ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತನಟ ನೀನಾಸಂ ಅಶ್ವಥ್ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ.
ನೀನಾಸಂ ಅಶ್ವಥ್ ಅವರು ಸ್ನೇಹಿತ ದ್ವಾರಕ ರಜತ್ ಅವರ ಬಳಿ 18 ಲಕ್ಷ ರೂ. ಸಾಲ ಪಡೆದಿದ್ದರು. ಈಗ ಈ ಸಾಲವನ್ನು ನೀಡಲು ಸತಾಯಿಸುತ್ತಿರುವ ಜೊತೆ ನೀಡಿರುವ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ರಜತ್ ಅವರು ಕೇಸ್ ದಾಖಲಿಸಿದ್ದಾರೆ.
Advertisement
ಫಾರ್ಮ್ ಹೌಸ್ ಬಿಸಿನೆಸ್ ನಲ್ಲಿ ಪಾಲುದಾರನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನನ್ನಿಂದ 18 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ಈಗ ಫಾರ್ಮ್ ಹೌಸ್ ಪಾಲುದಾರನಾಗಿ ಮಾಡಿಕೊಳ್ಳದೇ ಹಣವೂ ವಾಪಾಸ್ ನೀಡದೇ ಸತಾಯಿಸುತ್ತಿದ್ದಾರೆ. ಹೀಗಾಗಿ ನೀನಾಸಂ ಅಶ್ವಥ್ ಮೇಲೆ ನಾನು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದೇನೆ ಎಂದು ರಜತ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
Advertisement
ರಜತ್ ಆರೋಪ ಏನು?
ವಿಜಯ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನೀನಾಸಂ ಅಶ್ವಥ್ ಅವರ ಪರಿಚಯವಾಗಿತ್ತು. ಈ ಸಮಯದಲ್ಲಿ ಫಾರ್ಮ್ ಹೌಸ್ ಒಡೆತನದಲ್ಲಿ ಪಾಲುದಾರಿಕೆ ಆಮಿಷ ಒಡ್ಡಿದ್ದರು. ನಂತರ ಒಡೆತನದ ಪಾಲುದಾರಿಕೆಯೂ ಇಲ್ಲ ಹಣವೂ ಹಿಂದಿರುಗಿಸಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ನೀನಾಸಂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
Advertisement
ನೀನಾಸಂ ಅಶ್ವಥ್ 2007-2008ರಿಂದ ಹಣ ನೀಡದೇ ಸತಾಯಿಸುತ್ತಿದ್ದಾರೆ. ಅಲ್ಲದೇ ನನಗೆ ನೀಡಿದ ಚೆಕ್ ಕೂಡ ಬೌನ್ಸ್ ಆಗಿದೆ. ಚೆಕ್ ಬೌನ್ಸ್ ಕೇಸ್ ಬುಕ್ ಮಾಡಿದರೂ ನೀನಾಸಂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ನ್ಯಾಯಾಲಯಕ್ಕೆ ಹೋಗದೇ ಅಶ್ವಥ್ ಜಾಮೀನು ಪಡೆದಿದ್ದರು. ಕೊಟ್ಟ 18 ಲಕ್ಷ ರೂ. ಸಾಲದಲ್ಲಿ 3 ಲಕ್ಷ ರೂ. ಮಾತ್ರ ಹಿಂದಿರುಗಿಸಿ ಮೋಸ ಮಾಡಿದ್ದಾರೆ.
ಈ ಸಂಬಂಧ ನಾನು ಕಲಾವಿದರ ಸಂಘ ಹಾಗೂ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದೇನೆ. ಫಿಲ್ಮ್ ಚೇಂಬರ್ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ರಜತ್ ಹೇಳಿದ್ದಾರೆ.
ರಜತ್ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಖ್ಯಾತ ಕಲಾವಿದರ ಜೊತೆ ಬಣ್ಣ ಹಚ್ಚಿದ್ದಾರೆ. ಮುಂಗಾರುಮಳೆ, ಗಾಳಿಪಟ, ವಿಷ್ಣುವರ್ಧನ, ಕೋಲಾರ ಸಿನಿಮಾಗಳಲ್ಲಿ ನಟಿಸಿ ಈಗ ಬಿಡುಗಡೆಗೆ ಸಜ್ಜಾಗಿರೋ ಕೆಜಿಎಫ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews