ನನ್ನ ಕೆಲಸದ ಟೈಂ ಮುಗಿದಿದೆ ಅಂದಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಥಳಿತ!

Public TV
1 Min Read
Chikkamagaluru

ಚಿಕ್ಕಮಗಳೂರು: ನನ್ನ ಕೆಲಸದ ಸಮಯ ಮುಗಿದಿದೆ, ಬೇರೆಯವರು ಪೆಟ್ರೋಲ್ (Petrol) ಹಾಕುತ್ತಾರೆ ಎಂದಿದ್ದಕ್ಕೆ ವ್ಯಕ್ತಿಯೊಬ್ಬ ಬಂಕ್ ಸಿಬ್ಬಂದಿಗೆ ಅಟ್ಟಾಡಿಸಿ ಹೊಡೆದ ಘಟನೆ ಮೂಡಿಗೆರೆಯ (Mudigere) ಜನ್ನಾಪುರದಲ್ಲಿ ನಡೆದಿದೆ.

ಬಂಕ್ ಸಿಬ್ಬಂದಿ ಕೆಲಸ ಮುಗಿಸಿ ಹೊರಟಿದ್ದ ವೇಳೆ ಕಾರಿನಲ್ಲಿ (Car) ಬಂದ ವ್ಯಕ್ತಿ ಪೆಟ್ರೋಲ್ ಹಾಕುವಂತೆ ಹೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಕೆಲಸದ ಸಮಯ ಮುಗಿದಿದೆ. ಇನ್ನೊಬ್ಬರು ಪೆಟ್ರೋಲ್ ಹಾಕುತ್ತಾರೆ ಎಂದಿದ್ದಾರೆ. ಈ ವಿಚಾರಕ್ಕೆ ಕಾರಿನಲ್ಲಿ ಬಂದಿದ್ದ ಮಧು ಹುರುಡಿ ಎಂಬಾತ ಬಂಕ್ ಮ್ಯಾನೇಜರ್ ಸೇರಿದಂತೆ ನಾಲ್ವರ ಮೇಲೆ ಬ್ಯಾಟ್‍ನಲ್ಲಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ನಾಲ್ವರು ತಪ್ಪಿಸಿಕೊಳ್ಳಲು ಓಡಿಹೋಗುತ್ತಿರುವುದು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ತುಮಕೂರಿನಲ್ಲಿ ಸರಣಿ ಅಪಘಾತ – ಇಬ್ಬರು ಸಾವು, ಹಲವರಿಗೆ ಗಾಯ

ಘಟನೆ ಕುರಿತು ಗೋಣಿಬೀಡು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೊಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಆತ್ಮೀಯ ಸ್ನೇಹಿತನನ್ನೇ ಕೊಂದ ಕಿರಾತಕ!

Web Stories

Share This Article