ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಹೊಳೆಗೆ ಬಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಕೂಡ ಪತ್ತೆಯಾಗಿದೆ.
Advertisement
ಸೇತುವೆಯಿಂದ 400 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಮೃತದೇಹದ ಅಂಗಿ ಕಳಚಿದ್ದು ಪ್ಯಾಂಟ್ ಧರಿಸಿದ ರೀತಿ ಪತ್ತೆಯಾಗಿದೆ. ಹೊಳೆಗೆ ಬಿದ್ದಿರುವ ಮರದಲ್ಲಿ ಕವುಚಿ ಸಿಲುಕಿಕೊಂಡಿದೆ. ಮಳೆ ಕಡಿಮೆಯಾಗಿ ನೀರು ಇಳಿಕೆಯಾದರಿಂದ ಸ್ಥಳೀಯರಿಗೆ ಮೃತದೇಹ ಕಾಣಿಸಿದೆ. ಪೊಲೀಸರು ಆಗಮಿಸಿದ ಬಳಿಕ ಮೃತದೇಹ ಮೇಲಕೆತ್ತಲು ನಿರ್ಧಾರ ಮಾಡಲಾಗಿದೆ. ಇದನ್ನೂ ಓದಿ: ಹೊಳೆಗೆ ಕಾರು ಉರುಳಿದ ಪ್ರಕರಣಕ್ಕೆ ಟ್ವಿಸ್ಟ್- ಆಕ್ಸಿಡೆಂಟ್ ಆಗೋ 4 ನಿಮಿಷ ಮೊದಲೇ ಕರೆ ಮಾಡಿದ್ದ ಯುವಕರು..!
Advertisement
Advertisement
ಜು.10ರ ರಾತ್ರಿ ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಉರುಳಿತ್ತು. ಘಟನೆಯಂದು ಕಾರನ್ನು ಸ್ಥಳೀಯರು ಹಾಗೂ ಮ,ಉಳುಗುತಜ್ಞರ ಸಜಹಾಯದಿಂದ ಮೇಲಕ್ಕೆತ್ತಲಾಗಿತ್ತು. ಆದರೆ ನಾಪತ್ತೆಯಾಗಿದ್ದ ವಿಟ್ಲದ ಧನುಷ್(25)ಧನುಷ್ (24) ಪತ್ತೆಯಾಗಿರಲಿಲ್ಲ. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.