ಬೆಂಗಳೂರು: ಸಾರ್ವಜನಿಕವಾಗಿ ಮಹಿಳೆಯೊಬ್ಬರ ಮುಂದೆ ಕಾಮುಕನೊಬ್ಬ ಪ್ಯಾಂಟ್ ಬಿಚ್ಚಿ ಅಸಭ್ಯ ವರ್ತನೆ ತೋರಿರುವ ಘಟನೆ ಇಂದಿರಾನಗರ ಪೊಲೀಸ್ ಠಾಣಾ (Indiranagar Police Station) ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್‌ನಲ್ಲೇ ಮಹಿಳೆಯ (Bengaluru Women) ಎದುರು ಹಸ್ತಮೈಥುನ ಮಾಡಿಕೊಂಡ ಕಾಮುಕನ ವಿರುದ್ಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: Bengaluru | ಲಿಫ್ಟ್‌ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಂದಿದ್ದ ಕೆಲಸದಾಕೆ ಅರೆಸ್ಟ್
ಏನಿದು ಕಾಮುಕನ ಕೃತ್ಯ?
ಬೆಳ್ಳಂಬೆಳಗ್ಗೆ ಮಹಿಳೆಯೊಬ್ಬರು ತಮ್ಮ ನಾಯಿಯನ್ನ ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮೇಡಂ ಮೇಡಂ ಅಂತ ಕರೆದಿದ್ದಾನೆ. ಆಕೆ ಹಿಂದೆ ತಿರುಗಿ ನೋಡಿದಾಗ ಪ್ಯಾಂಚ್ ಬಿಚ್ಚಿ ಹಸ್ತಮೈಥುನ ಮಾಡಿಕೊಳ್ತಿದ್ದ. ಆರೋಪಿ ಕಂದುಬಟ್ಟೆ ಧರಿಸಿದ್ದ ಎನ್ನಲಾಗಿದೆ. ಇದನ್ನೂ ಓದಿ: 76ರ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ – ಹುಬ್ಬಳ್ಳಿಯಲ್ಲಿ ಫಸ್ಟ್ ಟೈಂ ಬರೋಬ್ಬರಿ 1 ಕೋಟಿ ಪಂಗನಾಮ!
ಬಳಿಕ ಕಾಮುಕನ ವಿರುದ್ಧ ಮಹಿಳೆ ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯ ದೂರಿನಡಿ ಲೈಂಗಿಕ ಕಿರುಕುಳ ನೀಡಿದ ಮತ್ತು ಅಶ್ಲೀಲ ಕೃತ್ಯ ನಡೆಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸದ್ಯ ಪೊಲೀಸರು ಕಾಮುಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಿಂದೂ ದೇವತೆಗಳ ವಿರುದ್ಧ ಬಾಲಕಿಯಿಂದ ಅವಹೇಳನಕಾರಿ ಪೋಸ್ಟ್; ಪೋಷಕರು ಜೈಲಿಗೆ


