ಬೆಂಗಳೂರು: ಪಾರ್ಕಿಂಗ್ ಸಮಸ್ಯೆ (Parking Problem) ಎಂದು ಹೇಳಿ ಬೆಂಗಳೂರಿನಲ್ಲಿ (Bengaluru) ನಿಮ್ಮ ಕಾರನ್ನು ಹೊರಗಡೆ ನಿಲ್ಲುಸುತ್ತಿದ್ದೀರಾ? ಹಾಗಾದ್ರೆ ಎಚ್ಚರವಾಗಿರಿ. ನಿಮ್ಮ ಕಾರು (Car) ನಿಂತಲ್ಲೇ ನಿಂತಿರುತ್ತದೆ ಆದರೆ ಕಾರಿನ ಚಕ್ರ ಮಾತ್ರ ಮಾಯವಾಗಿರುತ್ತದೆ.
ಮನೆ ಮುಂದೆ ನಿಲ್ಲಿಸಿರುವ ಕಾರಿನ ಟಯರ್ ಕದಿಯುವ ಗ್ಯಾಂಗ್ ಈಗ ನಗರದಲ್ಲಿ ಹುಟ್ಟಿಕೊಂಡಿದೆ. ರಾತ್ರಿ ವೇಳೆ ಸ್ಕೂಟಿಯಲ್ಲಿ ಬರುವ ಕಳ್ಳರು ಟಯರ್ (Car Tyre) ಕದ್ದು ಪರಾರಿಯಾಗುತ್ತಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಬಲಿ – ಗೃಹ ಸಚಿವರಿಗೆ ಮಾಂಗಲ್ಯಸರ ಪೋಸ್ಟ್ ಮಾಡಿದ ಮೃತನ ಪತ್ನಿ
Advertisement
ಒಬ್ಬ ಟಯರ್ ಬಿಚ್ಚಿದರೆ ಇನ್ನೊಬ್ಬ ಅಕ್ಕ ಪಕ್ಕ ಯಾರು ಬರುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿರುತ್ತಾನೆ. ಈಗಾಗಲೇ ಜಯನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
Advertisement
ಕಳ್ಳರು ಟಯರ್ ಕದ್ದು ಪರಾರಿ ಆಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರು ಬಂದ ಕೆಲ ಕ್ಷಣದಲ್ಲಿ ಅಲ್ಲಿದ್ದ ಬೀದಿ ನಾಯಿಗಳು ಸ್ಥಳಕ್ಕೆ ಬಂದು ಬೊಗಳಲು ಆರಂಭಿಸಿದ್ದವು. ರಾತ್ರಿಯ ವೇಳೆ ಎಲ್ಲರೂ ನಿದ್ದೆಯಲ್ಲಿದ್ದ ಕಾರಣ ಯಾರಿಗೂ ವಿಚಾರ ಗೊತ್ತಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಈಗ ಬಲೆ ಬೀಸಿದ್ದಾರೆ.