ಉಡುಪಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 126ನೇ ಜನ್ಮದಿನವನ್ನ ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಯ್ತು. ಅದರ ಬೆನ್ನಲ್ಲೆ ಉಡುಪಿಯಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿವಾಸಿ ಶ್ರೀಕಾಂತ್ ನಾಯಕ್ ಫೇಸ್‍ಬುಕ್‍ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‍ಗೆ ಅವಮಾನ ಮಾಡಿದ ಆರೋಪಿ. ಅಂಬೇಡ್ಕರ್ ಲಂಡನ್‍ನ ಸಂವಿಧಾನವನ್ನು ಕಾಪಿ ಮಾಡಿದ್ದಾರೆ ಎಂದು ಕಮೆಂಟ್ ಹಾಕಿದ ಶ್ರೀಕಾಂತ್ ಮೇಲೆ ಕೇಸ್ ದಾಖಲಾಗಿದೆ.
Advertisement
Advertisement
ಏಪ್ರಿಲ್ 14ರಂದು ಅಕ್ಷಯ್ ಶೆಟ್ಟಿ ಎಂಬವರು ಫೇಸ್‍ಬುಕ್‍ನಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿ 126ನೇ ಜಯಂತಿಯ ಶುಭಾಶಯ ಕೋರಿದ್ರು. ಇದಕ್ಕೆ ಶ್ರೀಕಾಂತ್ ನಾಯಕ್ ತುಳುವಿನಲ್ಲಿ `ಎಂಚಿನ ಸಂವಿಧಾನ?? ಇಂಗ್ಲೆಂಡ್ ದ ಕಾಪಿ ಮಲ್ತ್‍ದ್, ಹಿಂದುನಕ್ಲೆನ ತಿಗಲೆ ದೊಂಕಿನ ಸಾವಿಧಾನ. ನಮಕ್ ಬೊಡ್ಚಿ ಆಯೆನ ಸಾವಿಧಾನ, ಜೈ ಶ್ರೀರಾಮ್’ (ಎಂಥಾ ಸಂವಿಧಾನ? ಇಂಗ್ಲೆಂಡಿನಿಂದ ಕಾಪಿ ಮಾಡಿದ ಸಂವಿಧಾನ. ಹಿಂದುಗಳ ಎದೆಗೆ ತುಳಿದ ಸಂವಿಧಾನ ನಮಗೆ ಬೇಡ ಅವನ ಸಂವಿಧಾನ. ಜೈಶ್ರೀರಾಮ್) ಎಂದು ಕಮೆಂಟ್ ಮಾಡಿದ್ದ.
Advertisement
ಶ್ರೀಕಾಂತ್ ಹಾಕಿದ್ದ ಈ ಕಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭಾರತದ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾನೆ ಎಂದು ಯಡ್ತಾಡಿ ಗ್ರಾಮದ ಅಲ್ತಾರು ನಿವಾಸಿ ಚಂದ್ರ ಅಲ್ತಾರ್, ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಆರೋಪಿ ಶ್ರೀಕಾಂತ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
Advertisement