ಚಿಕ್ಕೋಡಿ: ಮಹಾನವಮಿ ಹಿನ್ನೆಲೆಯಲ್ಲಿ ದುರ್ಗಾಮಾತಾ ದೌಡ್ ಮೆರವಣಿಗೆ ಹೋಗುತ್ತಿರುವಾಗ ಮಸೀದಿ (Mosque) ಮೇಲೆ ಭಗವಾಧ್ವಜ ಹಾರಿಸಿದ ಫೋಟೋ (Photo) ಎಡಿಟ್ ಮಾಡಿ ಅದನ್ನು ಮೊಬೈಲ್‍ನಲ್ಲಿ (Mobile) ಸ್ಟೇಟಸ್ ಹಾಕಿದ್ದ 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಮಂಗಳವಾರ ದುರ್ಗಾಮಾತಾ ದೌಡ್ ಹೋಗುತ್ತಿರುವಾಗ ಅಲ್ಲಿನ ಪ್ರಾರ್ಥನಾ ಮಂದಿರದ ಹತ್ತಿರ ಕೆಲವರು ಫೋಟೋ ತೆಗೆದು ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಫೋಟೋ ಎಡಿಟ್ ಮಾಡಿ ಮೊಬೈಲ್‍ನಲ್ಲಿ ಸ್ಟೇಟಸ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ (Police Station) ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement
Advertisement
ಅನ್ಯ ಧರ್ಮದವರ ನಿಂದನೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಕುರಿತು ಕೆಲಕಾಲ ಕರೋಶಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ – 9 ಜನರ ವಿರುದ್ಧ ಎಫ್‌ಐಆರ್