ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕಾರು (Car) ನಾಲೆಗೆ ಬಿದ್ದ ಪರಿಣಾಮ ಐವರು ಜಲಸಮಾಧಿ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಬನಘಟ್ಟ ಬಳಿಯ ವಿಸಿ ನಾಲೆಯಲ್ಲಿ (VC Canal) ದುರ್ಘಟನೆ ಸಂಭವಿಸಿದೆ. ಭದ್ರವಾತಿ ನಿವಾಸಿಗಳಾದ ಚಂದ್ರಪ್ಪ (61), ಕೃಷ್ಣಪ್ಪ (60), ಧನಂಜಯ (55), ಬಾಬು ಹಾಗೂ ಜಯಣ್ಣ ಸಾವನ್ನಪ್ಪಿದ್ದಾರೆ. ಮೃತರು ಇಂಡಿಕಾ ಕಾರಿನಲ್ಲಿ ಮಂಗಳವಾರ ಸಂಜೆ 4:45 ರ ವೇಳೆಯಲ್ಲಿ ಮೈಸೂರಿನಿಂದ (Mysuru) ಭದ್ರಾವತಿ (Bhadravati) ಕಡೆಗೆ ಪ್ರಯಾಣ ಬೆಳೆಸಿದ್ದರು. ಬನಘಟ್ಟದ ವಿಸಿ ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿದ ಕಾರು ನೇರವಾಗಿ ನಾಲೆಗೆ ಉರುಳಿಬಿದ್ದಿದೆ. ಇದನ್ನೂ ಓದಿ: ರೈಲ್ವೆ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವು
Advertisement
Advertisement
ಕಿರಿದಾದ ರಸ್ತೆ ಹಾಗೂ ತಿರುವಿದ್ದ ಕಾರಣ ಚಾಲಕ ಕೂಡ ಕಾರು ನಿಯಂತ್ರಿಸಲು ಸಾಧ್ಯವಾಗಿಲ್ಲ. ಅಲ್ಲದೇ ಕೆಆರ್‌ಎಸ್ (KRS) ಅಣೆಕಟ್ಟಿನಿಂದ ನಾಲೆಗೆ ನೀರು ಬಿಟ್ಟಿರುವುದರಿಂದ ನಾಲೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಪ್ರತ್ಯಕ್ಷದರ್ಶಿಗಳ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯ ಈಜುಗಾರರ ನೆರವಿನಿಂದ ಕಾರು ಹೊರತೆಗೆದಿದ್ದಾರೆ. ಇದನ್ನೂ ಓದಿ: ಕಾರು ಅಪಘಾತಕ್ಕೀಡಾಗಿ ಕೇಂದ್ರ ಸಚಿವರಿಗೆ ಗಾಯ, ಶಿಕ್ಷಕ ಸಾವು
Advertisement
ಕಾರು ಹೊರ ತೆಗೆಯುವ ಸಂದರ್ಭ ಮೃತನೋರ್ವನ ಮೊಬೈಲ್ ರಿಂಗ್ ಆಗಿದ್ದು, ಕರೆ ಸ್ವೀಕರಿಸಿದ ಸಿಬ್ಬಂದಿ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಮೃತದೇಹಗಳನ್ನು ಪಾಂಡವಪುರ (Pandavapura) ತಾಲೂಕು ಆಸ್ಪತ್ರೆ ಶವಗಾರಕ್ಕೆ ರವಾನಿಸಿಲಾಗಿದೆ. ಶವಗಾರದ ಬಳಿ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಮನಸ್ಸೋ ಇಚ್ಛೆ 58 ಬಾರಿ ಇರಿದು ಕೊಂದ್ರು!
Advertisement
ವಿಸಿ ನಾಲೆ ಬಳಿ ಕಳೆದ ಮೂರು ತಿಂಗಳಲ್ಲಿ ನಡೆದ ಮೂರನೇ ದುರಂತ ಇದಾಗಿದ್ದು, ಒಟ್ಟು ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ಟ್ಯಾಂಕರ್ ಒಂದು ಉರುಳಿಬಿದ್ದಿತ್ತು. ಅದೃಷ್ಟವಶಾತ್ ನೀರಿಲ್ಲದ ಕಾರಣ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ಆಗಲೇ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು ಸೂಚನಾ ಫಲಕ ಅಳವಡಿಸದೆ, ಬ್ಯಾರಿಕೇಡ್ ಹಾಕದೇ ಇರುವುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೇಮಕ್ಕೆ ಕುಟುಂಬಸ್ಥರ ವಿರೋಧ – ಪ್ರೇಮಿಯೊಂದಿಗೆ ಬೆಂಕಿ ಹಚ್ಚಿಕೊಂಡು ವಿವಾಹಿತೆ ಆತ್ಮಹತ್ಯೆ