ರಾಯಚೂರು: ಮಾನ್ವಿ ತಾಲೂಕಿನ ಸಿರವಾರ ಬಳಿ ಮಂಗಳವಾರ ರಾತ್ರಿ ಸ್ವಿಫ್ಟ್ ಕಾರು ಕಾಲುವೆಗೆ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ತಂದೆ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದು ದೇವದುರ್ಗ ತಾಲೂಕಿನ ಅರಕೇರಾದ ರಾಮಚಂದ್ರ ಎಂಬವರಿಗೆ ಸೇರಿದ ಕಾರು ಅಂತ ಗುರುತಿಸಲಾಗಿದೆ. ರಾಮಚಂದ್ರ ಹಾಗೂ ಅವರ ಪುತ್ರ ರಾತ್ರಿ ಸಿರವಾರದಿಂದ ಅರಕೇರಾಕ್ಕೆ ತೆರಳುತ್ತಿದ್ದ ವೇಳೆ ಕಾರಿನ ನಿಯಂತ್ರಣ ತಪ್ಪಿ ತುಂಗಭದ್ರಾ ಎಡದಂಡೆ ಕಾಲುವೆಗೆ ಉರುಳಿದೆ.
ಕಾರು ಕಾಲುವೆ ಉರುಳಿದ್ದರಿಂದ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ತಂದೆ ಮಗನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟ್ರ್ಯಾಕ್ಟರ್ ಪಲ್ಟಿ ಸ್ಥಳದಲ್ಲಿಯೇ ಇಬ್ಬರ ದುರ್ಮರಣ- 6 ಮಂದಿಗೆ ಗಂಭೀರ ಗಾಯ https://t.co/sGFjmhu4hJ#vijayapur #Accident pic.twitter.com/r4L4XY6KVx
— PublicTV (@publictvnews) November 8, 2017