ಚಿಕ್ಕಬಳ್ಳಾಪುರ: ಕಾರಿಗೆ ಖಾಸಗಿ ಬಸ್‌ವೊಂದು ಡಿಕ್ಕಿಯಾದ ಪರಿಣಾಮ ಕಾರು ಹೊತ್ತಿ ಉರಿದು ಇಬ್ಬರು ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಗೋಪಲ್ಲಿ ಗೇಟ್ ಬಳಿ ನಡೆದಿದೆ.
ಕಾರು ಚಾಲಕ ಧನಂಜಯ್ (34) ಹಾಗೂ ತಾಯಿ ಕಲಾವತಿ (54) ಮೃತರು. ಇನ್ನೂ ಕಾರಿನಲ್ಲಿ 5 ಮಂದಿ ಪ್ರಯಾಣ ಮಾಡುತ್ತಿದ್ದು ಮೂರು ವರ್ಷದ ಮಾನ್ವಿತ ಹಾಗೂ ಶೋಭಾ ಸೇರಿದಂತೆ ಉಮಾದೇವಿ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಂತಾಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: Ramanagara| ಊರಹಬ್ಬದ ದಿನವೇ ಗ್ರಾಮಕ್ಕೆ 4 ಕಾಡಾನೆಗಳ ಎಂಟ್ರಿ – ದಿಕ್ಕಾಪಾಲಾಗಿ ಓಡಿದ ಜನ
Advertisement
Advertisement
ಇನ್ನೂ ಬಸ್ ಸಹ ರಸ್ತೆ ಬದಿ ಹಳ್ಳದಲ್ಲಿ ಪಲ್ಟಿಯಾಗಿ ವಾಲಿ ನಿಂತಿದ್ದು ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ. ಗಾಯಾಳುಗಳನ್ನ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಕಾರಿನ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಕುಲಭೂಷಣ್ ಜಾಧವ್ ಕಿಡ್ನ್ಯಾಪ್‌ಗೆ ಸಹಕರಿಸಿದ್ದ ಪಾಕ್ ‘ವಿದ್ವಾಂಸ’ ಗುಂಡೇಟಿಗೆ ಬಲಿ
Advertisement