ಹಿಂಸೆಗೆ ಪ್ರಚೋದನೆ – ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು

Public TV
1 Min Read
Annamalai

ಚೆನೈ: ತಮಿಳುನಾಡಿನಲ್ಲಿ ನಡೆಯುತ್ತಿರುವ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗೆ ಆಡಳಿತ ಪಕ್ಷ ಡಿಎಂಕೆ ಮತ್ತು ಸಿಎಂ ಸ್ಟಾಲಿನ್ (Stalin) ಕಾರಣ ಎಂದು ಆರೋಪಿಸಿದ್ದ ರಾಜ್ಯ ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ವಿರುದ್ಧ ಸೈಬರ್ ಪೊಲೀಸರು (Cyber Crime Division) ಪ್ರಕರಣ ದಾಖಲಿಸಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ಕೊಟ್ಟಿದ್ದಾರೆಂದು ಪೊಲೀಸರು ಕೇಸ್ ಹಾಕಿದ್ದಾರೆ.

ಇತ್ತೀಚೆಗೆ ಟ್ವಿಟರ್‌ನಲ್ಲಿ ಹೇಳಿಕೆ ಪ್ರಕಟಿಸಿದ್ದ ಅಣ್ಣಾಮಲೈ, ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತವಾಗಿದ್ದಾರೆ. ಆದರೆ ಅವರ ಮೇಲೆ ದ್ವೇಷ ಹೆಚ್ಚಾಗಲು ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷದ ನಾಯಕರು ಕಾರಣ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಲಕ್ಷಾಂತರ ಮೌಲ್ಯದ ಬ್ರಾಂಡೆಡ್ ಮದ್ಯ ವಶ – ಆರೋಪಿ ಬಂಧನ

MK STALIN AND ANNAMALAI

ತಮಿಳುನಾಡಿನಲ್ಲಿ (Tamilnadu) ಬಿಹಾರದಿಂದ ವಲಸೆ ಬಂದ ಜನರ ಮೇಲೆ ಹಲ್ಲೆ, ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಹರಿದಾಡುತ್ತಿದ್ದ ಸುದ್ದಿಯನ್ನು ಅಣ್ಣಾಮಲೈ ವಿರೋಧಿಸಿದ್ದರು. ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು. ಉತ್ತರ ಬಾರತೀಯರನ್ನು ಪ್ರತ್ಯೇಕಿಸುವುದು ಮತ್ತು ದ್ವೇಷಿಸುವ ಕೆಲಸವನ್ನು ತಮಿಳರು ಮಾಡುವುದಿಲ್ಲ. ಅಂತಹ ಕೃತ್ಯಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಅಣ್ಣಾಮಲೈ ಸಮರ್ಥಿಸಿಕೊಂಡಿದ್ದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದ್ದ ಅಣ್ಣಾಮಲೈ, ಡಿಎಂಕೆ (DMK) ಸಂಸದರು ಮತ್ತು ಸಚಿವರು “ಉತ್ತರ ಭಾರತೀಯರನ್ನು ಪಾನಿಪುರಿ ವಾಲಾ”ಗಳು ಎಂದು ಹೀಯಾಳಿಸಿದ್ದಾರೆ. ಅವರನ್ನು ಕೆಟ್ಟ ಪದಗಳಿಂದ ನಿಂದಿಸಿ, ತಮ್ಮ ನಾಡಿಗೆ ವಾಪಸ್ ಹೋಗುವಂತೆ ವಲಸಿಗರನ್ನು ಒತ್ತಾಯಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಬಿಹಾರದ (Bihar) ವಲಸೆ ಕಾರ್ಮಿಕರ ನಡುವೆ ತಿರುಪ್ಪೂರ್‍ನಲ್ಲಿ ನಡೆದ ಗಲಾಟೆ ಹಾಗೂ ಕೊಯಮತ್ತೂರಿನಲ್ಲಿ (Coimbatore) ಸ್ಥಳೀಯರ ನಡುವೆ ನಡೆದ ಘರ್ಷಣೆಯ ವೀಡಿಯೋ ತುಣುಕನ್ನು ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಡಿಜಿಪಿ ಶೈಲೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 10ನೇ ಕ್ಲಾಸ್ ವಿದ್ಯಾರ್ಥಿಯೊಂದಿಗೆ 26 ವರ್ಷದ ಶಿಕ್ಷಕಿ ಪರಾರಿ

Share This Article
Leave a Comment

Leave a Reply

Your email address will not be published. Required fields are marked *