ಯಾದಗಿರಿ: ಕಲುಷಿತ ನೀರು (Polluted Water) ಪೂರೈಕೆ ಮಾಡಿ, ಮೂವರು ಮಹಿಳೆಯರ (Woman) ಸಾವಿಗೆ ಕಾರಣರಾದ ಅಧಿಕಾರಿಗಳ ಮೇಲೆ 21 ದಿನ ಕಳೆದರೂ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಯಾದಗಿರಿ (Yadgiri) ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಗ್ರಾಮದಲ್ಲಿ ಫೆ. 15ರಂದು ಕಲುಷಿತ ನೀರು ಸೇವಿಸಿ ವಾಂತಿ, ಭೇದಿಯಿಂದ ಬಳಲಿ ವಿವಿಧ ಆಸ್ಪತ್ರೆಯಲ್ಲಿ 85ಕ್ಕೂ ಹೆಚ್ಚು ಜನರು ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಮೂವರು ಮಹಿಳೆಯರು ಮೃತಪಟ್ಟಿದ್ದರು. ಈಗ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ. ಅನಪುರ ಕಹಿ ಘಟನೆಯು ರಾಜ್ಯದಲ್ಲಿ ಸದ್ದು ಮಾಡಿತ್ತು. ಸಾವಿತ್ರಮ್ಮ, ನರಸಮ್ಮ, ಸಾಯಮ್ಮ ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದರು. ಈ ಪ್ರಕರಣ ಸದನದಲ್ಲಿ ಪ್ರಸ್ತಾಪವಾಗಿ ಸದ್ದು ಮಾಡಿತ್ತು. ಸರ್ಕಾರ ಕೂಡ ಮೃತ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಘೋಷಣೆ ಮಾಡಿದೆ. ಆದರೆ ಇದುವರೆಗೂ ಆ ಪರಿಹಾರ ಹಣ ಮೃತ ಕುಟುಂಬಗಳಿಗೆ ತಲುಪಿಲ್ಲ.
Advertisement
Advertisement
ಈ ಎಲ್ಲ ಅವಘಡಕ್ಕೆ ಅನಪುರ ಗ್ರಾಮದಲ್ಲಿ ಪೈಪ್ ಲೀಕೆಜ್ ಆಗಿ ಮಲ ಮಿಶ್ರಿತ ನೀರು ಪೂರೈಕೆ ಮಾಡಲಾಗಿರುವುದು ಸಹ ದೃಢಪಟ್ಟಿದೆ. ಕಲುಷಿತ ನೀರು ಸೇವಿಸಿ ಗ್ರಾಮದಲ್ಲಿ ವಾಂತಿ, ಭೇದಿ ಉಲ್ಬಣಗೊಂಡಿತ್ತು. ಸರ್ಕಾರ ಪಂಚಾಯಿತಿ ಅಧಿಕಾರಿಗಳ ಮೂಲಕ ಹಳ್ಳಿ ಜನರಿಗೆ ಶುದ್ಧ ನೀರು ಪೂರೈಕೆ ಮಾಡಿ ಜನರಿಗೆ ನೀರಿನ ದಾಹ ತಣಿಸಬೇಕಿತ್ತು. ಆದರೆ, ಪಂಚಾಯಿತಿ ಅಧಿಕಾರಿಗಳು ತಾನು ಮಾಡಿದ್ದೆ ಸರಿ ಎನ್ನುವಂತೆ, ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆಯಾದರೂ ಆರಂಭದಲ್ಲಿ ಕಡಿವಾಣ ಹಾಕಿಲ್ಲ. ಅನಪುರ ಪಿಡಿಓ ವಿಜಯಲಕ್ಷ್ಮಿ, ಪಂಚಾಯಿತಿ ಕಾರ್ಯದರ್ಶಿ, ನೀರು ಪೂರೈಸುವ ಆಪರೇಟರ್ ಸಂಪೂರ್ಣ ನಿರ್ಲಕ್ಷ್ಯ ತೋರಿರುವ ಕುರಿತು ತಪ್ಪಿತಸ್ಥ ಪಂಚಾಯಿತಿ ಹಾಗೂ ಸಿಬ್ಬಂದಿ ವರ್ಗದವರ ಮೇಲೆ ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲುಷಿತ ನೀರು ಪೂರೈಕೆ ಮಾಡಿ 3 ಜನರ ಸಾವಿಗೆ ಕಾರಣರಾದವರ ಮೇಲೆ ಎಫ್‌ಐಆರ್ ದಾಖಲಾಗಿದೆ.
Advertisement
Advertisement
ಪೊಲೀಸರು ಸ್ವಯಂಪ್ರೇರಿತವಾಗಿ ಗುರುಮಠಕಲ್ ಠಾಣೆಯಲ್ಲಿ ಪಿಡಿಓ, ಕಾರ್ಯದರ್ಶಿ, ಪಂಪ್ ಆಪರೇಟರ್, ಸಿಬ್ಬಂದಿ ವರ್ಗದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ದಾಖಲಾದರು. ಪಿಡಿಓ ವಿಜಯಲಕ್ಷ್ಮಿ ಸೇರಿ ಉಳಿದವರ ಮೇಲೆ ಕ್ರಮಕೈಗೊಂಡಿಲ್ಲ. ತಪ್ಪಿತಸ್ಥರ ತಲೆದಂಡವಾಗಿಲ್ಲ. ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳಲು ಮೀನಾಮೇಷ ಮಾಡಲಾಗುತ್ತಿದೆ. ಘಟನೆ ಜರುಗಿ ಬರೋಬ್ಬರಿ 21 ದಿನಗಳು ಕಳೆದರು ಕ್ರಮಕೈಗೊಳ್ಳದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ 8 ಪಕ್ಷಗಳು – ಏನಿದೆ ಅದರಲ್ಲಿ? – ಪತ್ರ ಬರೆದವರಿಂದ ದೂರ ಉಳಿದ ಕಾಂಗ್ರೆಸ್
ಅನಪುರ ಘಟನೆ ನಂತರ ಈಗ ಚಿನ್ನಕಾರ ಗ್ರಾಮದಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಚಿನ್ನಕಾರ ಗ್ರಾಮದಲ್ಲಿ ಪಂಚಾಯಿತಿ ಅಧಿಕಾರಿಗಳು ಕಲುಷಿತ ನೀರು ಪೂರೈಕೆ ಮಾಡಿದ ಹಿನ್ನಲೆ ವಾಂತಿ ಭೇದಿ ಕಾಣಿಸಿಕೊಂಡಿದೆ ಅಂತೆ. ಪದೇ ಪದೇ ಕಲುಷಿತ ನೀರು ಸೇವಿಸಿ ಜನರು ವಾಂತಿ ಭೇದಿಯಿಂದ ಬಳಲಿ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದರೆ, ಸರ್ಕಾರ, ತಪ್ಪಿತಸ್ಥರ ಮೇಲೆ ಕ್ರಮಕೈಗೊಂಡರೆ ಮತ್ತೆ ಇಂತಹ ಘಟನೆಗಳು ಮರುಕಳಿಸುವದಿಲ್ಲ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಂಡು ಖಡಕ್ ನಿರ್ಧಾರ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಅಶೋಕ್ ಜೊತೆ ಇರುವವರೆಲ್ಲ ಕುಂಟ್ಕೊಂಡೆ ಓಡಾಡುತ್ತಾರೆ: ಡಿ.ಕೆ.ಸುರೇಶ್