LatestMain PostUncategorized

ಮೈಸೂರಿನಲ್ಲಿ ಪುಡಿ ರೌಡಿಗಳ ದಾಂಧಲೆ – ಕಾರ್ಪೋರೇಟರ್ ಮೇಲೆ ಐವರಿಂದ ಹಲ್ಲೆ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ತವರು ಮೈಸೂರಲ್ಲಿ ಪುಡಿರೌಡಿಗಳು ದಾಂಧಲೆ ನಡೆಸಿದ್ದಾರೆ. ಜಿಲ್ಲೆಯ ಕಾರ್ಪೋರೇಟರ್ ಪ್ರಶಾಂತ್ ಎಂಬವರ ಮೇಲೆ ಐವರು ಹಲ್ಲೆ ನಡೆಸಿದ್ದಾರೆ.

ಮೈಸೂರಿನ ಶಿವರಾಂಪೇಟೆ ಬಳಿ ತಡರಾತ್ರಿ ಈ ಘಟನೆ ನಡೆದಿದೆ. ಶಿವರಾಂಪೇಟೆಯ ತ್ರಿಪುರ ಭೈರವಿ ಶಾಖಾ ಮಠದ ದೇವಸ್ಥಾನಕ್ಕೆ ಹೋಗಿದ್ದಾಗ ಪ್ರಶಾಂತ್ ಮೇಲೆ ಹಲ್ಲೆ ನಡೆಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬೋಡಾ ರಾಮ್, ಬಾಬು ಲಾಲ್, ರಮೇಶ್, ವಿಕ್ರಮ್ ಕೈಲಾಸ್ ಹಾಗೂ ಜಗನ್ ಲಾಲ್ ವಿರುದ್ಧ ಪ್ರಕರಣ ದಾಖಲಿಸಿಗಿದ್ದು, ಬಾಬು ಲಾಲ್ ಮತ್ತು ಕೈಲಾಸ್‍ನನ್ನು ವಶಕ್ಕೆ ಪಡೆದಿದ್ದಾರೆ.

ಬಾಬುಲಾಲ್ ಮಠದ ಆವರಣದಲ್ಲಿ ಅನಧಿಕೃತ ಗೋಡೌನ್ ಮಾಡಿಕೊಂಡಿದ್ದ. ಮಠದ ಗೋಡೆಯನ್ನು ಪಾಲಿಕೆ ತೆರವುಗೊಳಿಸಿದ್ದು, ಈ ವಿಚಾರವಾಗಿ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *