ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾಮದ ಮೋರಿಯ ಅಂಚಿನಲ್ಲಿ ಪತ್ತೆಯಾದ ಮೃತ ಹೆಣ್ಣು ಮಗುವಿನ (Child Dead Body) ಪೋಷಕರನ್ನು ಪತ್ತೆ ಮಾಡುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೃತ ಮಗು ರುಚಿಕುಮಾರಿಯ (1) ತಂದೆ-ತಾಯಿಯನ್ನು ಪ್ರವೇಶ್ ಕುಮಾರ್, ವಿಭಾಕುಮಾರಿ ಎಂದು ಗುರುತಿಸಲಾಗಿದೆ. ಇವರು ಬಿಹಾರ ಮೂಲದವರಾಗಿದ್ದು, ವೀರಾಪುರದಲ್ಲಿ ಕಳೆದ 1 ವಾರದಿಂದ ವಾಸವಿದ್ದರು. ಮಗುವಿಗೆ ಹೃದ್ರೋಗ ಸಮಸ್ಯೆ ಇದ್ದು, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿಬಾಬಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ಪ್ರಯತ್ನಿಸಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲದಾಗ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ಆಗ ಮರಳಿ ವೀರಾಪುರಕ್ಕೆ ಬರುವ ವೇಳೆ ಮಗು ಸಾವಿಗೀಡಾಗಿದೆ.
Advertisement
Advertisement
ಈ ವೇಳೆ ಮಗುವಿನ ಅಂತ್ಯಕ್ರಿಯೆ ಮಾಡುವುದರ ಬಗ್ಗೆ ದಿಕ್ಕು ತೋಚದ ತಂದೆ ಮೋರಿ ಕೆಳಗೆ ಮಗುವಿನ ಮೃತದೇಹವನ್ನು ಬಿಟ್ಟು ಹೋಗಿದ್ದರು. ಮೃತ ಮಗುವಿನ ಫೋಟೋ ಬಳಸಿ ಕೈಗಾರಿಕಾ ಪ್ರದೇಶ, ಬಾಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ಮಗುವಿನ ಪೋಷಕರನ್ನು ಪತ್ತೆಗೆ ಪೊಲೀಸರು ತೀವ್ರ ತಲಾಶ್ ನಡೆಸಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ಮಗುವಿನ ಬಗ್ಗೆ ಮಾಹಿತಿ ದೊರೆತಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯವನ್ನು ಆಧರಿಸಿ ಪೊಲೀಸರು ಪೋಷಕರನ್ನು ಪತ್ತೆ ಮಾಡಿದ್ದಾರೆ.
Advertisement
ಬೆಂಗಳೂರು-ಹಿಂದೂಪುರ ರಾಜ್ಯ ಹೆದ್ದಾರಿಯ ಬಾಶೆಟ್ಟಿಹಳ್ಳಿ ಗ್ರಾಮದ ಅಂಚಿನಲ್ಲೇ ಇರುವ ಮೋರಿಯ ತಳದಲ್ಲಿ ಶಾಲು ಹೊದಿಸಿ ಮಲಗಿಸಿರುವ ಸ್ಥಿತಿಯಲ್ಲಿ ಒಂದೂವರೆ ವರ್ಷ ಹೆಣ್ಣು ಮಗುವಿನ ಮೃತದೇಹ ಸೋಮವಾರ ಪತ್ತೆಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿ ಪೋಷಕರ ಪತ್ತೆಗೆ ಮುಂದಾಗಿದ್ದರು. ಇದನ್ನೂ ಓದಿ: ಪ್ಯಾಕಿಂಗ್ ಆಹಾರ ಉತ್ಪನ್ನಗಳಿಂದ ಜೀರ್ಣಾಂಗಕ್ಕೆ ಹಾನಿ- ಏಮ್ಸ್ ವೈದ್ಯರಿಂದ ಹೊಸ ವರದಿ
Advertisement
ಕೊನೆಗೆ ಮೃತ ಮಗುವಿನ ಪೋಷಕರನ್ನು ಪತ್ತೆ ಮಾಡುವುದು ಪೊಲೀಸರಿಗೂ ದೊಡ್ಡ ಸವಾಲಾಗಿತ್ತು. ಅಲ್ಲದೆ ಮಗುವಿನ ಮೃತದೇಹ ಮಲಗಿಸಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವುದರಿಂದ ಮಗು ಮೃತಪಟ್ಟ ನಂತರವೇ ಇಲ್ಲಿ ತಂದು ಇಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಬಿಹಾರ ಮೂಲದ ದಂಪತಿ ಮೃತ ಮಗುವಿನ ಅಂತ್ಯಸಂಸ್ಕಾರ ನಡೆಸಲು ಪ್ರಯತ್ನ ನಡೆಸಿದ್ದಾರೆ. ಅದರೆ ಒಂದು ವಾರದ ಹಿಂದಷ್ಟೇ ವೀರಾಪುರಕ್ಕೆ ಬಂದಿದ್ದ ಕಾರಣ ದಿಕ್ಕು ತೋಚದೆ ಯಾರದೋ ಮಾತು ಕೇಳಿ ಮೋರಿ ಕೆಳಗೆ ಮಗುವನ್ನು ಬಿಟ್ಟು ಹೋಗಿದ್ದರು. ಈಗ ಅವರ ಸಂಬಂಧಿಕರನ್ನೆಲ್ಲಾ ಕರೆಸಿದ್ದು, ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮಗುವಿನ ಅಂತ್ಯಕ್ರಿಯೆ ನಡೆಸಲು ವ್ಯವಸ್ಥೆ ನಾವೇ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮೀನು ವಿವಾವದವೇ ಕರ್ಣಿ ಸೇನಾ ಮುಖ್ಯಸ್ಥನ ಕೊಲೆಗೆ ಕಾರಣವಾಯ್ತಾ?