ಬೆಂಗಳೂರು/ರಾಮನಗರ: ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಎಂಬಿಎ ವಿದ್ಯಾರ್ಥಿಗಳು (MBA Students) ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರದ (Bengaluru Rural) ಕಗ್ಗಲೀಪುರ ಪೊಲೀಸ್ ಠಾಣಾ (Kaggalipura Police Station) ವ್ಯಾಪ್ತಿಯ ಸಾಲುಹುಣಸೆ ಗ್ರಾಮದ ಬಳಿ ನಡೆದಿದೆ.
ಮುಖೇಶ್ (22) ಹಾಗೂ ಆಕಾಶ್ (22) ಮೃತ ವಿದ್ಯಾರ್ಥಿಗಳು. ಮೃತರು ಮೂಲತಃ ತಮಿಳುನಾಡಿನವರಾಗಿದ್ದು, ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ಓದುತ್ತಿದ್ದರು. ಶನಿವಾರ ತಡರಾತ್ರಿ ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಬೆಂಗಳೂರು ಕಡೆಯಿಂದ ಕನಕಪುರದ ಕಡೆಗೆ ತೆರಳುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿ ಮುಂದುವರಿದ ದುರಸ್ತಿ ಕಾರ್ಯ
ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್ ನಾರಾಯಣ್ ತೀವ್ರ ವಾಗ್ದಾಳಿ