ಬೆಂಗಳೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿಂದಿ ಆಯುವವನ ಮೇಲೆ ವೈಟ್‌ಫೀಲ್ಡ್ (Whitefield) ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಜೂನ್ 2ರಂದು ಪಟ್ಟಂದೂರು ಅಗ್ರಹಾರದಲ್ಲಿ ಘಟನೆ ನಡೆದಿತ್ತು. ಕೋ ಲಿವಿಂಗ್ ಪಿಜಿಯಲ್ಲಿ ವಾಸವಾಗಿದ್ದ ಕಾಲೇಜು ವಿದ್ಯಾರ್ಥಿನಿ ಓದುತ್ತಿದ್ದ ವೇಳೆ ನಿದ್ದೆ ಬರುತ್ತಿದೆ ಎಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಟೀ ಕುಡಿಯಲು ಹೋಗಿದ್ದಳು. ಟೀ ಕುಡಿದು ವಾಪಸ್ಸಾಗುವ ವೇಳೆ ವಿದ್ಯಾರ್ಥಿನಿಯನ್ನ ಆರೋಪಿ ಸೈಬುಲ್ ಮಂಡಲ್ ಹಿಂಬಾಲಿಸಿದ್ದ. ಇದನ್ನೂ ಓದಿ: ಒಸಿ-ಸಿಸಿ ಸಮಸ್ಯೆಗೆ ಮುಕ್ತಿ: 1.54 ಲಕ್ಷ ಮನೆಗಳಿಗೆ ಸಿಗಲಿದೆ ಶಾಶ್ವತ ವಿದ್ಯುತ್ ಸಂಪರ್ಕ
ಇದನ್ನು ಗಮನಿಸಿದ ವಿದ್ಯಾರ್ಥಿನಿ ಭಯದಿಂದ ಪಿಜಿ ಸೇರಿಕೊಳ್ಳಲು ಓಡಿ ಬಂದಿದ್ದಳು. ಆದರೆ ಪಿಜಿಯ ಗೇಟ್ ಬಳಿಯಿಂದಲೇ ವಿದ್ಯಾರ್ಥಿನಿಯ ಕುತ್ತಿಗೆ ಹಿಸುಕಿ ಆರೋಪಿ ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಸಮೀಪದ ಶೆಡ್ ಒಂದಕ್ಕೆ ಎತ್ತೊಯ್ದು ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಇದನ್ನೂ ಓದಿ: ಮೈಸೂರು | ನೇಣು ಬಿಗಿದ ಸ್ಥಿತಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಪುತ್ರಿಯ ಶವ ಪತ್ತೆ
ಯುವತಿಯನ್ನ ಕಂಡ ಸೆಕ್ಯೂರಿಟಿ ಗಾರ್ಡ್ ತಕ್ಷಣವೇ ಪೊಲೀಸರಿಗೆ ಹಾಗು ಪಿಜಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿ ಸ್ನೇಹಿತರು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಯ ಹೇಳಿಕೆ, ವೈದ್ಯರ ವರದಿ ಅಧಾರಿಸಿ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಆರೋಪಿ ಸೈಬುಲ್ ಮಂಡಲ್‌ನನ್ನ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ 5.87 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ
