ಹಾವೇರಿ: ವೇಗವಾಗಿ ಬಂದು ಆಟೋಗೆ (Auto) ಕಾರು (Car) ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆಯ ಪಕ್ಕಕ್ಕೆ ನಿಂತಿದ್ದ 5 ವರ್ಷದ ಬಾಲಕ ಮೃತಪಟ್ಟಿದ್ದು, 6 ಕುರಿಗಳು ಸಾವನ್ನಪ್ಪಿದ ಘಟನೆ ಹಾವೇರಿ (Haveri) ನಗರದ ಹೊರವಲಯದಲ್ಲಿರೋ ಆಯುರ್ವೇದ ಕಾಲೇಜು ಬಳಿ ನಡೆದಿದೆ.
ಮೃತ್ಯುಂಜಯ ವಿಠಲ ನರಾಟೆ (5) ಮೃತ ಮಗು. ಕಾರುಚಾಲಕ ವೇಗವಾಗಿ ಬಂದು ಆಟೋಗೆ ಡಿಕ್ಕಿ ಹೊಡೆದು ಕುರಿ ಮತ್ತು 5 ವರ್ಷದ ಮಗುವಿಗೆ ಡಿಕ್ಕಿ ಹೊಡೆದಿದ್ದರಿಂದ, ಮಗು ಸಾವನ್ನಪ್ಪಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತಪಟ್ಟಿಯಿಂದ 1 ಕೋಟಿ ಮತದಾರರಿಗೆ ಶಾಕ್
ಸದ್ಯ ಅಪಘಾತವೆಸಗಿದ ಆರೋಪಿ ಸುನೀಲ್ ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಘಟನೆ ಸಂಬಂಧ ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪಿಒಕೆ ಶಿಖರದಲ್ಲಿ ಹಿಮಪಾತ; ಖ್ಯಾತ ಪರ್ವತಾರೋಹಿ ‘Nims’ Purja ದುರಂತ ಅಂತ್ಯ
