ಮುಂಬೈ: ಶೀಘ್ರದಲ್ಲೇ ಎಲ್ಲಾ ಬ್ಯಾಂಕ್‍ಗಳ ಎಟಿಎಂಗಳಲ್ಲಿ ಕಾರ್ಡ್ ಬಳಸದೆ ನಗದು ಹಿಂಪಡೆಯುವ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜಾರಿಗೆ ತರಲು ಮುಂದಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
Advertisement
ಮುಂಬೈಯಲ್ಲಿ ಹಣಕಾಸು ನೀತಿ ಪರಾಮರ್ಶೆಯಲ್ಲಿ ವಿತ್ತೀಯ ನೀತಿಯ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಹಂಚಿಕೊಂಡ ಅವರು, ಪ್ರಸ್ತುತ ಎಟಿಎಂ ಮೂಲಕ ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವು ಕೆಲವು ಬ್ಯಾಂಕ್‍ಗಳಿಗೆ ಮಾತ್ರ ಸೀಮಿತವಾಗಿದೆ. ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್‍ಗಳು ಮತ್ತು ಎಟಿಎಂ ನೆಟ್‍ವರ್ಕ್‍ಗಳಲ್ಲಿ ಕಾರ್ಡ್ ರಹಿತವಾಗಿ ಹಣ ಹಿಂಪಡೆಯುವ ಸೌಲಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಈಗಾಗಲೇ ಚರ್ಚೆ ನಡೆಸಲಾಗಿದೆ. ಇದರಿಂದಾಗಿ ಕಾರ್ಡ್ ರಹಿತವಾಗಿ ವ್ಯವಹಾರ ನಡೆಸುವ ಮೂಲಕ ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಮುಂತಾದ ವಂಚನೆಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ನಡುವೆ ಸರ್ಕಾರಗಳು ನ್ಯಾಯಾಂಗವನ್ನು ನಿಂದಿಸುವ ಪ್ರವೃತ್ತಿ ಆರಂಭಿಸಿವೆ: ಸಿಜೆಐ ಆಕ್ರೋಶ
Advertisement
Advertisement
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಬಳಕೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆದರೆ ಅಂತಹ ವಹಿವಾಟುಗಳು ಎಟಿಎಂ ನೆಟ್‍ವರ್ಕ್‍ಗಳ ಮೂಲಕ ನಡೆಯುತ್ತದೆ ಎಂದು ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆ ತಿಳಿಸಿದೆ. ಎನ್‍ಪಿಸಿಐ, ಎಟಿಎಂ ನೆಟ್‍ವರ್ಕ್‍ಗಳು ಮತ್ತು ಬ್ಯಾಂಕ್‍ಗಳಿಗೆ ಶೀಘ್ರದಲ್ಲೇ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ
Advertisement
ಶುಕ್ರವಾರ ಸತತ 11ನೇ ಬಾರಿಗೆ ರೆಪೋ ದರವನ್ನು ಶೇ. 4ರಷ್ಟು ಬದಲಾಯಿಸದೇ ಇಡಲು ನಿರ್ಧರಿಸಿದೆ. ರಿವರ್ಸ್ ರೆಪೋ ದರವನ್ನು ಕೂಡ ಯಥಾಸ್ಥಿತಿಯಲ್ಲಿ ಶೇ. 3.35ರಲ್ಲಿ ಇರಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2022-23ಕ್ಕೆ ಇದು ಮೊದಲ ದ್ವೈಮಾಸಿಕ ಹಣಕಾಸು ನೀತಿಯಾಗಿದೆ. ಆರ್ಥಿಕತೆಯು ಹೊಸ ಮತ್ತು ಬೃಹತ್ ಸವಾಲುಗಳನ್ನು ಎದುರಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ-ಉಕ್ರೇನ್ ಸಂಘರ್ಷ ಜಾಗತಿಕ ಆರ್ಥಿಕತೆಯನ್ನು ಹಳಿತಪ್ಪಿಸಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತಲೆದೋರಲಿದೆ: ರಾಹುಲ್ ಗಾಂಧಿ
Card-less cash withdrawal to be made available at all ATMs: RBI
Read @ANI Story | https://t.co/EgThyVceMw
#RBI #ATM #CardlessWithdrawl pic.twitter.com/SeCl5pv8kG
— ANI Digital (@ani_digital) April 8, 2022
ರೆಪೋ ದರವು ಕೇಂದ್ರೀಯ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕ್‍ಗಳಿಗೆ ನೀಡುವ ಸಾಲಕ್ಕೆ ಪಡೆಯುವ ಬಡ್ಡಿಯಾಗಿದೆ. ರಿವರ್ಸ್ ರೆಪೋ ದರವು ವಾಣಿಜ್ಯ ಬ್ಯಾಂಕ್‍ಗಳಿಂದ ಆರ್‌ಬಿಐ ತಾನು ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿಯಾಗಿದೆ. ಆರ್‌ಬಿಐ ರೆಪೋ ದರವನ್ನು ಮೇ 2020ರಿಂದ ದಾಖಲೆಯ ಕನಿಷ್ಠ ಮಟ್ಟದಲ್ಲಿ ಇರಿಸಿದೆ.