ಬೆಂಗಳೂರು: ನಗರದ ಕಾಡುಗೋಡಿಯಲ್ಲಿ (Kadugodi Mother and Baby Death Case) ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಮಗು ಸುಟ್ಟುಕರಕಲಾದ ಪ್ರಕರಣ ಸಂಬಂಧ ಬೆಸ್ಕಾಂ (BESCOM) ಅವಘಡಕ್ಕೆ ಕಾರಣಗಳೇನು ಅಂತಾ ರಿಪೋರ್ಟ್ ರೆಡಿ ಮಾಡಿದ್ದಾರೆ. ಘಟನೆ ಸಂಬಂಧ ಲೋಕಾಯುಕ್ತದಲ್ಲಿ ಸುಮೊಟೊ ಕೇಸ್ ದಾಖಲಾಗಿದ್ದು, ಇಂದು ವರದಿ ಸಲ್ಲಿಸಲಿದ್ದಾರೆ.
ವಿದ್ಯುತ್ ಪರಿವೀಕ್ಷಣಾಧಿಕಾರಿಗಳ ವರದಿಯಲ್ಲಿ ಏನಿದೆ?: ವಿದ್ಯುತ್ ಮಾರ್ಗ ತುಂಡಾಗಿ ಫುಟ್‍ಪಾತ್ ಮೇಲೆ ಲೋ ಫಲ್ಟ್ ಕರೆಂಟ್ ಪಾತ್ ಉಂಟಾಗಿದೆ. ನಿಗದಿತ ಫಲ್ಟ್ ಕರೆಂಟ್ ಭೂಮಿಗೆ ಹೋಗದೆ ಇರುವುದರಿಂದ ರಿಲೆ ಪಿಕ್‍ಆಪ್ ಕರೆಂಟ್ ಪ್ರವಹಿಸಿಲ್ಲ. ಇಎಫ್‍ಆರ್ ಮೇಲೆ ಟ್ರಿಪ್ ಆಗಲು ಬೇಕಾದ ನಿಗದಿತ ರಿಲೆ ಪಿಕ್‍ಆಪ್ ಕರೆಂಟ್ ಪ್ರವಹಿಸಿಲ್ಲ. ರಿಲೆ ಪಿಕ್‍ಆಪ್ ಕರೆಂಟ್ ಪ್ರವಹಿಸದಿದ್ದಕ್ಕೆ ಇಎಫ್‍ಆರ್ ಟ್ರಿಪ್ ಆಗದೇ ಇರುವುದು ಕಾರಣವಾಗಿದೆ.
Advertisement
Advertisement
ಹಳೆಯ & ಶಿಥಿಲಗೊಂಡ ವಿದ್ಯುತ್ ಮಾರ್ಗಗಳನ್ನು ಗಮನಿಸಿ ಸುಸ್ಥಿಯಲ್ಲಿಟ್ಟುಕೊಂಡಿಲ್ಲ. ಎಲ್‍ಬಿಎಸ್‍ನ ನಿರ್ವಹಣೆ ಮಾಡಿ ವರ್ಮಿನ್ ಪ್ರೂಪ್ ಆಗಿ ನಿರ್ವಹಿಸಿದ್ರೆ ಅಪಘಾತ ಆಗ್ತಿರಲಿಲ್ಲ. ಸದರಿ ಓವರ್ ಹೆಡ್ ಬೇರ್ ವಾಹಕಗಳ ಮಾರ್ಗಗಳಲ್ಲಿ ಅರ್ಥ್‍ಗಾರ್ಡ ಅಳವಡಿಸಿದ್ರೆ ತಪ್ಪಿಸಬಹುದಿತ್ತು. ಬೆಸ್ಕಾಂ ದಿ ಸೆಂಟ್ರಲ್ ಎಲೆಕ್ಟ್ರಿಕಲ್ ಸೇಫ್ಟಿ ಅಥಾರಿಟಿ ರೆಗ್ಯುಲೇಷನ್- 2023 ಉಲ್ಲಂಘನೆ, ರೆಗ್ಯುಲೇಷನ್ 14(1), 24(1)(ಐ), 48(7) & 76(1) ಉಲ್ಲಂಘಿಸಿರೋದಾಗಿ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಅಪಘಾತ ತಡೆಗಟ್ಟಲು ಕ್ರಮಗಳನ್ನ ಅನುಸರಿಸುವಂತೆ ಸಲಹೆ ಕೊಡುವಂತೆ ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ತಾಯಿ-ಮಗು ಸಜೀವ ದಹನಕ್ಕೆ ದೃಶ್ಯಸಾಕ್ಷ್ಯದ ಬೆನ್ನಲ್ಲೇ ಹೆಲ್ಪ್‌ಲೈನ್
Advertisement
Advertisement
ಅಪಘಾತ ತಡೆಗಟ್ಟಲು ಸುರಕ್ಷತಾ ಕ್ರಮಗಳೇನು..?: ಹಳೆಯ ಹಾಗೂ ಶಿಥಿಲಗೊಂಡ ವಿದ್ಯುತ್ ವಾಹಕಗಳನ್ನು ಗುರುತಿಸೋದು. ಯು.ಜಿ/ ಓವರ್ ಹೆಡ್ ಕೇಬಲ್‍ಗೆ ಬದಲಾಯಿಸಿ ಅಪಾಯರಹಿತ ಸುಸ್ಥಿಯಲ್ಲಿಟ್ಟುಕೊಳ್ಳುವುದು. ವಿದ್ಯುತ್ ವ್ಯವಸ್ಥೆಯಲ್ಲಿ ಅಳವಡಿಸುವ ಮೀಟರಿಂಗ್ ಕ್ಯುಬಿಕಲ್, ಎಲ್‍ಬಿಎಸ್‍ಆರ್ ಎಮ್‍ಯು ಇಂಟರ್‍ಮೀಡಿಯೇಟ್ ಒಡಿ ಹಾಗೂ ಇತರೆ ಉಪಕರಣಗಳನ್ನು ವರ್ಮಿನ್ ಫ್ಯೂಜ್ ಆಗಿರುವಂತೆ ನೋಡಿಕೊಳ್ಳುವುದು. ಆರ್ ಎಮ್‍ಯು ಇಂಟರ್‍ಮೀಡಿಯೇಟ್ ಒಡಿಗಳಲ್ಲಿರುವ ಪ್ರೊಟೆಕ್ಷನ್ ಸಿಸ್ಟಂ ಸುಸ್ಥಿತಿಯಲ್ಲಿರುವಂತೆ ನಿರ್ವಹಿಸುವುದು. ವಿದ್ಯುತ್ ಅವಘಡ ತಡೆಗಟ್ಟಲು ಅರ್ಥ್ ಗಾರ್ಡ್ ಅಳವಡಿಸುವುದು ಹಾಗೂ ಹೈ ಇಂಫೆಡೆನ್ಸ್ ಫಲ್ಟ್ ಪ್ರೊಟೆಕ್ಷನ್ ಸಿಸ್ಟಮ್ಸ್ ಅಳವಡಿಕೆಗೆ ಕ್ರಮ ವಹಿಸುವುದಾಗಿದೆ.