೆಳಗ್ಗೆ 9 ಗಂಟೆಯಿಂದ ಫೋಲೋ, ಬೆಂಜ್ ಮತ್ತು ಫಾರ್ಚೂನರ್ ಕಾರುಗಳು ಬಂದು ನಿಂತಿದ್ದವು. ಫೋಲೋ ಕಾರಿನಿಂದ ಬೈಕ್‍ಗೆ ಹಣ ತುಂಬಿಸುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೂಡಲೇ ಫಾರ್ಚೂನರ್ ಕಾರಿನಲ್ಲಿ ಐವರು ಪರಾರಿಯಾಗಿದ್ದಾರೆ. ಸದ್ಯ ಎರಡು ಕಾರು ಮಾತ್ರ ಉಳಿದಿವೆ. ಒಂದು ಬೈಕ್ ಹಾಗೂ ಎರಡು ಕಾರುಗಳಲ್ಲಿ ಮೂರು ಬ್ಯಾಗ್‍ನಲ್ಲಿ ಹಣ ಸಿಕ್ಕಿದೆ ಎಂದು ಎಂಸಿಸಿ ನೋಡಲ್ ಆಫೀಸರ್ ಮನೀಷ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಬೆಂಜ್ ಕಾರಿನ ಗ್ಲಾಸ್ ಒಡೆದು ಹಣ ಇರುವ ಬ್ಯಾಗ್‍ನ್ನು ಹೊರಗೆ ತೆಗೆದಿದ್ದು, ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಒಂದು ಮೊಬೈಲ್ ಕೂಡ ಪತ್ತೆಯಾಗಿದೆ. ಇದೀಗ ಎರಡು ಕೌಂಟಿಂಗ್ ಮಷಿನ್‍ಗಳನ್ನು ತರಿಸಿಕೊಂಡು ಅಧಿಕಾರಿಗಳು ಹಣ ಎಣಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಜಯನಗರ ಪೊಲೀಸ್ ಠಾಣೆಗೆ (Jayanagar Police) ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ಮತ್ತು ಮಾಜಿ ಕಾರ್ಪೋರೇಟರ್ ನಾಗರಾಜ್ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಬೇಕರಿಯಲ್ಲಿ ಗುಲಾಬ್ ಜಾಮೂನು ಖರೀದಿಸಿದ ರಾಹುಲ್ ಗಾಂಧಿ