ಬಳ್ಳಾರಿ: ಚುನಾವಣೆ ಹೊಸ್ತಿಲ್ಲೇ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಪ್ರಚಾರದಿಂದ ಹಿಂದೆ ಸರಿದಿದ್ದ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ವಿರುದ್ಧ ಹೊಸ ದೂರು ದಾಖಲಾಗಿದೆ. ಇದನ್ನೂ ಓದಿ: ಸ್ನೇಹಿತರ ಗೆಲುವಿಗಾಗಿ ಫೀಲ್ಡ್ ಗಿಳಿದ ಜನಾರ್ದನ ರೆಡ್ಡಿಗೆ ಬ್ರೇಕ್!
ಮಾಜಿ ಕಾರ್ಪೋರೇಟರ್ ಪದ್ಮಾವತಿ ಯಾದವ್ ಕೊಲೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಹೆಸರು ತಳಕು ಹಾಕಿಕೊಂಡಿದ್ದು, ಕೊಲೆ ಪ್ರಕರಣದಲ್ಲಿ ರೆಡ್ಡಿ ಕೈವಾಡವಿದೆ. ಸಾಕ್ಷಿ ತಿದ್ದುಪಡಿ ಮಾಡಿರುವ ಅನುಮಾನವಿದೆ. ಅಂದಿನ ಕೆಲ ಪೊಲೀಸ್ ಅಧಿಕಾರಿಗಳು ಕೂಡ ಕೊಲೆ ಪ್ರಕರಣ ಸಿ ರಿಪೋರ್ಟ್ ಹಾಕಲು ಕುಮ್ಮಕ್ಕು ನೀಡಿದ್ದಾರೆ. ಅಂದಿನ ಡಿಜಿ ಶಂಕರ್ ಬಿದರಿ ಮತ್ತು ತಂಡ ಸಿ ರಿಪೋರ್ಟ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ. ಇದನ್ನೂ ಓದಿ: ಚುನಾವಣಾ ಆಯೋಗದಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸಂಕಷ್ಟ!
Advertisement
Advertisement
ಈ ಕುರಿತು ಪದ್ಮಾವತಿ ಯಾದವ್ ಸಹೋದರ ಸುಬ್ಬರಾಯುಡು ಏ.30 ರಂದು ಬಳ್ಳಾರಿ ಎಸ್ಪಿ ಅರುಣ್ ರಂಗರಾಜನ್ ಅವರಿಗೆ ದೂರು ಸಲ್ಲಿಸಿದ್ದಾರೆ. 2010 ಫೆ.4 ರಂದು ಪದ್ಮಾವತಿ ಯಾದವ್ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕೊಲೆ ಆರೋಪ ಕೇಳಿ ಬಂದಿತ್ತು. 2016 ಸೆಪ್ಟೆಂಬರ್ ನಲ್ಲಿ ಬಳ್ಳಾರಿ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳು ಸಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನೂ ಓದಿ: ಹೈಕಮಾಂಡ್ ಸೂಚನೆ ಬೆನ್ನಲ್ಲೇ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ರೆಡ್ಡಿ!
Advertisement
ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಈ ಪ್ರಕರಣಕ್ಕೆ ರೆಡ್ಡಿ ಹೆಸರು ತಳಕು ಹಾಕಿಕೊಂಡಿದ್ದು, ಇದೀಗ ಈ ಹೊಸ ಪತ್ರ ತೀವ್ರ ಕುತೂಹಲ ಕೆರಳಿಸಿದೆ.